
ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN)
FLN- ಕಲಿಕಾ ಫಲಗಳ ಪಟ್ಟಿ (17 LAKSHYAS)
| ಕ್ರ ಸಂ | ಕಲಿಕಾ ಫಲಗಳ ಸಂಖ್ಯೆ | ಕಲಿಕಾ ಫಲಗಳ ವಿವರ |
|---|---|---|
| ಬುನಾದಿ ಸಾಕ್ಷರತೆಯ ಕಲಿಕಾಫಲಗಳು (09) | ||
| 1 | 1-O | ತರಗತಿಯಲ್ಲಿ ಲಭ್ಯವಿರುವ ಮುದ್ರಿತ ಪಠ್ಯಗಳ ಕುರಿತು ಸಂಭಾಷಣೆ ಮತ್ತು ಮಾತುಕತೆಯ ನಡೆಸುವರು |
| 2 | 2-O | ಪ್ರಶ್ನೆಯನ್ನು ಕೇಳುವ ಮೂಲಕ ಸಂಭಾಷಣೆಯಲ್ಲಿ ತೊಡಗುವರು ಮತ್ತು ಇತರರನ್ನು ಆಲಿಸುವರು. |
| 3 | 3-O | ಹಾಡುಗಳು/ ಕವನಗಳನ್ನು ಪಠಿಸುವರು |
| 4 | 4-O | ಕಥೆಗಳು /ಕವಿತೆಗಳು/ ಮುದ್ರಣ ಇತ್ಯಾದಿಗಳಲ್ಲಿ ಕಂಡುಬರುವ ಪರಿಚಿತ ಪದಗಳನ್ನು ಪುನರಾವರ್ತಿಸುವರು |
| 5 | 5-R | ಮಕ್ಕಳ ಸಾಹಿತ್ಯ/ ಪಠ್ಯಪುಸ್ತಕದಲ್ಲಿರುವ ಕಥೆಗಳನ್ನು ಓದುವರು ಮತ್ತು ವಿವರಿಸುವರು (ಕಥಿಸುವರು) / ಮತ್ತೆ ಹೇಳುವರು |
| 6 | 6-R | ಕೊಟ್ಟಿರುವ ಪದದ ಅಕ್ಷರಗಳಿಂದ ಅರ್ಥಗರ್ಭಿತ ಹೊಸ ಪದಗಳನ್ನು ರಚಿಸುವರು |
| 7 | 7-R | ವಯೋಮಾನಕ್ಕೆ ಸೂಕ್ತವಾದ 6 ರಿಂದ 8 ವಾಕ್ಯಗಳ ಸರಳ ಪದಗಳೊಂದಿಗಿನ ಪರಿಚಿತವಲ್ಲದ ಪಠ್ಯವನ್ನು ಗ್ರಹಿಸಿ, ಸ್ಪಷ್ಟತೆ ಮತ್ತು ನಿರರ್ಗಳತೆಯೊಂದಿಗೆ ಓದುವರು |
| 8 | 8-W | ಅವರ ತಿಳುವಳಿಕೆ ಮತ್ತು ಭಾವಗಳನ್ನು ವ್ಯಕ್ತಪಡಿಸಲು ಸರಿಯಾದ ಸಣ್ಣ / ಸರಳ ವಾಕ್ಯಗಳನ್ನು ರಚಿಸುವರು |
| 9 | 9-W | ಸ್ಪಷ್ಟ ಬರವಣಿಗೆಯೊಂದಿಗೆ 4 ರಿಂದ 5 ಸಣ್ಣ ವಾಕ್ಯಗಳನ್ನು ಬರೆಯುವರು |
| ಬುನಾದಿ ಸಂಖ್ಯಾಜ್ಞಾನದ ಕಲಿಕಾಫಲಗಳು (08) | ||
| 10 | 10-N | ವಸ್ತುಗಳನ್ನು ಎಣಿಸುವರು ಮತ್ತು 99 ರ ರವರೆಗಿನ ಸಂಖ್ಯಾರ್ಥವನ್ನು ಅಭಿವ್ಯಕ್ತಿಸುವರು/ ಹೇಳುವರು |
| 11 | 11-N | ವಿಭಿನ್ನ ಆಕಾರಗಳು ಮತ್ತು ಸಂಖ್ಯೆಗಳಿಂದ ಹೊಸ ವಿನ್ಯಾಸಗಳನ್ನು ರಚಿಸುವರು |
| 12 | 12-N | ದೈನಂದಿನ ಜೀವನದಲ್ಲಿ, 99 ರವರೆಗಿನ ಸಂಖ್ಯೆಗಳನ್ನು ಉಪಯೋಗಿಸಿ, ಒಟ್ಟು ಮೊತ್ತ 99 ಮೀರದಂತೆ ಸಂಕಲನ ಮತ್ತು ವ್ಯವಕಲನವನ್ನು ಮಾಡುವರು |
| 13 | 13-N | ಗುಣಾಕಾರವನ್ನು ಪುನರಾವರ್ತಿತ ಸಂಕಲನವನ್ನಾಗಿ ಮತ್ತು ವಿಭಜನೆಯನ್ನು(ಭಾಗಾಕಾರವನ್ನು)ಸಮಾನ ಹಂಚಿಕೆಯಾಗಿ ನಿರ್ವಹಿಸುವರು ಮತ್ತು 2 3 ಮತ್ತು 4 ರ ಗುಣಾಕಾರ ಮಗ್ಗಿಯ ನೈಜ ಸಂಗತಿಗಳನ್ನು ರಚಿಸುವರು. |
| 14 | 14-N | ಎರಡು ಆಯಾಮದ ಆಕೃತಿಗಳಾದ ಆಯತ ,ತ್ರಿಭುಜ , ವೃತ್ತ, ಅಂಡಾಕಾರದಂತಹ ಇತ್ಯಾದಿ ಆಕಾರಗಳನ್ನು ಗುರುತಿಸುವರು ಮತ್ತು ವಿವರಿಸುವರು |
| 15 | 15-N | ರಾಡ್ (ಕೋಲು) ಪೆನ್ಸಿಲ್, ದಾರ, ಕಪ್, ಚಮಚ, ಮಗ್, ಇತ್ಯಾದಿಗಳಂತಹ ಪ್ರಮಾಣಿತವಲ್ಲದ ಘಟಕಗಳನ್ನು ಬಳಸಿಕೊಂಡು, ಉದ್ದ /ದೂರ/ಎತ್ತರ ಸಾಮರ್ಥ್ಯವನ್ನು, ಅಂದಾಜು ಮತ್ತು ಅಳತೆ ಮಾಡುತ್ತಾರೆ. ಮತ್ತು ಸರಳ ಸಮತೋಲನವನ್ನು ಬಳಸಿಕೊಂಡು ತೂಕವನ್ನು ಹೋಲಿಸುವರು |
| 16 | 16-N | ದೂರ/ಹತ್ತಿರ, ಮೇಲೆ/ ಕೆಳಗೆ, ಎಡ/ ಬಲ, ಮುಂದೆ/ ಹಿಂದೆ ಇತ್ಯಾದಿ ವಿಶೇಷ ಶಬ್ದಗಳನ್ನು ಬಳಸುವರು |
| 17 | 17-N | 100 ರೂಪಾಯಿವರೆಗಿನ ಹಣವನ್ನು ಬಳಸಿಕೊಂಡು ಸರಳ ವಹಿವಾಟು ನಡೆಸುವರು |
ಸೂಚನೆ: O-ಮೌಖಿಕ, R- ಓದುವುದು, W-ಬರೆಯುವುದು, N-ಸಂಖ್ಯಾಜ್ಞಾನ.