ವಿಷಯ : ಗ್ರಂಥಾಲಯ / ಓದುವ ಮೂಲೆಯನ್ನು ಪುನರ್ ಸ್ಥಾಪಿಸಿ
ವಿವರ : ಮಕ್ಕಳು ಶಾಲೆಯಲ್ಲಿ ಲಭ್ಯವಿರುವ ಎಲ್ಲಾ ಪುಸ್ತಕಗಳನ್ನು ಹೊರತೆಗೆಯುವುದರ ಜೊತೆಗೆ, ಓದುವ ಮೂಲೆ / ಪುಸ್ತಕಗಳನ್ನು ಸ್ವಚ್ಛಗೊಳಿಸುವುದು ಮತ್ತು ಹರಿದ ಪುಸ್ತಕಗಳನ್ನು ಸರಿಪಡಿಸಲು ಪುಸ್ತಕ ಆಸ್ಪತ್ರೆಯನ್ನು ಮಾಡುವುದು.
ಕಥೆ : ಎರಡು ಬೆಂಕಿಕಡ್ಡಿಗಳ ಸ್ನೇಹ
ಎರಡು ಸಣ್ಣ ಬೆಂಕಿಕಡ್ಡಿಗಳಿಗೆ ಒಟ್ಟಿಗೆ ಆಡಲು ಇಷ್ಟ, ಆದರೆ ಅವುಗಳಿಗೆ ಒಂದಲ್ಲ ಒಂದು ದಿನ ತಾವು ಬೆಳಗಿ, ಸುಟ್ಟು ಹೋಗುತ್ತೇವೆ ಎಂಬ ಭಯ. ಅವುಗಳು ಸದಾ ಜೊತೆಯಾಗಿ ಇರಲು ಒಂದು ಉಪಾಯ ಮಾಡುತ್ತವೆ. ಅದೇನು ಅಂತ ನೋಡೋಣ ಬನ್ನಿ.
ಕಥೆಯನ್ನು ನಮ್ಮ ಊಹೆಯ ಮೇರೆಗೆ ಮುಂದುವರೆಸಬೇಕು. ಪ್ರತಿಯೊಬ್ಬರು ತಮ್ಮ ತಮ್ಮ ಕಲ್ಪನೆಯಲ್ಲಿ ಕಥೆಯನ್ನು ಮುಂದುವರೆಸುತ್ತಾ ಸಾಗಬೇಕು. ಅನಂತರ ಪ್ರತಿಯೊಂದು ಕಥೆಗೂ ಭಿನ್ನವಾದ ಅಂತ್ಯವನ್ನು ಸೂಚಿಸಲು ಅವಕಾಶ ನೀಡಬೇಕು. ಇಲ್ಲಿ ಕಾಲ್ಪನಿಕವಾಗಿ ಕಥೆ ಮುಂದೆ ಸಾಗಿ ಅಂತ್ಯ ಕಾಣಬೇಕು.
ಕಥೆಯ ನಂತರದ ಚಟುವಟಿಕೆಗಳು
ಗಟ್ಟಿಯಾಗಿ ಓದುವುದು
ಶಿಕ್ಷಕರು ಈ ಕಥೆಯನ್ನು ತಮ್ಮ ತರಗತಿ ಮಕ್ಕಳಿಗೆ ಗಟ್ಟಿಯಾಗಿ ಓದುತ್ತಾರೆ. ಆ ನಂತರ ಕಥೆಯ ಕಥಾವಸ್ತು, ಪಾತ್ರಗಳು, ಮತ್ತು ವಿಷಯಗಳನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಾರೆ. ಈ ಕೆಳಗಿನ ಪ್ರಶ್ನೆಗಳನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಬಹುದು:
1. ಬೆಂಕಿಕಡ್ಡಿಗಳು ಜೊತೆಯಾಗಿರಲು ಮಾಡಿದ ಉಪಾಯಗಳೇನು?
2. ಲೈಟರ್ ಇಲ್ಲದೆ ಇದ್ದರೆ ಸೋನು ಮತ್ತು ಜಾನು ಹೇಗೆ ಜೊತೆಯಾಗಿ ಉಳಿಯುತ್ತಿದ್ದರು?
3. ನಿಮ್ಮ ಮನೆಯ ಅಡುಗೆಮನೆಯಲ್ಲಿ ಬೆಂಕಿಕಡ್ಡಿ ಅಥವಾ ಲೈಟರ್ ಬಳಸುವಿರಾ? ಏತಕ್ಕೆ?
ಓದಿದ ನಂತರದ ಚಟುವಟಿಕೆ ಕಥೆಯ ಅಂತ್ಯವನ್ನು ಬದಲಾಯಿಸುವುದು
ಶಿಕ್ಷಕರು, ಕಥೆಗೆ ಹೊಸ ಅಂತ್ಯವನ್ನು ಬದಲಾಯಿಸುವ ಅಥವಾ ಸೇರಿಸುವ ಪರಿಕಲ್ಪನೆಯನ್ನು ವಿವರಿಸುತ್ತಾರೆ.
ಪ್ರತಿಯೊಬ್ಬ ವಿದ್ಯಾರ್ಥಿಯು ಕಥೆಗೆ ಹೊಸ ಅಂತ್ಯದ ಆವೃತ್ತಿಯನ್ನು ಬರೆಯುತ್ತಾನೆ. ಕಡಿಮೆ ದರ್ಜೆಯ (ಅಂದರೆ, 1 ಮತ್ತು 2ನೇ ತರಗತಿ) ವಿದ್ಯಾರ್ಥಿಗಳು, ಕಥೆಗೆ ತಿರುವನ್ನು ಸೇರಿಸಬಹುದು ಅಥವಾ ಪರ್ಯಾಯ ಅಂತ್ಯವನ್ನು ಮೌಖಿಕವಾಗಿ ಹೇಳಬಹುದು.