ಗಮನಿಸಿ! ರಾಜ್ಯದ ಶಾಲಾ ತರಗತಿಗಳಲ್ಲಿ ಮೌಲ್ಯಶಿಕ್ಷಣ ಉಪಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ, DSERT ವತಿಯಿಂದ ಮಾನ್ಯ ನಿರ್ದೇಶಕರ ನೇತೃತ್ವದಲ್ಲಿ ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಂಬರುವ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಮೌಲ್ಯಶಿಕ್ಷಣ ಚಟುವಟಿಕೆಗಳನ್ನು ತರಗತಿಗಳಲ್ಲಿ ಹೇಗೆ ಅನುಷ್ಠಾನಕ್ಕೆ ತರಬೇಕು ಎನ್ನುವುದರ ಕುರಿತು ಈ ತರಬೇತಿಯಲ್ಲಿ ಸಮಗ್ರ ಮಾರ್ಗದರ್ಶನ ನೀಡಲಾಗುವುದು. ದಿನಾಂಕ 11.09.2026 (ಶುಕ್ರವಾರ) ಮಧ್ಯಾಹ್ನ 2:30 ರಿಂದ 5:30 ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ DDPI, DIET ಅಧಿಕಾರಿಗಳು, BEO, BRC, ECO, CRP, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು YouTube Live ಮೂಲಕ ಕಡ್ಡಾಯವಾಗಿ ಭಾಗವಹಿಸಿ, ಇದರ ಪೂರ್ಣ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.
YouTube Live Link: https://www.youtube.com/live/kgZDYpzupAE?si=29pyprYf2AWbMuAW
