FLN ಸಂಖ್ಯಾಜ್ಞಾನದಲ್ಲಿ ಮಕ್ಕಳ ಹಂತ ಗುರುತಿಸುವ ರೂಬ್ರಿಕ್ಸ್ ಗಳು

 


ಸಂಖ್ಯಾಜ್ಞಾನದಲ್ಲಿ ಮಕ್ಕಳ ಹಂತವನ್ನು ಗುರುತಿಸಲು ಅನುಸರಿಸಬೇಕಾದ ರೂಬ್ರಿಕ್ಸ್‌ಗಳು
ಅ.ನಂ ಕಲಿಕಾ ಫಲಗಳು BB – Below Basic B – Basic P – Proficiency A – Advanced
1 ವಸ್ತುಗಳನ್ನು ಎಣಿಸುವರು ಮತ್ತು 99 ರವರೆಗಿನ ಸಂಖ್ಯಾಜ್ಞಾನವನ್ನು ಅಭಿವ್ಯಕ್ತಿಸುವರು / ಹೇಳುವರು 1-9 ಮಾತ್ರ ಸರಿಯಾಗಿ ಎಣಿಸಬಲ್ಲರು. ಒಂದಂಕಿಯ ಸಂಖ್ಯೆಗಳನ್ನು ಎಣಿಸಲು ಕಷ್ಟಪಡುವರು. ದತ್ತ ವಸ್ತುಗಳನ್ನು ನಿಧಾನವಾಗಿ ಎಣಿಸುವರು. 1-50 ರವರೆಗೆ ಎಣಿಸಬಲ್ಲರು. ದತ್ತ ವಸ್ತುಗಳನ್ನು ಗೊಂದಲವಿಲ್ಲದೆ ಎಣಿಸುವರು. ದತ್ತ ಸಂಖ್ಯೆಯನ್ನು ಗುರುತಿಸಿ ಓದುವರು. 1-99 ರವರೆಗೆ ನಿಖರವಾಗಿ ಎಣಿಸಬಲ್ಲರು. 99 ರವರೆಗಿನ ಯಾವುದೇ ಸಂಖ್ಯೆಯನ್ನು ಗುರುತಿಸಿ ಬಳಸುವರು.
2 ವಿಭಿನ್ನ ಆಕಾರಗಳು ಮತ್ತು ಸಂಖ್ಯೆಗಳಿಂದ ಹೊಸ ವಿನ್ಯಾಸಗಳನ್ನು ರಚಿಸುವರು ವಿವಿಧ ಸನ್ನಿವೇಶಗಳಲ್ಲಿ ತಾನು ನೋಡಿದ ವಸ್ತುಗಳ ಆಕಾರವನ್ನು ಗುರುತಿಸುತ್ತಾರೆ ಆದರೆ ಆಕಾರಗಳು ಮತ್ತು ಸಂಖ್ಯೆಗಳಿಂದ ತಿಳಿದಿರುವಂತೆ ವಿನ್ಯಾಸ ರಚಿಸಲಾರರು. ಸರಳ ಆಕಾರಗಳು, ವಿನ್ಯಾಸಗಳು ಮತ್ತು ಸಂಖ್ಯೆಗಳ ಜೋಡಣೆಯ ರಚನೆಯನ್ನು ತಿಳಿದಿರುವರು. ಆಕಾರ ಮತ್ತು ಸಂಖ್ಯೆಗಳನ್ನು ಬಳಸಿ ವಿವಿಧ ವಿನ್ಯಾಸವನ್ನು ರಚಿಸುವರು. ಸೂಕ್ತ ಸನ್ನಿವೇಶದಲ್ಲಿ ಗುರುತಿಸಿದ ಸಂಖ್ಯೆ ಹಾಗೂ ಆಕಾರವನ್ನು ಬಳಕೆ ಮಾಡಿಕೊಂಡು ನಾವೀನ್ಯತೆಯುಳ್ಳ ವಿನ್ಯಾಸವನ್ನು ರಚಿಸುವರು.
3 ದೈನಂದಿನ ಜೀವನದಲ್ಲಿ 99 ರವರೆಗಿನ ಸಂಖ್ಯೆಗಳನ್ನು ಉಪಯೋಗಿಸಿ, ಒಟ್ಟು ಮೊತ್ತ 99 ಮೀರದಂತೆ ಸಂಕಲನ ಮತ್ತು ವ್ಯವಕಲನವನ್ನು ಮಾಡುವರು ಅಂಕಿ-ಸಂಖ್ಯೆಗಳನ್ನು ಗುರುತಿಸುವಲ್ಲಿ ಕಷ್ಟಪಡುತ್ತಾರೆ. ಒಂದಂಕಿಯ ಸಂಕಲನ ವ್ಯವಕಲನ ಮಾಡಲು ಪ್ರಯತ್ನಿಸುತ್ತಾರೆ. ಪರಿಚಿತ ಸಂಖ್ಯೆಗಳನ್ನು ಮಾತ್ರ ದೈನಂದಿನ ಜೀವನದಲ್ಲಿ ಬಳಸಿಕೊಂಡು ಸಂಕಲನ ವ್ಯವಕಲನ ಮಾಡಲು ಪ್ರಯತ್ನಿಸುತ್ತಾರೆ. 90 ರವರೆಗಿನ ಸಂಖ್ಯೆಗಳನ್ನು ಉಪಯೋಗಿಸಿ ಸಂಕಲನ-ವ್ಯವಕಲನ ಮಾಡುವರು. ದೈನಂದಿನ ಜೀವನದಲ್ಲಿ ದಶಕರಹಿತ, ದಶಕಸಹಿತ 99 ಕ್ಕಿಂತ ಹೆಚ್ಚಿಲ್ಲದ ಸಂಖ್ಯೆಗಳ ಸಂಕಲನ ವ್ಯವಕಲನ ಮಾಡುತ್ತಾರೆ.
4 ಗುಣಾಕಾರವನ್ನು ಪುನರಾವರ್ತಿತ ಸಂಕಲನವಾಗಿ ಮತ್ತು ಭಾಗಾಕಾರವನ್ನು ಸಮಾನ ಹಂಚಿಕೆಯಾಗಿ ನಿರ್ವಹಿಸುವರು ಮತ್ತು 23 ಮತ್ತು 4 ರ ಗುಣಾಕಾರ ಹಾಗೂ ನೈಜ ಸಂಗತಿಗಳನ್ನು ರಚಿಸುವರು ಸಂಕಲನ ವ್ಯವಕಲನ ಕ್ರಿಯೆಗಳನ್ನು ಮಾತ್ರ ಮಾಡಲು ಪ್ರಯತ್ನಿಸುವರು. ಸಂಕಲನ, ವ್ಯವಕಲನದ ಬಗ್ಗೆ ತಿಳಿದುಕೊಂಡಿರುತ್ತಾರೆ. ಗುಣಾಕಾರ ಮಾಡಲು ಪ್ರಯತ್ನಿಸುತ್ತಾರೆ, ಭಾಗಾಕಾರ ಮಾಡಲು ಕಷ್ಟಪಡುತ್ತಾರೆ. ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ ಲೆಕ್ಕಗಳನ್ನು ತಪ್ಪಿಲ್ಲದೆ ಮಾಡುವರು ಆದರೆ ಅನ್ವಯಿಸಿಕೊಳ್ಳಲು ಕಷ್ಟಪಡುತ್ತಾರೆ. ಗುಣಾಕಾರದ ಪುನರಾವರ್ತಿತ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಲೆಕ್ಕಗಳನ್ನು ಮಾಡುತ್ತಾರೆ ಹಾಗೂ ನೈಜ ಸಂಗತಿಗಳಲ್ಲಿ ಅನ್ವಯಿಸಿಕೊಳ್ಳುತ್ತಾರೆ.
ಅ.ನಂ ಕಲಿಕಾ ಫಲಗಳು BB – Below Basic B – Basic P – Proficiency A – Advanced
5 ಎರಡು ಆಯಾಮದ ಆಕೃತಿಗಳಾದ ಆಯತ ತ್ರಿಭುಜ ವೃತ್ತ ಅಂಡಾಕಾರದಂತಹ ಇತ್ಯಾದಿ ಆಕಾರಗಳನ್ನು ಗುರುತಿಸುವರು ಮತ್ತು ವಿವರಿಸುವರು ಆಯತ ತ್ರಿಭುಜ ವೃತ್ತ ಅಂಡಾಕಾರದಂತಹ ಆಕಾರಗಳನ್ನು ಗುರುತಿಸಲು ಕಷ್ಟಪಡುವರು ಆಯತ ತ್ರಿಭುಜ ವೃತ್ತ ಆಕಾರಗಳನ್ನು ಮಾತ್ರ ಗುರುತಿಸುವರು ಇತರ 2D ಆಕಾರಗಳನ್ನು ಗುರುತಿಸಲು ಕಷ್ಟಪಡುವರು ಆಯತ ತ್ರಿಭುಜ ವೃತ್ತ ಅಂಡಾಕಾರದಂತಹ 2D ಆಕಾರಗಳನ್ನು ಗುರುತಿಸುವರು ಆಯತ ತ್ರಿಭುಜ ವೃತ್ತ ಅಂಡಾಕಾರದಂತಹ 2D ಆಕಾರಗಳನ್ನು ಗುರುತಿಸುವರು ಮತ್ತು ವಿವರಿಸುವರು
6 ರಾಡ್ (ಕೋಲು) ಪೆನ್ಸಿಲ್, ದಾರ, ಕಪ್, ಚಮಚ, ಮಗ್, ಇತ್ಯಾದಿಗಳಂತಹ ಪ್ರಮಾಣಿತವಲ್ಲದ ಘಟಕಗಳನ್ನು ಬಳಸಿಕೊಂಡು, ಉದ್ದ/ದೂರ/ಎತ್ತರ ಸಾಮರ್ಥ್ಯವನ್ನು ಅಂದಾಜು ಮತ್ತು ಅಳತೆ ಮಾಡುತ್ತಾರೆ. ಮತ್ತು ಸರಳ ಸಮತೋಲನವನ್ನು ಬಳಸಿಕೊಂಡು ತೂಕವನ್ನು ಹೋಲಿಸುವರು ಉದ್ದ ದೂರ ಸಾಮರ್ಥ್ಯಗಳನ್ನು ಅಳೆಯುವುದರಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ ಹಲವಾರು ಪ್ರಯತ್ನಗಳ ಮೂಲಕ ಉದ್ದ ದೂರ, ಎತ್ತರ ಮತ್ತು ಸಾಮರ್ಥ್ಯವನ್ನು ಅಂದಾಜಿಸುತ್ತಾರೆ ಸಾಮರ್ಥ್ಯಗಳ ಅಂದಾಜು ಮತ್ತು ದೂರ, ಎತ್ತರ ಉದ್ದಗಳನ್ನು ಅನೌಪಚಾರಿಕವಾಗಿ ಅಳತೆ ಮಾಡುತ್ತಾರೆ ಅಂದಾಜು ದೂರ, ಎತ್ತರ ಉದ್ದ ಇವುಗಳನ್ನು ಅಳತೆ ಮಾಡುತ್ತಾರೆ ಹಾಗೂ ಸಂಬಂಧಿಸಿದ ಸಮಸ್ಯೆಗಳನ್ನು ಬಿಡಿಸುತ್ತಾರೆ
7 ದೂರ/ಹತ್ತಿರ, ಮೇಲೆ/ ಕೆಳಗೆ, ಎಡ/ ಬಲ, ಮುಂದೆ/ಹಿಂದೆ ಇತ್ಯಾದಿ ವಿಶೇಷ ಶಬ್ದಗಳನ್ನು ಬಳಸುವರು ಸ್ಥಿತಿ ಸೂಚಕ ಪದಗಳನ್ನು ಅರ್ಥ ಮಾಡಿಕೊಳ್ಳಲು ಬಳಸಲು ಕಷ್ಟ ಪಡುವರು ಸನ್ನಿವೇಶ ನೀಡಿದಾಗ ಗೆಳೆಯರ ಸಹಾಯ ಪಡೆದು ಹೇಳುವರು ಸ್ಥಿತಿ ಸೂಚಕ ಪದಗಳನ್ನು ಶಾಲಾ ಮತ್ತು ದೈನಂದಿನ ಜೀವನದಲ್ಲಿ ಸನ್ನಿವೇಶಗಳ ನೆನಪು ಮಾಡಿಕೊಂಡು ಸ್ವತಂತ್ರವಾಗಿ ಬಳಸಲು ಪ್ರಾರಂಭಿಸುತ್ತಾರೆ ಯಾವುದೇ ಸನ್ನಿವೇಶದಲ್ಲಾದರೂ ಸರಿಯಾದ ಪದ ಬಳಕೆ ಮಾಡುವರು ಹಾಗೂ ವಿವರಿಸುವರು
8 100 ರೂಪಾಯಿವರೆಗಿನ ಹಣವನ್ನು ಬಳಸಿಕೊಂಡು ಸರಳ ವಹಿವಾಟು ನಡೆಸುವರು. 100 ರ ವರೆಗಿನ ಸಂಖ್ಯೆಗಳನ್ನು ಗುರುತಿಸುವಲ್ಲಿ ಗೊಂದಲವಿರುವುದು ಮತ್ತು 100 ರೂಪಾಯಿಯ ಪರಿಕಲ್ಪನೆ ಇಲ್ಲದಿರುವುದು 100 ರ ವರೆಗಿನ ಸಂಖ್ಯೆಗಳನ್ನು ಗುರುತಿಸುವರು. 100 ರೂಪಾಯಿಯ ಪರಿಕಲ್ಪನೆ ಇದೆ ಆದರೆ ವಹಿವಾಟು ನಡೆಸಲು ಕಷ್ಟ ಪಡುವರು- ಸಹಕಾರದ ಅಗತ್ಯತೆ. 100 ರ ಪರಿಕಲ್ಪನೆಯೊಂದಿಗೆ, ಗೆಳೆಯರೊಂದಿಗೆ ಸರಳ ವಹಿವಾಟು ಮಾಡುವರು 100 ರೂಪಾಯಿವರೆಗಿನ ವಹಿವಾಟನ್ನು (ಸಂಕಲನ ಮತ್ತು ವ್ಯವಕಲನದಲ್ಲಿ) ಸುಲಭವಾಗಿ ನಡೆಸಲು ಸಮರ್ಥರಿದ್ದು ಲಾಭ ಮತ್ತು ನಷ್ಟದ ಪರಿಕಲ್ಪನೆ ತಿಳಿದಿರುವುದು
ಆರಂಭಿಕ ಸಾಕ್ಷರತಾ ಮಕ್ಕಳ ಹಂತವನ್ನು ಗುರುತಿಸುವಲ್ಲಿ ಅನುಸರಿಸಬೇಕಾದ ರೂಬ್ರಿಕ್ಸ್‌ಗಳು
ಅ.ನಂ ಕಲಿಕಾ ಫಲಗಳು BB – Below Basic B – Basic P – Proficiency A – Advanced
1 ತರಗತಿಯಲ್ಲಿ ಲಭ್ಯವಿರುವ ಮುದ್ರಿತ ಪಠ್ಯಗಳ ಕುರಿತು ಸಂಭಾಷಣೆ ಮತ್ತು ಮಾತುಕತೆ ನಡೆಸುವುದು ಸಂಭಾಷಣೆ ಮತ್ತು ಮಾತುಕತೆಯ ಸಮಯದಲ್ಲಿ ಮೌನವಾಗಿರುತ್ತಾರೆ. ಸಂಭಾಷಣೆ/ಮಾತುಕತೆ ನಡೆಸುವಾಗ ತಡವರಿಸುತ್ತಾರೆ. ಸಂಭಾಷಣೆ ಮತ್ತು ಮಾತುಕತೆ ನಡೆಸುವಾಗ ಸರಾಗವಾಗಿ ಮಾತನಾಡುತ್ತಾರೆ. ಯಾವುದೇ ಸಂಭಾಷಣೆಯಲ್ಲಿ ಸುಲಲಿತವಾಗಿ ತೊಡಗುವರು.
2 ಪ್ರಶ್ನೆಯನ್ನು ಕೇಳುವ ಮೂಲಕ ಸಂಭಾಷಣೆಯಲ್ಲಿ ತೊಡಗುವರು ಮತ್ತು ಇತರರನ್ನು ಆಲಿಸುವರು ಪ್ರಶ್ನೆ ಕೇಳಲು/ ಮಾತನಾಡಲು ಹಿಂಜರಿಯುವರು. ಕೆಲವೊಂದು ಪ್ರಶ್ನೆಗಳನ್ನು ಕೇಳುವುದರ ಮುಖಾಂತರ ಸಂಭಾಷಣೆಯಲ್ಲಿ ತೊಡಗುವರು, ಇತರರು ಹೇಳಿದ್ದನ್ನು ಆಲಿಸಿ ಅರ್ಥಮಾಡಿಕೊಳ್ಳುವರು. ಯಾವುದೇ ವಿಷಯದ ಕುರಿತು ಸಕ್ರಿಯವಾಗಿ ಸಂಭಾಷಣೆಯಲ್ಲಿ ಭಾಗವಹಿಸಿ ಸ್ಪಷ್ಟವಾಗಿ ಆಲಿಸುವರು ಮತ್ತು ಪ್ರಶ್ನೆ ಕೇಳುವರು. ಸ್ವಯಂ ಪ್ರೇರಿತವಾಗಿ ಸಂಭಾಷಣೆಯಲ್ಲಿ ತೊಡಗುವರು ಹಾಗೂ ಆಲಿಸಿದ ವಿಷಯದ ಕುರಿತು ಮರು ಪ್ರಶ್ನಿಸುವರು.
3 ಹಾಡುಗಳು/ ಕವನಗಳನ್ನು ಪಠಿಸುವರು ಹಾಡು/ಕವನಗಳನ್ನು ಹೇಳಲು ಹಿಂಜರಿಯುತ್ತಾರೆ. ಹಾಡು/ಕವನಗಳನ್ನು ಸಾಮರ್ಥ್ಯಕ್ಕನುಗುಣವಾಗಿ ಪಠಿಸುವರು. ಹಾಡುಗಳನ್ನು/ಕವನಗಳನ್ನು ಸ್ಪಷ್ಟವಾಗಿ ಪಠಿಸುವರು. ಹಾಡುಗಳನ್ನು /ಕವನಗಳನ್ನು ಸ್ಪಷ್ಟ ಹಾಗೂ ಭಾವಬದ್ಧವಾಗಿ ಪಠಿಸುವರು.
4 ಕಥೆಗಳು/ಕವಿತೆಗಳು/ ಮುದ್ರಣ ಇತ್ಯಾದಿಗಳಲ್ಲಿ ಕಂಡುಬರುವ ಪರಿಚಿತ ಪದಗಳನ್ನು ಪುನರಾವರ್ತಿಸುವರು ಸರಳ ಪದಗಳನ್ನು ಪರಿಚಿತ ಪದಗಳನ್ನು ಪುನರಾವರ್ತಿಸಲು ಕಷ್ಟಪಡುವರು. ಕಥೆ ಕವಿತೆಗಳಲ್ಲಿ ಪ್ರಚಲಿತ ಪದಗಳನ್ನು ಗುರುತಿಸಿ ಪುನರಾವರ್ತಿಸುವರು. ಧ್ವನಿ ಏರಿಳಿತದೊಂದಿಗೆ ಅಕ್ಷರಗಳನ್ನು ಪದಗಳನ್ನು ಪುನರಾವರ್ತಿಸುವರು. ನಿರರ್ಗಳವಾಗಿ ಸ್ಪಷ್ಟವಾದ ಧ್ವನಿ ಏರಿಳಿತದೊಂದಿಗೆ ಪರಿಚಿತ ಪದಗಳನ್ನು ಪುನರಾವರ್ತಿಸುವರು.
5 ಮಕ್ಕಳ ಸಾಹಿತ್ಯ/ ಪಠ್ಯಪುಸ್ತಕದಲ್ಲಿರುವ ಕಥೆಗಳನ್ನು ಓದುವರು ಮತ್ತು ವಿವರಿಸುವರು (ಕಥಿಸುವರು) / ಮತ್ತೆ ಹೇಳುವರು ಕಥೆಯನ್ನು ಓದಲು ಮತ್ತು ವಿವರಿಸಲು ಕಷ್ಟಪಡುವರು. ಕೆಲವು ಅಕ್ಷರಗಳು ಮತ್ತು ಪದಗಳನ್ನು ಮಾತ್ರ ಹೇಳುವರು, ವಿವರಿಸಲು ಕಷ್ಟಪಡುವರು. ಕಥೆಯನ್ನು ಸ್ಪಷ್ಟವಾಗಿ ಓದುವರು, ವಿವರಿಸಲು ತಡವರಿಸುತ್ತಾರೆ. ಕಥೆಯನ್ನು ನಿರರ್ಗಳವಾಗಿ ಓದುವರು ಮತ್ತು ಸ್ವಂತ ವಾಕ್ಯದಲ್ಲಿ ವಿವರಿಸುವರು.
6 ಕೊಟ್ಟಿರುವ ಪದದ ಅಕ್ಷರಗಳಿಂದ ಅರ್ಥಗರ್ಭಿತ ಹೊಸ ಪದಗಳನ್ನು ರಚಿಸುವರು. ಕೊಟ್ಟಿರುವ ಪದಗಳಲ್ಲಿ ಅಕ್ಷರಗಳನ್ನು ಗುರುತಿಸುತ್ತಾರೆ. ಕೊಟ್ಟಿರುವ ಪದಗಳಿಂದ ಕೆಲವು ಅಕ್ಷರ ಬಳಸಿ ಹೊಸ ಪದ ರಚಿಸುತ್ತಾರೆ. ಕೊಟ್ಟಿರುವ ಪದಗಳಿಂದ ಹೊಸ ಅರ್ಥಗರ್ಭಿತ ಹೊಸ ಪದಗಳನ್ನು ರಚಿಸುತ್ತಾರೆ. ಕೊಟ್ಟಿರುವ ಪದಗಳ ಹೊರತಾಗಿಯೂ ಹೊಸ ಅರ್ಥಗರ್ಭಿತ ಪದಗಳನ್ನು ರಚಿಸುತ್ತಾರೆ.
7 ವಯೋಮಾನಕ್ಕೆ ಸೂಕ್ತವಾದ 6 ರಿಂದ 8 ವಾಕ್ಯಗಳ ಸರಳ ಪದಗಳೊಂದಿಗಿನ ಪರಿಚಿತವಲ್ಲದ ಪಠ್ಯವನ್ನು ಗ್ರಹಿಸಿ. ಪರಿಚಿತವಲ್ಲದ ಪಠ್ಯವನ್ನು ತಡವರಿಸುತ್ತಾ ಓದುವರು. ಸರಳ ವಾಕ್ಯಗಳ ಅಪರಿಚಿತ ಪಠ್ಯವನ್ನು ಸ್ಪಷ್ಟವಾಗಿ ಓದುವರು. ಸರಳ ವಾಕ್ಯಗಳ ಅಪರಿಚಿತ ಪಠ್ಯವನ್ನು ಸ್ಪಷ್ಟವಾಗಿ ಹಾಗೂ ನಿರರ್ಗಳವಾಗಿ ಓದುವರು. ಸರಳ ವಾಕ್ಯಗಳ ಅಪರಿಚಿತ ಪಠ್ಯವನ್ನು ಸ್ಪಷ್ಟವಾಗಿ ಹಾಗೂ...
ಅ.ನಂ ಕಲಿಕಾ ಫಲಗಳು BB – Below Basic B – Basic P – Proficiency A – Advanced
7 (ಮುಂದವರಿದ ಭಾಗ) ಸ್ಪಷ್ಟತೆ ಮತ್ತು ನಿರರ್ಗಳತೆಯೊಂದಿಗೆ ಓದುವರು ನಿರರ್ಗಳವಾಗಿ ಅರ್ಥಭರಿತವಾಗಿ ಓದುವರು
8 ಅವರ ತಿಳುವಳಿಕೆ ಮತ್ತು ಭಾವಗಳನ್ನು ವ್ಯಕ್ತಪಡಿಸಲು ಸರಿಯಾದ ಸಣ್ಣ / ಸರಳ ವಾಕ್ಯಗಳನ್ನು ರಚಿಸುವರು ಪದಗಳನ್ನು ವಾಕ್ಯಗಳಾಗಿ ಪರಿವರ್ತಿಸುವಲ್ಲಿ ಪ್ರಯಾಸಪಡುವರು ಸರಳ ವಾಕ್ಯಗಳ ಮೂಲಕ ತಮ್ಮ ತಿಳುವಳಿಕೆ ವ್ಯಕ್ತಪಡಿಸುವರು ಸರಳ ವಾಕ್ಯಗಳ ಮೂಲಕ ತಮ್ಮ ತಿಳುವಳಿಕೆ ಹಾಗೂ ಭಾವಗಳನ್ನು ವ್ಯಕ್ತಪಡಿಸುವರು ಸರಳ ಹಾಗೂ ಸುಧಾರಿತ ವಾಕ್ಯಗಳನ್ನು ರಚಿಸಿ, ಭಾವಾಭಿವ್ಯಕ್ತಿ ಮಾಡುವರು
9 ಸ್ಪಷ್ಟ ಬರವಣಿಗೆಯೊಂದಿಗೆ 4 ರಿಂದ 5 ಸಣ್ಣ ವಾಕ್ಯಗಳನ್ನು ಬರೆಯುವರು ವಾಕ್ಯಗಳನ್ನು ಬರೆಯಲು ಮತ್ತು ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ 4 -5 ವಾಕ್ಯಗಳನ್ನು ಸ್ಪಷ್ಟವಿಲ್ಲದ ಬರವಣಿಗೆಯೊಂದಿಗೆ ಪೂರ್ಣಗೊಳಿಸುತ್ತಾರೆ. 4-5 ವಾಕ್ಯಗಳನ್ನು ಸ್ಪಷ್ಟವಾಗಿ ಬರೆಯುತ್ತಾರೆ 4-5 ವಾಕ್ಯಗಳನ್ನು ವ್ಯಾಕರಣ ದೋಷವಿಲ್ಲದೆ ಅರ್ಥಪೂರ್ಣವಾಗಿ ಬರೆಯುತ್ತಾರೆ