ಸೇತುಬಂಧ ಉಪಕ್ರಮದ ಅನುಷ್ಠಾನ ಕಾರ್ಯತಂತ್ರಗಳು
2026-27ನೇ ಶೈಕ್ಷಣಿಕ ಸಾಲಿಗೆ ಕನ್ನಡ ಮತ್ತು ಉರ್ದು ಮಾಧ್ಯಮದ ನಲಿ-ಕಲಿಯ 01ನೇ ತರಗತಿಗೆ ವಿದ್ಯಾ ಪ್ರವೇಶ ಹಾಗೂ 02 ಮತ್ತು 03ನೇ ತರಗತಿಗಳಿಗೆ ಸೇತುಬಂಧ ಚಟುವಟಿಕೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ಹೊರಡಿಸುವ ಸುತ್ತೋಲೆಯನ್ನು ಅನುಸರಿಸುವುದು.
ಕಲಿ-ನಲಿಯ 1ನೇ ತರಗತಿಗೆ ಶಾಲಾ ಪ್ರಾರಂಭದ ಮೊದಲ 30 ದಿನಗಳ ವಿದ್ಯಾಪ್ರವೇಶ ಹಾಗೂ 2 ರಿಂದ 10ನೇ ತರಗತಿಗಳಿಗೆ ಮೊದಲ 15 ದಿನಗಳ ಸೇತುಬಂಧ ಉಪಕ್ರಮವನ್ನು ಅನುಷ್ಠಾನ ಮಾಡಲು ನಿಗದಿಪಡಿಸಲಾಗಿದ್ದು ಅದರಂತೆ ಕ್ರಮವಹಿಸುವುದು.
ದ್ವಿಭಾಷಾ (Bilingual) ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳಿಗೆ 01 ರಿಂದ 5ನೇ ತರಗತಿಗಳಿಗೆ 30 ದಿನಗಳ Transition Period ಸಂಬಂಧಿತ ಚಟುವಟಿಕೆಗಳನ್ನು ಈ ಕಛೇರಿಯಿಂದ ಹೊರಡಿಸುವ ಸುತ್ತೋಲೆಯಂತೆ ಕ್ರಮವಹಿಸುವುದು.
ಉಳಿದಂತೆ 4 ರಿಂದ 10ನೇ ತರಗತಿಗಳವರೆಗೆ 15 ದಿನಗಳ ಸೇತುಬಂಧ ಉಪಕ್ರಮವನ್ನು ಆಯೋಜಿಸುವುದು.
ನೈದಾನಿಕ ಅವಲೋಕನ ಪರೀಕ್ಷೆಯು (Diagnostic Test) ಎರಡು ಸ್ವರೂಪದ ಪ್ರಶ್ನೆಗಳನ್ನು ಹೊಂದಿರಬೇಕು. ಶೇ.40 FLN, ಶೇ.60 ಹಿಂದಿನ ತರಗತಿಗನುಗುಣವಾಗಿ ಗಳಿಸಬೇಕಾದ ಅಪೇಕ್ಷಿತ ಕಲಿಕಾ ಫಲಗಳನ್ನಾಧರಿಸಿದ ಪ್ರಶ್ನೆಗಳು.
4 ರಿಂದ 10ನೇ ತರಗತಿಗಳ FLN ಮತ್ತು ಅಪೇಕ್ಷಿತ ಕಲಿಕಾಫಲಗಳ ಪಟ್ಟಿಯನ್ನು ಇದರೊಂದಿಗೆ ಅನುಬಂಧಿಸಿದೆ. ಅನುಬಂಧ-1.
ಲಗತ್ತಿಸಿರುವ ಅನುಬಂಧದಲ್ಲಿ FLN ಸಂಬಂಧಿತ ಕಲಿಕಾ ಫಲಗಳು ಹಾಗೂ ತರಗತಿವಾರು ಅಪೇಕ್ಷಿತ ಕಲಿಕಾ ಫಲಗಳನ್ನು ನೀಡಲಾಗಿದ್ದು, ಶಿಕ್ಷಕರು ತಮ್ಮ ತರಗತಿಯ ಪರಿಸರಕ್ಕೆ ಅನುಗುಣವಾಗಿ ಸೇತುಬಂಧ ಉಪಕ್ರಮವನ್ನು ಆಯೋಜಿಸುವುದು. (ಪೂರ್ವಪರೀಕ್ಷೆ- ಪರಿಹಾರ ಬೋಧನೆ- ಸಾಫಲ್ಯ ಪರೀಕ್ಷೆ)
ಪೂರ್ವ ಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳನ್ನು ನಡೆಸಲು FLN ಗೆ 4 ಪ್ರಶ್ನೆಗಳು ಮತ್ತು ತರಗತಿ ಮತ್ತು ವಿಷಯವಾರು ಅಪೇಕ್ಷಿತ ಕಲಿಕಾ ಫಲಗಳಿಗೆ 6 ಪ್ರಶ್ನೆಗಳು, ಒಟ್ಟು 10 ಪ್ರಶ್ನೆಗಳ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದು.
ಕಲಿಕಾ ಫಲಗಳ ಗಳಿಕೆಯನ್ನು ದೃಢೀಕರಿಸಲು ಹೆಚ್ಚಿನ ಪ್ರಶ್ನೆಗಳ ಅವಶ್ಯಕತೆಯಿದ್ದಲ್ಲಿ ಪ್ರಶ್ನೆಗಳನ್ನು ಮೌಖಿಕವಾಗಿ ಕೇಳುವುದು.
ಪೂರ್ವಪರೀಕ್ಷೆಯ ಉತ್ತರಗಳನ್ನು ಮೌಲ್ಯಮಾಪನ ಮಾಡುವಾಗ ಪ್ರಶ್ನಾವಾರು ಮೌಲ್ಯಮಾಪನ ಮಾಡುವುದು, ಪೂರ್ಣ ಪ್ರಮಾಣದಲ್ಲಿ ಉತ್ತರಿಸಿದಲ್ಲಿ 'A' ಎಂದು, ಅಪೂರ್ಣ/ಭಾಗಶಃ ಉತ್ತರವಿದ್ದಲ್ಲಿ 'B' ಎಂದು ಗುರುತಿಸಿ ಶಾಲಾ ಶೈಕ್ಷಣಿಕ ಯೋಜನೆಯಲ್ಲಿ (SAP) ದಾಖಲಿಸುವುದು.
2026-27ನೇ ಸಾಲಿಗೆ ಶಾಲಾ ಶೈಕ್ಷಣಿಕ ಯೋಜನೆಯ ನಮೂನೆಗಳನ್ನು ಪರಿಷ್ಕರಿಸಲಾಗಿದ್ದು, ಅದರಂತೆ ಕ್ರಮವಹಿಸುವುದು - ಪರಿಷ್ಕೃತ SAP ಅನುಬಂಧಿಸಿದೆ.
4 ರಿಂದ 10ನೇ ತರಗತಿಯವರೆಗೆ ಪ್ರಶ್ನೆಪತ್ರಿಕೆಯ 1 ರಿಂದ 4ನೇ ಪ್ರಶ್ನೆಗಳಲ್ಲಿ 'B' grade ಪಡೆದಿರುವ ವಿದ್ಯಾರ್ಥಿಗಳನ್ನು FLN ಸಾಧಿಸದೇ ಇರುವ ವಿದ್ಯಾರ್ಥಿಗಳು ಎಂದು ಗುರುತಿಸಿಕೊಳ್ಳುವುದು. ಪ್ರಶ್ನೆಪತ್ರಿಕೆಯ 5 ರಿಂದ 10ನೇ ಪ್ರಶ್ನೆಗಳಲ್ಲಿ 'B' grade ಪಡೆದಿರುವ ವಿದ್ಯಾರ್ಥಿಗಳನ್ನು ಅಪೇಕ್ಷಿತ ಕಲಿಕಾ ಫಲಗಳನ್ನು ಸಾಧಿಸದೇ, ಕಲಿಕಾ ಅಂತರ ಇರುವ ವಿದ್ಯಾರ್ಥಿಗಳು ಎಂದು ಗುರುತಿಸಿಕೊಳ್ಳುವುದು.
ಮೌಲ್ಯಮಾಪನವನ್ನು ಆಧರಿಸಿ ವಿದ್ಯಾರ್ಥಿಗಳ ಕಲಿಕೆಯನ್ನು FLN ಪ್ರಗತಿ ಮತ್ತು ಅಪೇಕ್ಷಿತ ಕಲಿಕಾ ಫಲಗಳ ಕಲಿಕೆಯನ್ನು SAP ನಮೂನೆ-4A ಮತ್ತು 4B ನಲ್ಲಿ ದಾಖಲಿಸುವುದು.
'B' grade ಪಡೆದಿರುವ ವಿದ್ಯಾರ್ಥಿಗಳ ಮಾಹಿತಿಯನ್ನು SAP ನಮೂನೆ-5A ಮತ್ತು 58 ನಲ್ಲಿ ದಾಖಲಿಸುವುದು.
FLN ಮತ್ತು ಅಪೇಕ್ಷಿತ ಕಲಿಕಾ ಫಲಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ಪ್ರತ್ಯೇಕವಾಗಿ
ರೂಪಿಸಿಕೊಂಡು 'B' grade ಪಡೆದಿರುವ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆಯನ್ನು ಕೈಗೊಳ್ಳುವುದು. 1 ರಿಂದ 10ನೇ ತರಗತಿಗಳವರೆಗೆ DSERT website ನಲ್ಲಿ ಲಭ್ಯವಿರುವ ತರಗತಿವಾರು ಮತ್ತು ವಿಷಯವಾರು ಕಲಿಕಾ ಸಾಮಾಗ್ರಿಗಳಾದ ಸೇತುಬಂಧ ಸಾಹಿತ್ಯ, (ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ಪ್ರಥಮ ಭಾಷೆಗಳಾದ ಉರ್ದು, ಮರಾಠಿ, ತೆಲುಗು ಮತ್ತು ತಮಿಳು), ಕಲಿಕಾ ಚೇತರಿಕೆ, ಕಲಿಕಾ ಬಲವರ್ಧನೆ ಮತ್ತು ಕಲಿಕಾ ಫಲಾಧಾರಿತ ಪ್ರಶ್ನೆಕೋಠಿಯ ಚಟುವಟಿಕೆಗಳನ್ನು ಬಳಸಿಕೊಂಡು ಮತ್ತು ತಮ್ಮ ಹಂತದಲ್ಲಿ ಸ್ಥಳೀಯ ಸನ್ನಿವೇಶಕ್ಕೆ ಹಾಗೂ ಅಪೇಕ್ಷಿತ ಕಲಿಕಾ ಫಲಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ರೂಪಿಸಿಕೊಂಡು ಸೇತುಬಂಧ ಉಪಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಿಸಲು ಕ್ರಮವಹಿಸುವುದು.
ವಿದ್ಯಾರ್ಥಿಗಳ ಕಲಿಕಾ ಅನುಭವಗಳನ್ನು ಆಧರಿಸಿ ರಸಪ್ರಶ್ನೆ, ಲಿಖಿತ ಮತ್ತು ಮೌಖಿಕ ಪ್ರಶೋತ್ತರ, ಸರಳ ಯೋಜನೆಗಳು, ಸರಳ ಚಟುವಟಿಕೆಗಳು, ಸಂಭಾಷಣೆ, ಅಭ್ಯಾಸ ಹಾಳೆಗಳು, ಗೃಹ ಪಾಠ ಮತ್ತು ಇನ್ನಿತರ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡುವುದು.
ಪರಿಹಾರ ಬೋಧನೆಯ ನಂತರ ನಿಗಧಿಪಡಿಸಿದ ಕಲಿಕಾ ಫಲಗಳಿಗನುಗುಣವಾಗಿ ಸಾಫಲ್ಯ ಪರೀಕ್ಷೆಯನ್ನು ಕೈಗೊಂಡು, ಅದರ ಮೌಲ್ಯಮಾಪನವನ್ನು ಆಧರಿಸಿ ವಿದ್ಯಾರ್ಥಿಗಳ ಕಲಿಕೆಯನ್ನು ಪೂರ್ವಪರೀಕ್ಷೆಯಲ್ಲಿ ಗುರುತಿಸಿದಂತೆ 'A' ಮತ್ತು 'B' ಎಂದು ಗುರುತಿಸಿ SAP ನಮೂನೆ-4A ಮತ್ತು 4B ನಲ್ಲಿ ದಾಖಲಿಸುವುದು.
ಹೀಗೆ ಗುರುತಿಸಿದ ವಿದ್ಯಾರ್ಥಿಗಳ FLN ಮತ್ತು ಅಪೇಕ್ಷಿತ ಕಲಿಕಾ ಫಲಗಳ ಗಳಿಕೆಯ ಮಾಹಿತಿಯನ್ನು SATS
ನಲ್ಲಿ ಲಭ್ಯವಿರುವ ಪ್ರತ್ಯೇಕ ಮಾಡ್ಯೂಲ್‌ಗಳಲ್ಲಿ ದಾಖಲಿಸುವುದು.
FLN ಮತ್ತು ಅಪೇಕ್ಷಿತ ಕಲಿಕಾ ಫಲಗಳನ್ನು ಸಾಧಿಸದಿರುವ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ನಿರಂತರವಾಗಿ ಅನುಪಾಲನೆ ಮಾಡುವುದು. ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಸಾಧನೆಯನ್ನು (FLN) ಪ್ರತಿ ತರಗತಿಗೆ ಪ್ರತ್ಯೇಕವಾಗಿ ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಅಂತ್ಯದವರೆಗೆ ಪ್ರತಿ ತಿಂಗಳು ಮೌಲ್ಯಾಂಕನ ಮಾಡಿ ದಾಖಲಿಸುವುದು ಮತ್ತು SATS ನಲ್ಲಿಯೂ ಇಂದೀಕರಿಸುವುದು.
ಅಪೇಕ್ಷಿತ ಕಲಿಕಾ ಫಲಗಳನ್ನು ಸಾಧಿಸದೇ ಇರುವ ವಿದ್ಯಾರ್ಥಿಗಳಿಗೆ ಪರಿಹಾರ ಕ್ರಮಗಳನ್ನು ಕೈಗೊಂಡು ಸೆಪ್ಟೆಂಬರ್ ಅಂತ್ಯ ಮತ್ತು ಡಿಸೆಂಬರ್ ಅಂತ್ಯಕ್ಕೆ ಮೌಲ್ಯಾಂಕನ ಮಾಡಿ ಶಾಲಾ ಶೈಕ್ಷಣಿಕ ಯೋಜನೆಯಲ್ಲಿ (SAP) ದಾಖಲಿಸುವುದು ಮತ್ತು SATS ನಲ್ಲಿಯೂ ಇಂದೀಕರಿಸುವುದು.
ವಿದ್ಯಾರ್ಥಿಗಳ ಪ್ರಗತಿಯನ್ನಾಧರಿಸಿ ಶಾಲಾ ಶೈಕ್ಷಣಿಕ ಯೋಜನೆಯನ್ನು (SAP) ಸಿದ್ಧಪಡಿಸಿ ಪ್ರತಿ ಮಗುವಿನ
ಕಲಿಕಾ ಪ್ರಗತಿಗೆ ನಿರಂತರ ಅನುಪಾಲನೆ ಮಾಡುವುದು.
ಸೇತುಬಂಧ ಉಪಕ್ರಮದ ಅವಧಿ ಮುಗಿದ ನಂತರವೂ, ವಿದ್ಯಾರ್ಥಿಗಳಲ್ಲಿ ಬುನಾದಿ ಸಾಮರ್ಥ್ಯಗಳು ಹಾಗೂ ತರಗತಿಗನುಗುಣವಾಗಿ ಗಳಿಸಬೇಕಾದ ಕಲಿಕಾ ಫಲಗಳು ಗಳಿಕೆಯಾಗದಿದ್ದಲ್ಲಿ, ಆಯಾ ವಿಷಯದಲ್ಲಿ ಪೂರ್ವ ಸಿದ್ಧತಾ ಚಟುವಟಿಕೆಗಳ ನಿರ್ವಹಣೆ ಮತ್ತು ಪುನರ್ಬಲನ/ ಪುನರಾವರ್ತನೆಯ ಸಮಯದಲ್ಲಿ ವಿಶೇಷ ಆದ್ಯತೆ ನೀಡಿ ಕಲಿಕೆಯನ್ನು ಅನುಕೂಲಿಸುವ ಮೂಲಕ ಹಾಗೂ ಪೋಷಕರ ಸಹಕಾರದಿಂದ ಎಲ್ಲಾ ವಿದ್ಯಾರ್ಥಿಗಳು ನಿಗಧಿತ ಕಲಿಕಾ ಫಲಗಳನ್ನು ಸಾಧಿಸಲು ಕ್ರಮವಹಿಸುವುದು ಹಾಗೂ ಸಾಧಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
ಸೇತಬಂಧ ಸುತ್ತೋಲೆ 2026-27 download below...👇




