ಸಂವಿಧಾನ ದಿನ

 


INDIAN CONSTITUTION DAY 2025 

  ಸಂವಿಧಾನ ಈ ದೇಶದ ಪರಮೋಚ್ಚ ಗ್ರಂಥ 


ಸಮಾನತೆ ,  ಸ್ವಾತಂತ್ರ್ಯ , ಭ್ರಾತೃತ್ವ ಮತ್ತು ನ್ಯಾಯದ ತಳಹದಿಯ ಮೇಲೆ ನಿರ್ಮಿತ ಗೊಂಡಿರುವ ಸಂವಿಧಾನ ನಮ್ಮದು


    ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಸಂವಿಧಾನ ರಚಿಸಿ, ದೇಶಕ್ಕೆ ಭದ್ರ ಬುನಾದಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು, ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿದ್ದವರು,  'ಡಾ.ಬಿ.ಆರ್.ಅಂಬೇಡ್ಕರ್' ರವರು. ಇವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದೇ ಕರೆಯುತ್ತಾರೆ.


     ಭಾರತದ ಸಂವಿಧಾನವು ನವೆಂಬರ್ 26, 1949 ರಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ಜನೇವರಿ 26, 1950 ರಂದು ಜಾರಿಗೆ ತರಲಾಯಿತು. ಈ ದಿನ ಸಂವಿಧಾನವನ್ನು ಇಡೀ ಭಾರತ ಒಪ್ಪಿಕೊಂಡ ದಿನದ ನೆನಪಿಗಾಗಿ ಈ ದಿನವನ್ನು 2015 ರಿಂದ 'ಸಂವಿಧಾನ ದಿನ'ವನ್ನಾಗಿ ಆಚರಿಸಲಾಗುತ್ತದೆ.



ಶೋಷಿತ ವರ್ಗಗಳು, ನನ್ನ ಕಣ್ಣುಗಳು


1) ಮಹಿಳೆಯರಿಗೆ ಸಮಾನತೆಯನ್ನು ಹಾಗೂ ಗೌರವವನ್ನು ನೀಡದ ಸಮಾಜ ಎಂದೂ ಆದರ್ಶ ಸಮಾಜವಾಗಾರದು.


2) ಭಾರತದ ಶೋಷಿತ ವರ್ಗಗಳ ಹಿತಕಾಯಲೆಂದೇ ನಾನು ಮೊದಲು ಭಾರತ ಸಂವಿಧಾನ ಕರಡು ರಚನಾ ಸಮಿತಿಗೆ ಬಂದೆ, ದುರ್ಬಲ ವರ್ಗಗಳಿಗೆ ಮಾನವ ಹಕ್ಕುಗಳನ್ನು ಗಳಿಸಿಕೊಡಬೇಕೆಂಬುದೇ ನನ್ನ ಜೀವನದ ಧ್ಯೇಯ.


*ಚಿಂತನೆ ಇಲ್ಲದ ವ್ಯಕ್ತಿ ಇದ್ದೂ ಸತ್ತಂತೆ*


3) ಮನುಷ್ಯ ಚಿರಂಜೀವಿ ಆಗಲಾರ. ಆದರೆ ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ.


4) ಒಂದು ಗಿಡಕ್ಕೆ ನೀರು ಎಷ್ಟು ಅವಶ್ಯವಿದೆಯೋ, ಹಾಗೆಯೇ ಒಂದು ಚಿಂತನೆ ಪ್ರಸರಣವಾಗುವುದು ಅಷ್ಟೇ ಅಗತ್ಯ. ಇಲ್ಲವಾದರೆ ಎರಡೂ ಸಾಯುತ್ತವೆ.


ನಮ್ಮ ಸಾಧನೆಗಳು ಮಾತನಾಡುವಂತಿರಬೇಕು


5) ದೇಶದ ಹಿತಕ್ಕಿಂತ ಪಕ್ಷದ ಹಿತವನ್ನೇ ಪ್ರಧಾನವೆಂದು ಪರಿಗಣಿಸುವ ರಾಜಕೀಯ ಪಕ್ಷಗಳ ಹುನ್ನಾರದ ಬಗ್ಗೆ ಇಡೀ ದೇಶ ಎಚ್ಚರದಿಂದಿರಬೇಕಾಗುತ್ತದೆ. ಇಲ್ಲದೇ ಹೋದರೆ ದೇಶದ ಸ್ವಾತಂತ್ರ್ಯ, ಏಕತೆ ಹಾಗೂ ಸಂವಿಧಾನದ ಮೇಲೆ ಅಪಾಯದ ಕಾರ್ಮೋಡ ಕವಿಯುತ್ತವೆ.


6) ಸತ್ತ ಮೇಲೆ ಬದುಕಬೇಕು ಎಂದರೆ ಒಂದು ಕೆಲಸ ಮಾಡಿ ಹೋಗಿ, 'ಜನ ಓದುವ ಹಾಗೆ ಏನಾದರೂ ಒಂದು ಬರೆದಿಟ್ಟು ಹೋಗಿ, ಇಲ್ಲವಾದರೆ ಜನ ನಿಮ್ಮ ಬಗ್ಗೆ ಬರೆಯುವ ಹಾಗೆ ಏನಾದರೂ ಕಾರ್ಯ ಮಾಡಿ ಹೋಗಿ.'


ಶಿಕ್ಷಣವೇ ಶಕ್ತಿ


7) ಭಾರತದ ಜನತೆ ದೇವಸ್ಥಾನಗಳಿಗೆ ಸಾಲುಗಟ್ಟಿ ನಿಲ್ಲುವಂತೆ ಗ್ರಂಥಾಲಯಗಳಿಗೆ ಸಾಲುಗಟ್ಟಿ ಯಾವಾಗ ನಿಲ್ಲುತ್ತಾರೋ, ಅಂದು ಭಾರತ ಜಗತ್ತಿನ ಗುರುವಾಗಲಿದೆ.


8) ಶಿಕ್ಷಣ ಪ್ರಬಲ ಮತ್ತು ಪರಿಣಾಮಕಾರಿ ಅಸ್ತ್ರ ಎಂಬುದನ್ನು ಅರಿಯಬೇಕು.


ಆದರ್ಶ ಬದುಕು ಅಳವಡಿಸಿಕೊಳ್ಳಬೇಕು


9) ಜಾತಿಪದ್ಧತಿ ನಾಶವಾದರೆ ಮಾತ್ರ ಹಿಂದೂ ಸಮಾಜ ಆತ್ಮ ರಕ್ಷಣೆಗೆ ಸಮರ್ಥವಾಗಬಲ್ಲದು. ಇಂಥ ಆಂತರಿಕ ಶಕ್ತಿ ಇಲ್ಲದೆ ಹೋದರೆ ಸ್ವರಾಜ್ಯವೆಂಬುದು ಹಿಂದೂಗಳ ಪಾಲಿಗೆ ಗುಲಾಮಗಿರಿಯತ್ತ ಇಡುವ ಇನ್ನೊಂದು ಹೆಜ್ಜೆಯೇ ಆದೀತು.


10) ನನ್ನ ಜೈಕಾರ ಮಾಡುವುದಕ್ಕಿಂತ ನಾನು ತೋರಿಸಿದ ಮಾರ್ಗದಲ್ಲಿ ನಡೆಯಿರಿ.


ಸಂವಿಧಾನ ಸಮರ್ಪಣ ದಿನದಂದು ಸಂವಿಧಾನದ ಆಶಯಗಳನ್ನು ಮೊದಲ ಅಧ್ಯತೆಯಾಗಿ ಪರಿಗಣಿಸಿ ಎಲ್ಲರೂ ಸಂವಿಧಾನಾತ್ಮಕವಾಗಿ ನಡೆದುಕೊಳ್ಳೋಣ ....


MORE - CLICK BELOW


ಸಂವಿಧಾನ ದಿನ  _ https://shikshanaloka07.blogspot.com/2024/01/blog-post_25.html