ಸಂವಿಧಾನ ದಿನ

 ಸಂವಿಧಾನ ದಿನ ನವಂಬರ್‌ 26


   ನವೆಂಬರ್ 26 ಅನ್ನು 2015 ರಿಂದ ಸಂವಿಧಾನ ದಿನವನ್ನಾಗಿ ಆಚರಿಸಿಕೊಂಡು

ಬರಲಾಗುತ್ತಿದೆ. ಈ ಹಿನ್ನೆಲೆಯನ್ನಿಟ್ಟುಕೊಂಡು ಭಾರತದ ಸಂವಿಧಾನದ ಕುರಿತು 

ಹೆಚ್ಚಿನ ವಿವರ ಇಲ್ಲಿದೆ.


ಯಾಕೆ ಈ ದಿನ: 

      ಸಂವಿಧಾನವೆಂದಾಗ ಜನವರಿ 26 ನೆನಪಾಗುವುದು ಸಹಜ. ಆದರೆ, 2015 ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮದಿನದ ಅಂಗವಾಗಿ ಮೊದಲ ಬಾರಿಗೆ ನವೆಂಬರ್ 26 ಅನ್ನು ಸಂವಿಧಾನ ದಿನವನ್ನಾಗಿ ಘೋಷಿಸಲಾಯಿತು. ನವೆಂಬರ್ 26, 1949ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಗಿತ್ತು. ಇದು ಜಾರಿಗೆ ಬಂದದ್ದು ಜನವರಿ 26, 1950ರಂದು.


ಸಂವಿಧಾನದ ಇತಿಹಾಸ:

ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆ ಹೊಂದಿದರೂ ಆಡಳಿತ ವ್ಯವಸ್ಥೆಯಲ್ಲಿ

ಸ್ವಾತಂತ್ರ‍್ಯ ಪಡೆಯಲು ಕೆಲ ಕಾಲ ಕಾಯಬೇಕಾಯಿತು. 1946 ರಲ್ಲಿ

ಕ್ಯಾಬಿನೆಟ್ ಮಿಷನ್ ಭಾರತಕ್ಕೆ ಬಂದಾಗ ಸಂವಿಧಾನ ಸಭೆಯನ್ನು ರಚಿಸಲು 

ಒಪ್ಪಿಗೆ ದೊರೆಯಿತು. ಇದರ ಮೊದಲ ಸಭೆ 1946 ರ ಡಿ. 9 ರಂದು ಹೊಸದಿಲ್ಲಿಯಲ್ಲಿ ನಡೆಯಿತು. ಈ ಸಭೆಗೆ ರಾಜೇಂದ್ರ ಪ್ರಸಾದರು ಸಂವಿಧಾನ 

ಸಭೆಯಅಧ್ಯಕ್ಷರಾಗಿದ್ದರು. ಡಾ. ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯ

ಅಧ್ಯಕ್ಷರಾಗಿ ಭಾರತಕ್ಕೆ ಉತ್ತಮ ಸಂವಿಧಾನ ದೊರಕಿಸಿಕೊಟ್ಟರು.


ಕಡಿಮೆ ತಿದ್ದುಪಡಿ:

ಭಾರತದ ಸಂವಿಧಾನವು 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳು, 103 ತಿದ್ದುಪಡಿಗಳನ್ನು ಹೊಂದಿದೆ. ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳೆಯರು. ಇದರ ಕರಡನ್ನು 1949 ರ ನವೆಂಬರ್‌ನಲ್ಲಿ ಸಲ್ಲಿಸಲಾಯಿತು. ಸಲ್ಲಿಕೆ ಬಳಿಕ ಅದನ್ನು  ಪೂರ‍್ಣಗೊಳಿಸಲು ಮೂರು ವರ್ಷ  ಬೇಕಾಯಿತು. ಸಂವಿಧಾನ ರಚನಾ

ಸಮಿತಿಯಲ್ಲಿದ್ದ ಎಲ್ಲ 284 ಮಂದಿ ಸದಸ್ಯರು 1950ರ ಜನವರಿ 24ರಂದು ಈ

ದಾಖಲೆಗೆ ಸಹಿ ಮಾಡಿದರು. ಭಾರತದ ರಾಷ್ಟ್ರಲಾಂಛನವನ್ನೂ ಅದೇ ದಿನ ಅಳವಡಿಸಿಕೊಳ್ಳಲಾಯಿತು. ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ

ಎಂದು ಸಂವಿಧಾನಗಳಲ್ಲೊಂದು ಹೇಳಲಾಗಿದೆ. ಏಕೆಂದರೆ ಅದಕ್ಕೆ ಕೇವಲ 103 ತಿದ್ದುಪಡಿಗಳನ್ನು ತರಲಾಗಿದೆ. 


ಉದ್ದವಾದ ಸಂವಿಧಾನ

    ಭಾರತದ ಸಂವಿಧಾನವನ್ನು ಟೈಪ್ ಮಾಡಿರುವುದಿಲ್ಲ ಅಥವಾ ಮುದ್ರಿತವೂ ಅಲ್ಲ. ಅದನ್ನು ಕೈಯಲ್ಲಿ ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ. ಭಾರತದ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಇದು ಭಾರತದ

ಸಂಸತ್ ಭವನದ ಗ್ರಂಥಾಲಯದಲ್ಲಿದೆ. ಭಾರತದ ಸಂವಿಧಾನವನ್ನು ಬೇರೆ ಕಡೆಗಳಿಂದ ಪಡೆದ ಅಂಶಗಳ ಚೀಲ ಎಂದು ಕರೆಯಲಾಗುತ್ತಿದೆ.

ಸ್ವಾತಂತ್ರ‍್ಯ' ಸಮಾನತೆ ಹಾಗೂ ಭ್ರಾತೃತ್ವದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಪಡೆಯಲಾಗಿದೆ. ಪಂಚ ವಾರ‍್ಷಿಕ ಯೋಜನೆಯ ಕಲ್ಪನೆಯನ್ನು

ಸೋವಿಯತ್ ಒಕ್ಕೂಟದಿಂದ, ರಾಜ್ಯ ನಿರ‍್ದೇಶನ ತತ್ತ್ವಗಳನ್ನು  ಐರ‍್ಲೆಂಡ್

ಸಂವಿಧಾನದಿಂದ, ಸುಪ್ರೀಂ ಕೋರ‍್ಟ್‌ ಕಾರ‍್ಯನಿರ‍್ವಹಣೆಯ ಕಾನೂನನ್ನು

ಜಪಾನ್‌ನಿ೦ದ ಎರವಲು ಪಡೆಯಲಾಗಿದೆ.

*******


ಭಾರತದ ಸಂವಿಧಾನವನ್ನು 1949ರ ನವೆಂಬರ್ 26ರಂದು ಅಂಗೀಕರಿಸಿದ್ದು, ಈ ದಿನವನ್ನು ಸಂವಿಧಾನ ದಿನ ಎಂದು ಆಚರಣೆ ಮಾಡಲಾಗುತ್ತದೆ. ಸಂವಿಧಾನದ ರಚನೆ, ಮುಖ್ಯಾಂಶಗಳ ಬಗ್ಗೆ ಪಕ್ಷಿ ನೋಟವಿದು.

• ಸ್ವಾತಂತ್ರ‍್ಯದ ನಂತರ ನಮ್ಮ ದೇಶಕ್ಕೊಂದು ಸಂವಿಧಾನದ ಅಗತ್ಯವಿದೆ ಎ೦ಬುದನ್ನು ಮನಗ೦ಡಿದ್ದ ಅಂದಿನ ನಾಯಕರು, ದೇಶವನ್ನಾಳುವವರು, ದೇಶದ ಪ್ರಜೆಗಳಿಗಾಗಿ ರಚಿಸಿದ ಮಾರ್ಗ ಸೂಚಿಯೇ ಸಂವಿಧಾನ ಎನ್ನಬಹುದು. 

• ಬರೋಬ್ಬರಿ 2 ವರ‍್ಷ 11 ತಿಂಗಳು, 12 ದಿನ, 64 ಲಕ್ಷ ರು. ವೆಚ್ಚದಲ್ಲಿ 60 ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಬಿ.ಆರ್. ಅಂಬೇಡ್ಕರ್ ನೇತೃ ತ್ವದ ಸಮಿತಿ ಸಂವಿಧಾನ ರಚಿಸಿತು. ಆಗ 395 ವಿಧಿ, 22 ಭಾಗಗಳು, 8 ಶೆಡ್ಯೂಲ್ಸ್ ಮಾತ್ರ ಇದ್ದವು.


* ಸಂವಿಧಾನ ರಚನಾ ಸಮಿತಿಯ ಮೊದಲ ಸಭೆಯು 9 ಡಿಸೆಂಬರ್

1946 ರಲ್ಲಿ ನಡೆಯಿತು. ಒಟ್ಟು 389 ಸದಸ್ಯರ ಸಮಿತಿಯು ದೇಶ ಇಬ್ಬಾಗವಾಗಿ 

299 ಸದಸ್ಯರಿಗೆ ಕುಗ್ಗಿತು.


• ಜಗತ್ತಿನಲ್ಲೇ ದೊಡ್ಡ ಸಂವಿಧಾನ ಹೊಂದಿರುವ ನಾವು, ಜಗತ್ತಿನ ಕೆಲ ದೇಶಗಳಿ೦ದ ಸೂಕ್ತವಾದದನ್ನು ಎರವಲು ಪಡೆದಿದ್ದೇವೆ. • ಮೂಲಭೂತ ಹಕ್ಕು: (ಭಾಗ 3, ಕಲಂ 12-35) ದೇಶದ ಪ್ರತಿಯೊಬ್ಬ  ಪ್ರಜೆಗೂ ಸಮಾನ ಹಕ್ಕುಗಳಿವೆ. 


• ವಾಕ್ ಸ್ವಾತಂತ್ರ‍್ಯದ ಹಕ್ಕು: ನಿಮ್ಮದೇ ಸಂಘ ಸಂಸ್ಥೆ ಕಟ್ಟುವ, ಯಾವುದೇ ರ‍್ಮ ಸ್ವೀಕರಿಸುವ/ಪಾಲಿಸುವ, ಮಾಹಿತಿ ಪಡೆಯುವ( ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿ ಹೊರತುಪಡಿಸಿ), ದೇಶದ ಯಾವ ಮೂಲೆಯಲ್ಲಾದರೂ ಬದುಕುವ, ಚುನಾವಣೆಗೆ ನಿಲ್ಲುವ ಹಕ್ಕು

ನೀಡಲಾಗಿದೆ. ಅಗತ್ಯ ಬಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡುವ

ಅವಕಾಶವೂ ಇದೆ.


• ಮುಖ್ಯ ನ್ಯಾಯಮೂರ‍್ತಿ, ಪ್ರಧಾನಿ, ರಾಜ್ಯಪಾಲರರಿಂದ ಹಿಡಿದು ಗ್ರಾಪಂ ಸದಸ್ಯನವರೆಗೆ ಅವರ ಕರ‍್ತವ್ಯ, ಸೌಲಭ್ಯ, ಚುನಾವಣೆ, ಸಂಬಳ, ಉಚ್ಚಾಟನೆಯ ಬಗ್ಗೆಯೂ ವಿವರಣೆಯಿದೆ.


• ಸಮಗ್ರ ಮಾಹಿತಿ ಹೊಂದಿದ ಸಂವಿ ಧಾನವನ್ನು ಓದದೇ, ಗ್ರಹಿಸದೇ ಮನ ಬ೦ದ೦ತೆ ಮಾತಾಡುವವರ ಸಂಖ್ಯೆ ಕಡಿಮೆಯಿಲ್ಲ. ಕೊಲೆಗಡುಕನೊಬ್ಬ ಸಿಕ್ಕರೆ ಅವನನ್ನು ನೇಣಿಗೆ ಹಾಕಬೇಕು ಎಂದು ಜನಾಭಿಪಾಯ ಮೂಡುತ್ತದೆ. ಆದರೆ, ಆ ಕೊಲೆಗೆ ಪ್ರೇರಣೆ, ರೂವಾರಿಗಳಾರು ಎಂಬುದನ್ನು ತಿಳಿಯುವ, ಸೂಕ್ತ ಸಾಕ್ಷಿ ಇಲ್ಲದೇ ನಿರಪರಾಧಿಯನ್ನು ರಕ್ಷಿಸುವ ಆಶಯ ವನ್ನು ಸಂವಿಧಾನವು ಹೊಂದಿದೆ.


 • ಗಾಂಧೀಯನ್ನು ಗುಂಡಿಟ್ಟು ಕೊಂದ ಗೋಡೆ, ತಾನೇ ಹೊಣೆ ಎಂದು ಹೇಳಿದ್ದನ್ನಷ್ಟೇ ಪರಿಗಣಿಸದೇ,ಮು೦ದಿನ ತನಿಖೆ ಮಾಡಲಾಯಿತು. ಈ ಮೂಲಕ ನಾರಾಯಣ ಆಪ್ಟೆ, ಪಿಸ್ತೂಲ್ ಒದಗಿಸಿದ ಗೋಡೆ ಸಹೋದರನಿಗೂ ಕಾನೂನಿನ ಚಾಟಿಯೇಟು ನೀಡಲಾಗಿತ್ತು. 1 ವರ‍್ಷ 9 ತಿಂಗಳ ವಿಚಾರಣೆ ಮಾಡಿಯೇ ಅಂತಿಮ ತೀರ‍್ಪು ನೀಡಲಾಗಿತ್ತು.

*****

         ಭಾರತದ ಸಂವಿಧಾನದ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಡುವುದು, ಸಂವಿಧಾನದ ಶಿಲ್ಪಿ ಡಾ. ಅಂಬೇಡ್ಕರ್ ಜೀವನ, ಸಾಧನೆ ಬಗ್ಗೆ ಜಾಗೃತಿ ಮೂಡಿಸುವುದು, ಎಲ್ಲ ಶಾಲಾ ಮಕ್ಕಳಿಗೆ ಸಂವಿಧಾನದ ಬಗ್ಗೆ ಬೋಧಿಸಲು ನವೆಂಬರ್ 26ನ್ನು ಭಾರತದಾದ್ಯಂತ ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ.


       2015 ರಲ್ಲಿ ಅಂಬೇಡ್ಕರ್ ಅವರ 125ನೇ ಜನ್ನೊತ್ಸವದ ಆಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನ. 26ನ್ನು ಸಂವಿಧಾನ ದಿವಸ್ ಆಚರಣೆಗೆ ಕರೆ ನೀಡಿದ್ದರು. 1949 ರ ಆ ದಿನ ಸಂವಿಧಾನವನ್ನು ಅಂಗೀಕರಿಸಲಾಯಿತು. ನಂತರ ಅಂದರೆ 1950ರ ಜನವರಿ 26ರಂದು ಅನುಷ್ಠಾನಕ್ಕೆ ತರಲಾಯಿತು. ಇದು ಭಾರತದ ಇತಿಹಾಸದಲ್ಲಿ ಹೊಸ ಶಖೆಯನ್ನು ಆರಂಭಿಸಿತ್ತು. ಭಾರತದ ಸಂವಿಧಾನದಲ್ಲಿ 448 ವಿಧಿ, 25 ಭಾಗಗಳು, 12 ಶೆಡ್ಯೂಲ್,  5 ಅನುಬಂಧಗಳು ಸೇರಿ 98 ತಿದ್ದುಪಡಿಗಳಿವೆ. ಸಂವಿಧಾನ ರಚನಾ ಸಮಿತಿಯಲ್ಲಿ 284 ಸದಸ್ಯರಿದ್ದರು ಅವರಲ್ಲಿ 15 ಮಂದಿ ಮಹಿಳೆಯರು ಇದರ ಕರುಳನ್ನು 1949 ನವಂಬರ್ ನಲ್ಲಿ ಸಲ್ಲಿಸಲಾಯಿತು ಸಲ್ಲಿಕೆ ಬಳಿಕ ಅದನ್ನು ಪರ‍್ಣಗೊಳಿಸಲು ಮೂರು ರ‍್ಷ ಬೇಕಾಯಿತು ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲಾ 284 ಮಂದಿ ಸದಸ್ಯರು 1956 ರ ಜನವರಿ 24 ರಂದು ಈ ದಾಖಲೆಗೆ ಸಹಿ ಮಾಡಿದರು ಭಾರತದ ಸಂವಿಧಾನದ ಮೂಲ ಪ್ರತಿಯನ್ನು ಸಂಪೂರ್ಣ ಹಸ್ತಾಕ್ಷರಗಳಲ್ಲಿ ಬರೆಯಲಾಗಿದೆ. ಇದು ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿದೆ ಭಾರತ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ತುಂಬಿದ ಕವಚಗಳಲ್ಲಿ ಸಂಬಂಧಿಸಲಾಗಿದೆ ಇದು ಸಂಸತ್ ಭವನದ ಗ್ರಂಥಾಲಯದಲ್ಲಿದೆ.

****

ಸಂವಿಧಾನ ಪೀಠಿಕೆ