ಸ್ವಾತಂತ್ರ್ಯ ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನವನ್ನು ಸ್ಮರಿಸೋಣ.

ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ ಎಂದು  ಡಾ: ಎಸ್. ರಾಧಾಕೃಷ್ಣನ್ ಅವರ ನುಡಿಮುತ್ತು.ಇಂದು ಜನರು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಬೇಕಾದರೆ ಅವರು ಶಿಕ್ಷಣ ಪಡೆಯುವುದು ಬಹಳ ಮುಖ್ಯವಾಗಿದೆ.ಇಂದಿನ ಕಾಲದಲ್ಲಿ ಶಿಕ್ಷಣ ಬಹಳ ಅವಶ್ಯಕವಾಗಿದೆ.ನಾವೆಲ್ಲರೂ ಸಮಾಜದಲ್ಲಿ ವಾಸಿಸುತ್ತಿದ್ದೇವೆ,ನಮ್ಮ ಸಮಾಜವು ಉತ್ತಮ ಉದ್ಯೋಗವನ್ನು ಪಡೆಯುವ ಮೂಲಕ ನಾವೆಲ್ಲ ವಿದ್ಯಾವಂತರಾಗಬೇಕು ಮತ್ತು ಯಶಸ್ವಿಯಾಗಬೇಕೆಂದು ನಿರೀಕ್ಷಿಸುತ್ತದೆ. ಯಶಸ್ವಿ ಜನರು ಸಮಾಜದ ಆಧಾರ ಸ್ತಂಭಗಳು, ಅವರ ಹೆಗಲ ಮೇಲೆ ಸಮಾಜ ನಿಂತಿದೆ. ಶಿಕ್ಷಣವು ನಿಮ್ಮನ್ನು ಸಮಾಜಕ್ಕೆ ನಿಮ್ಮ ಜೀವನದಲ್ಲಿ ನಿಮ್ಮ ಕನಸು ಯಶಸ್ವಿ ವ್ಯಕ್ತಿಯಾಗುವುದು, ಅತ್ಯಂತ ಶ್ರೀಮಂತರಾಗುವುದು, ಪ್ರಸಿದ್ಧರಾಗುವುದು, ಆದ್ದರಿಂದ ಕನಸುಗಳನ್ನು ನನಸಾಗಿಸುವ ಏಕೈಕ ಮಂತ್ರವೆಂದರೆ ಶಿಕ್ಷಣ. ಇಂದು 11/11/2024  ರಂದು ರಾಷ್ಟ್ರೀಯ ಶಿಕ್ಷಣ ದಿನ, ಜನರಿಗೆ ಈ ಮಹತ್ವ ತಿಳಿಯಲು ಒಂದು ವಿಶೇಷ ಲೇಖನ. 

ಭಾರತದ ಮೊದಲ ಉಪರಾಷ್ಟ್ರಪತಿಯಾದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ನಾವು ಶಿಕ್ಷಕರ ದಿನವನ್ನು ಆಚರಿಸುವ ರೀತಿಯಲ್ಲೇ, ಸ್ವಾತಂತ್ರ್ಯ ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್ (ಮೌಲಾನಾ ಸಯ್ಯಿದ್ ಅಬುಲ್ ಕಲಾಂ ಗುಲಾಮ್ ಮುಹಿಯುದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್-ಹುಸೇನಿ ಆಜಾದ್  ಎಂದು ಕರೆಯುತ್ತಾರೆ) ಅವರ ಜನ್ಮ ದಿನಾಚರಣೆಯಂದು "ರಾಷ್ಟ್ರೀಯ ಶಿಕ್ಷಣ ದಿನವನ್ನು  ಪ್ರತಿವರ್ಷ ನವೆಂಬರ್ 11 ರಂದು ಆಚರಿಸಲಾಗುತ್ತದೆ.


*#ಹಿನ್ನೆಲೆ#*

ಸೆಪ್ಟೆಂಬರ್ 11, 2008 ರಂದು, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ (ಈಗ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ) ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ನವೆಂಬರ್ 11 ಅನ್ನು ರಾಷ್ಟ್ರೀಯ ಶಿಕ್ಷಣ ದಿನವೆಂದು ಘೋಷಿಸಿತು.ನವೆಂಬರ್ 11, 1888 ರಲ್ಲಿ ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರು ಜನಿಸಿದರು. 


*#ಬರವಣಿಗೆಗಳು#*

ಆಜ಼ಾದ್ ಅವರು ೨೦ನೇ ಶತಮಾನ ಕಂಡ ದೊಡ್ಡ ಉರ್ದು ವಿದ್ವಾಂಸರು. ಅವರ ಪ್ರಮುಖ ಬರೆವಣಿಗೆಗಳು- India Wins Freedom, ಘುಬರ್-ಎ-ಖತಿರ್, ತಜ಼್ಕಿರಾಹ್, ತರ್ಜುಮನುಲ್ ಕುರಾನ್

#ಉರ್ದು ವಿದ್ವಾಂಸರು:

ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ ಬರವಣಿಗೆಗಾಗಿ ‘ಆಜಾದ್’ ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. 'ಆಜಾದ್' ಎಂದರೆ ಸ್ವತಂತ್ರ. ಯಾವುದೇ ಪೂರ್ವಗ್ರಹ ಆಲೋಚನೆಗೆ ಒಳಗಾಗಿರಲಿಲ್ಲ ಅವರು. ಮೌಲಾನಾ ಎಂಬುದು ಅವರ ಮನೆತನದಿಂದ ಬಂದ ಹೆಸರು. ಅವರ ತಂದೆ ಮೆಕ್ಕಾದಲ್ಲಿ ಬಹು ದೊಡ್ಡ ವಿದ್ವಾಂಸರು. ಹೀಗಾಗಿ ಅವರು ಮೌಲಾನಾ ಆಜಾದ್ ಎಂದೇ ಪ್ರಸಿದ್ದರು. ಕಲ್ಕತ್ತಾಗೆ ಬಂದ ತಮ್ಮ ತಂದೆಯವರನ್ನು, ಅವರ ವಿದ್ವತ್ತಿಗೆ ಮಾರುಹೋಗಿ ಜನರು ಬಲವಂತ ಮಾಡಿ ಭಾರತದಲ್ಲಿಯೇ ಉಳಸಿಕೊಂಡರು.

ಮೌಲಾನಾ ಅಬುಲ್ ಕಲಾಂ ಅವರು ಫೆಬ್ರುವರಿ 22, 1958 ರಂದು  ನಿಧನರಾದರು.