ಸಾಹಿತ್ಯ: ಡಾ.ಎಚ್. ಎಸ್. ವೆಂಕಟೇಶ್ ಮೂರ್ತಿ
ಸಂಗೀತ:-ಸಿ.ಅಶ್ವಥ್
ಗಾಯಕರು:-ವಿಜಯ ಪ್ರಕಾಶ್
ಬೇವ ಅಗಿವ ಸವಿ ಗಾನದ ಹಕ್ಕಿ
ಹಾಡಿ ಮುಕ್ತ ಮುಕ್ತ...||
ಹಸಿರ ತೋಳಿನಲಿ ಬೆಂಕಿಯ ಕೂಸ
ಪೊರೆವುದು ತಾಯಿಯ ಹೃದಯ..
ಮರೆಯುವುದುಂಟೆ ಮರೆಯಲಿ ನಿಂತೆ
ಕಾಯುವ ಕರುಣಾಮಯಿಯ..||
ತನ್ನಾವರಣವೆ ಸೆರೆಮನೆಯಾದರೆ
ಜೀವಕೆ ಎಲ್ಲಿಯ ಮುಕ್ತಿ...
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
ಬಯಲೇ ಜೀವನ್ಮುಕ್ತಿ ||
ಹೂ ಮೊಗವಾಡದ ಇರಿಯುವ ಮುಳ್ಳೇ
ಎಲ್ಲಿವರೆಗೆ ನಿನ್ನಾಟ
ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ
ಕಲಿಸಿದೆ ಜೀವನ ಪಾಠ...||
ಇರುಳ ವಿರುದ್ಧ, ಬೆಳಕಿನ ಯುದ್ಧ
ಕೊನೆಯಿಲ್ಲದ ಕಾದಾಟ...
ತಡೆಯೆ ಇಲ್ಲದೇ, ನಡೆಯಲೇ ಬೇಕು
ಸೋಲಿಲ್ಲದ ಹೋರಾಟ...||