87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ- ಮಂಡ್ಯ


    ಮಂಡ್ಯದಲ್ಲಿ ನಡೆಯಲಿರುವ 87ನೇ 

ಅಖಿಲ ಭಾರತ ಕನ್ನಡ ಸಾಹಿತ್ಯ...

ಸಮ್ಮೇಳನದ ಸರ್ವಾಧ್ಯಕ್ಷರಾಗಿ...

ಹಿರಿಯ ಜಾನಪದ ವಿದ್ವಾಂಸ...

ಗೊ.ರು. ಚನ್ನಬಸಪ್ಪ  ಆಯ್ಕೆಯಾಗಿದ್ದಾರೆ.


   ಕಸಾಪ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಗೊರುಚ ಅವರು ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಗೊಂಡೇದಹಳ್ಳಿಯವರು.



 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆನ್ ಲೈನ್ ನೊಂದಣಿಗೆ ಚಾಲನೆ....



     ಈ ಬಾರಿ ವಿನೂತನವಾಗಿ  87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೊಂದಣಿಯನ್ನು ಆನ್ ಲೈನ್ ಮೂಲಕ ಮಾಡಲಾಗುತ್ತಿದ್ದು, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್‌ ಚಲುವರಾಯಸ್ವಾಮಿ ಅವರು ಇಂದು ಕೆ.ಆರ್.ಎಸ್ ನ ರಾಯಲ್ ಆರ್ಕಿಡ್ ನಲ್ಲಿ ಚಾಲನೆ ನೀಡಿದರು.


      ನೊಂದಣಿಗೆ ರೂ 600 ನಿಗದಿ ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ನೊಂದಣಿಯಾಗಿ ಭಾಗವಹಿಸಲು ರೂ. 600 ನಿಗದಿಯಾಗಿರುತ್ತದೆ.


      ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ ಸೈಟ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಿರುವವರು ನೊಂದಣಿ ಮಾಡಿಕೊಳ್ಳಲು ಇಂದಿನಿಂದ 20 ದಿನಗಳ ಕಾಲ  ಅವಕಾಶ ನೀಡಲಾಗಿದೆ. ಆನ್ ಲೈನ್ ನಲ್ಲಿ ಅರ್ಜಿ ಭರ್ತಿ ಮಾಡಿದ ನಂತರ ಹಣ‌ ಪಾವತಿ ಕೂಡ ಆನ್‌ಲೈನ್ ಮೂಲಕ‌ ಮಾಡಬೇಕಿರುತ್ತದೆ.


     ಜಿಲ್ಲಾಧಿಕಾರಿ ಡಾ: ಕುಮಾರ ಅವರು ಮಾತನಾಡಿ ನೊಂದಣಿಯಾಗುವವರಿಗೆ ಆನ್ ಲೈನ್ ಮೂಲಕ ವಸತಿ ಒದಗಿಸುವ ಸ್ಥಳ, ವಿಳಾಸ, ನೋಡಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆ, ಹಾಗೂ ಆನ್ ಲೈನ್ ನಲ್ಲೇ ಫೋಟೋ ಸಹಿತ ಗುರುತಿನ ಚೀಟಿ ಒದಗಿಸಲಾಗುವುದು ಎಂದರು.


     87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆನ್ ಲೈನ್ ನೊಂದಣಿಗೆ ಚಾಲನೆ ಈ ಲಿಂಕ್ ಮೂಲಕ ನೊಂದಣಿ ಮಾಡಬಹುದು...👇👇

https://kannadasahithyaparishattu.in/sammelana2024/


     ಮಂಡ್ಯ ಡಿಸೆಂಬರ್ 20 21 22 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರಲು  ಹೊರ ಜಿಲ್ಲೆಯಿಂದ ಬರುವಂತಹ ಪ್ರತಿನಿಧಿಗಳು ಆನ್ ಲೈನ್ ನಲ್ಲೇ ನೊಂದಾಯಿಸಿಕೊಳವ ಅವಕಾಶ ಕಲ್ಪಿಸಲಾಗಿದೆ ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿನೋಡಿ ...