ಏನಿತೋ ಜನ ಏನಿತೋ ಮನ - ಸಾಹಿತ್ಯ:-ಪ್ರೊ||ದೊಡ್ಡರಂಗೇಗೌಡ

ಸಾಹಿತ್ಯ:-ಪ್ರೊ||ದೊಡ್ಡರಂಗೇಗೌಡ

ಸಂಗೀತ:-ಇಂದೂ ವಿಶ್ವನಾಥ್

ಗಾಯನ:-ಸಮೂಹ ಗಾಯನ


ಏನಿತೋ ಜನ                      

ಏನಿತೋ ಮನ

ಆದರೂ ಒಂದೇ ಭಾರತ

ಭಾರತ ಸಾರಿದೆ ಒಮ್ಮತ ||


ಎನಿತೆನಿತೋ ಭಾಷೆ

ಎನಿತೆನಿತೋ ವೇಷ

ಆದರು ಒಂದೇ ಭಾರತ

ಭಾರತ ಸಾರಿದೆ ಏಕತಾ ||


ಎನಿತೆನಿತೋ ಜಾತಿ

ಎನಿತೆನಿತೋ ಧರ್ಮ

ಎಂದೆಂದು ಒಂದೇ ಭಾರತ

ಭಾರತ ತೋರಿದೆ ಐಕ್ಯತಾ ||


ಎನಿತೆನಿತೋ ರಾಜ್ಯ 

ಎನಿತೆನಿತೋ ವ್ಯಾಜ್ಯ

ಏನಾದರೂ ಒಂದೆ ಭಾರತ

ಭಾವೈಕ್ಯ ತೋರಿದೆ ಅನವರತ ||


ಎನಿತೆನಿತೋ ರೀತಿ 

ಎನಿತೆನಿತೋ ರಿವಾಜು

ಏನಿದ್ದರೂ ಒಂದೆ ಭಾರತ

ಐಕ್ಯತೆ ಎಂಬುದೆ ಅಭಿಮತ ||