ದೇಶವೆ ಮೊದಲು ಎನ್ನೋಣ ಭಾರತ ಮಾತೆಗೆ ನಮಿಸೋಣ - ಉಪಾಸನಾ ಮೋಹನ್

 

ಸಾಹಿತ್ಯ ಮತ್ತು ಸಂಗೀತ:-ಉಪಾಸನಾ ಮೋಹನ್

ಗಾಯನ:-ಪಂಚಮ್ ಹಳಿಬಂಡಿ,ಉಪಾಸನಾ ಮೊಹನ್,ಮೇಘನಾ ಭಟ್,ಚಿನ್ಮಯಿ ಚಂದ್ರಶೇಖರ್


ದೇಶವೆ ಮೊದಲು ಎನ್ನೋಣ

ಭಾರತ ಮಾತೆಗೆ ನಮಿಸೋಣ

ಕಲಿಗಳ ಕವಿಗಳ ಯೋಧರ ಸ್ಮರಿಸಿ

ನಿತ್ಯ ಉತ್ಸವವ ಮಾಡೋಣ

ನಿತ್ಯೋತ್ಸವವನು ಮಾಡೋಣ ||


ದೇಶವ ಕಟ್ಟಲು ದುಡಿದವರೆಷ್ಟೋ

ಅವರ ತ್ಯಾಗವ ಸ್ಮರಿಸೋಣ

ದೇಶ ಪ್ರೇಮವೇ ನಾಡಿನ ಏಳಿಗೆ

ಕೋಟಿ ಕಂಠದಲಿ ಸಾರೋಣ

ನಿತ್ಯೋತ್ಸವವನು ಮಾಡೋಣ ||


ದೇಶದಿ ನೆತ್ತರು ಬೀಳದ ಹಾಗೆ

ವೈರಿ ಪಡೆಗಳನು ಹಣಿಯೋಣ 

ಶಾಂತಿದೂತರು ನಾವೆನ್ನುತಲಿ

ವಿಶ್ವ ಪ್ರೇಮವ ಪಡೆಯೋಣ

ನಿತ್ಯೋತ್ಸವವನು ಮಾಡೋಣ ||