ಓದುವ ಅಭಿಯಾನದ ಮೂರನೇ ದಿನ (05/09/2024) ಚಟುವಟಿಕೆಗಳು.

 

ಮೂರನೇ ದಿನದ ಚಟುವಟಿಕೆ : 





ಕಥೆಯನ್ನು ಗಟ್ಟಿಯಾಗಿ ಓದುವುದು.


(ಯಾವುದಾದರೂ ಕಥೆಯನ್ನು ಆಯ್ದುಕೊಳ್ಳಿ - ಎರೆಹುಳಕ್ಕೆ ಸಂಂಬಂಧಿಸಿ ಕಥೆ ಆದರೆ ಉತ್ತಮ)


    ಶಿಕ್ಷಕರು ತರಗತಿಯಲ್ಲಿರುವ ಮಕ್ಕಳ ವಯಸ್ಸು ಮತ್ತು ಮಕ್ಕಳ ಸರಾಸರಿ ಓದಿನ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಕಥೆಯನ್ನು ಓದುವ ನೇತೃತ್ವ ವಹಿಸುವುದು. (ಮಾಹಿತಿಗಾಗಿ ಉಲ್ಲೇಖಿತ ಸಾಮಗ್ರಿಯನ್ನು ಅನುಸರಿಸಿ)



ಕಥೆ :  ಎರೆಹುಳಗಳು ಮಣ್ಣಿನ ಮಿತ್ರರು


(ಕಥೆ ಲಭ್ಯವಿಲ್ಲ)




  ಕಥೆಯ ನಂತರದ ಚಟುವಟಿಕೆ


ಗಟ್ಟಿಯಾಗಿ ಓದುವುದು


ಶಿಕ್ಷಕರು ಈ ಕಥೆಯನ್ನು ತಮ್ಮ ತರಗತಿ ಮಕ್ಕಳಿಗೆ ಗಟ್ಟಿಯಾಗಿ ಓದುತ್ತಾರೆ. ಆ ನಂತರ, ಕಥೆಯ ಕಥಾವಸ್ತು, ಪಾತ್ರಗಳು, ಮತ್ತು ವಿಷಯಗಳನ್ನು ಚರ್ಚಿಸುತ್ತಾರೆ. ಈ ಕೆಳಗಿನ ಪ್ರಶ್ನೆಗಳನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಬಹುದು:


1. ಮಣ್ಣಿನ ಮಿತ್ರ ಯಾರು?


2. ಎರೆಹುಳುಗಳು ಇಲ್ಲದಿದ್ದರೆ ಮನುಷ್ಯರ ಮೇಲೆ ಯಾವ ಪರಿಣಾಮ ಬೀರುತ್ತಿತ್ತು?


3. ಪರಿಸರ ವ್ಯವಸ್ಥೆಯಲ್ಲಿ ನಾವು ಮನುಷ್ಯರು ಯಾವ ರೀತಿ ಪಾತ್ರವಹಿಸುತ್ತೇವೆ?


ಓದಿದ ನಂತರದ ಚಟುವಟಿಕೆ -


 ಸ್ವಂತ ವಾಕ್ಯಗಳನ್ನು ರಚಿಸುವುದು...


ಗಟ್ಟಿಯಾಗಿ ಓದುವ ಚಟುವಟಿಕೆಯ ನಂತರ, ಕಥೆಯ ಬಗ್ಗೆ ಕೆಲವು ವಾಕ್ಯಗಳನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ತಿಳಿಸಿ. ಅವರು ತಮ್ಮ ನೆಚ್ಚಿನ ಭಾಗ, ಇಷ್ಟಪಟ್ಟ ಪಾತ್ರ, ಅಥವಾ ಕಥೆಯೊಂದಿಗೆ ಮಾಡಿದ ವೈಯಕ್ತಿಕ ಸಂಪರ್ಕದ ಬಗ್ಗೆ ಬರೆಯಬಹುದು. 

     ಕಡಿಮೆ ದರ್ಜೆಯ (ಅಂದರೆ, 1 ಮತ್ತು 2ನೇ ತರಗತಿ) ವಿದ್ಯಾರ್ಥಿಗಳು ತಮ್ಮ ವಾಕ್ಯಗಳನ್ನು ತರಗತಿಯೊಂದಿಗೆ ಅಥವಾ ಸಣ್ಣ ಗುಂಪುಗಳಲ್ಲಿ ಮೌಖಿಕವಾಗಿ ಹಂಚಿಕೊಳ್ಳಬಹುದು...



ಎರೆಹುಳದ ಮಾಹಿತಿ..




     ಎರೆಹುಳು ಮಣ್ಣಿನಲ್ಲಿ ವಾಸಿಸುವ ಒಂದು ಕ್ರಿಮಿ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚು ಮಾಡುತ್ತದೆ. ಅದರ ಜೀರ್ಣಕಾರಿ ವ್ಯವಸ್ಥೆಯು ಅದರ ಶರೀರದ ಉದ್ದಕ್ಕೂ ಹಾದು ಹೋಗುತ್ತದೆ.ರೈತನ ಮಿತ್ರ ನಿಸರ್ಗದ ನೇಗಿಲು ಎಂದೇ ಹೆಸರು ಮಾಡಿರುವ ಎರೆಹುಳ ಜೀವಿ ತಂತ್ರಜ್ಞಾನದ ಯಂತ್ರದಂತೆ ಎರೆಗೊಬ್ಬರ ತಯಾರಿಕೆಯಲ್ಲಿ ಮಹತ್ವದ ಪಾತ್ರವಹಿಸಿದೆ.