10 ದಿನ ಬ್ಯಾಗ್ ರಹಿತ ದಿನಗಳು...

     



    ಪ್ರತಿ ಶೈಕ್ಷಣಿಕ ವರ್ಷದಲ್ಲಿ 6,7, 8ನೇ ತರಗತಿ ಮಕ್ಕಳಿಗೆ 10 ದಿನ 'ಬ್ಯಾಗ್ ರಹಿತ ಶಾಲಾ ದಿನ' ಗಳನ್ನು ಜಾರಿಗೊಳಿಸುವ ಸಂಬಂಧ ಶಾಲೆಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಕ್ಕಳಲ್ಲಿ ಉಂಟಾಗುವ ಮಾನಸಿಕ ಒತ್ತಡ ನಿವಾರಿಸುವ ಜತೆಗೆ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದ್ದೇಶದಿಂದ ಬ್ಯಾಗ್ ರಹಿತ ದಿನ ಜಾರಿಗೊಳಿಸಲು ನಿರ್ಧರಿಸಲಾಗಿದೆ. ನಿರಂತರ ಪಠ್ಯಗಳ ನಡುವೆ ಮಕ್ಕಳ ಉತ್ಸಾಹ, ಉಲ್ಲಾಸಕಾಪಾಡಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ಸಚಿವಾಲಯ ತಿಳಿಸಿದೆ.ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್ ಸಿಇಆರ್ ಟಿ) ಅಂಗ ಸಂಸ್ಥೆಯಾದ ಪಂಡಿತ್ ಸುಂದರ್‌ಲಾಲ್ ಶರ್ಮಾ (ಪಿಎಸ್ಎಸ್) ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಫಾರ್ ವೊಕೇಷನಲ್ ಎಜುಕೇಷನ್ ನೂತನ ಮಾರ್ಗಸೂಚಿ ರೂಪಿಸಿದೆ.


ಮಾರ್ಗಸೂಚಿಯಲ್ಲಿ ಏನೇನಿದೆ?


* ಮಕ್ಕಳಲ್ಲಿ ಶಿಕ್ಷಣದ ಜತೆಗೆ ಕೌಶಲ ಹೆಚ್ಚಿಸುವ ಮತ್ತು ಭವಿಷ್ಯದ ವೃತ್ತಿ ಬದುಕಿಗೆ ನೆರವಾಗುವ ಉದ್ದೇಶ


* ಮರಗೆಲಸ, ವಿದ್ಯುತ್ ಕೆಲಸ, ಲೋಹದ ಕೆಲಸ, ತೋಟ ಗಾರಿಕೆ, ಕುಂಬಾರಿಕೆ ಸೇರಿದಂತೆ ವಿವಿಧ ವೃತ್ತಿಪರ ಕುಶಲ ಕಲೆಯ ಅಭ್ಯಾಸ


* ಬ್ಯಾಗ್‌ರಹಿತ ಅವಧಿಯಲ್ಲಿ ಬಡಗಿಗಳು, ತೋಟಗಾರಿಕೆಯಲ್ಲಿ ತೊಡಗಿರುವವರು, ಕುಂಬಾರರು ಮತ್ತಿತರ ಸ್ಥಳೀಯ ವೃತ್ತಿಪರರಿಂದ ವಿದ್ಯಾರ್ಥಿಗಳು ತರಬೇತಿ


* ತರಕಾರಿ ಮಾರುಕಟ್ಟೆಗೆ ಭೇಟಿ, ಸಾಕು ಪ್ರಾಣಿಗಳ ಆರೈಕೆ ಕುರಿತು ಸಮೀಕ್ಷೆ ಮತ್ತು ವರದಿ ರಚನೆ. ಚಿತ್ರ ಬರಹ, ಗಾಳಿಪಟ ತಯಾರಿಸುವುದು ಮತ್ತು ಹಾರಿಸುವುದು. ಪುಸ್ತಕ ಮೇಳ ಆಯೋಜನೆ. ಆಲದ ಮರದ ಕೆಳಗೆ ಕುಳಿತು ಕೊಳ್ಳುವುದು, ಜೈವಿಕ ಅನಿಲ ಘಟಕ ಮತ್ತು ಸೌರ ಶಕ್ತಿ ಪಾರ್ಕ್‌ಗಳಿಗೆ ಭೇಟಿ ನೀಡುವುದು ಸೇರಿದಂತೆ ಇತರ ಚಟುವಟಿಕೆ ನಡೆಸುವುದು.