ನಮ್ಮ ಮನೆ - ಒಳಾಂಗಣ
'ಬೆಚ್ಚನೆಯ ಮನೆಯಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚು' ಎಂದು ಸರ್ವಜ್ಞ ತನ್ನ ಒಂದು ವಚನದಲ್ಲಿ ಹೇಳಿದ್ದಾನೆ. ಪಶು-ಪಕ್ಷಿ, ಕ್ರಿಮಿಕೀಟಗಳಿಗೆ ತಮ್ಮ ಒಂದು ಮನೆ ಇರಬೇಕು ಎಂಬ ಆಸೆಯಿರುತ್ತದೆ. ಅಂದಮೇಲೆ ಮನುಷ್ಯನಿಗೆ ತನ್ನದೇ ಆದ ಒಂದು ಸುಂದರ ಮನೆ ಇರಬೇಕು ಎಂಬ ಆಸೆ ಸಹಜ. ಮನೆ ಎಂದ ಮೇಲೆ ಅದರ ಹೊರಗೆ ಮತ್ತು ಒಳಗೆ ಕೆಲವು ಅನುಕೂಲಗಳಿರಬೇಕು. ಮನೆಯ ಒಳಾಂಗಣದಲ್ಲಿ ಏನು ವ್ಯವಸ್ಥೆಗಳಿದ್ದರೆ ಚೆನ್ನ ಎಂದು ಯೋಜಿಸಬಹುದಲ್ಲವೇ.
ಮನೆಯ ಮುಂಬಾಗಿಲನ್ನು ಪ್ರವೇಶಿಸಿದ ಕೂಡಲೇ ಹಜಾರ ಇರಬೇಕು. ಇದು ಸಾಕಷ್ಟು ವಿಶಾಲವಾಗಿದ್ದರೆ ಒಳ್ಳೆಯದು. ಹಜಾರದಲ್ಲಿ ಕುರ್ಚಿ, ಸೋಫಾ ಗಳಿದ್ದರೆ ಅನುಕೂಲ, ಹಜಾರದಲ್ಲಿನ ಕಿಟಕಿ ಮತ್ತು ಬಾಗಿಲುಗಳಿಗೆ ಸುಂದರ ಪರದೆಗಳನ್ನು ಹಾಕಿದ್ದರೆ ಮತ್ತು ಗೋಡೆಗೆ ಆಕರ್ಷಕ ಚಿತ್ರಗಳನ್ನು ತೂಗು ಹಾಕಿದ್ದರೆ ಮನಸ್ಸು ಮುದಗೊಳ್ಳುತ್ತದೆ. ಟಿ.ವಿ. ನೆಲಹಾಸು ಇರುವುದು ಅದರ ಅಂದವನ್ನು ಹೆಚ್ಚಿಸುತ್ತದೆ.
ಮನಸ್ಸಿಗೆ ನೆಮ್ಮದಿ ಕೊಡುವ ಸ್ಥಳವೆಂದರೆ ಮನೆಯಲ್ಲಿನ ಪೂಜಾಗೃಹ ತಮ್ಮ ಇಷ್ಟದೈವದ ಫೋಟೋ ಅಥವಾ ವಿಗ್ರಹಗಳನ್ನಿಟ್ಟು ದಿನವೂ ಅವುಗಳನ್ನು ಹೂವಿನಿಂದ ಅಲಂಕರಿಸಿ ಪೂಜಿಸಿದರೆ ಮನಸ್ಸಿನ ಆವೇಗ, ತಳಮಳ ಮಾಯವಾಗುವುದರಲ್ಲಿ ಸಂದೇಹವಿಲ್ಲ.
ಮನೆಯ ಒಳಗಿನ ಅತಿ ಮುಖ್ಯವಾದ ಸ್ಥಳವೆಂದರೆ ಅಡುಗೆ ಕೋಣೆ. ತಿಂಡಿ- ತಿನಿಸು, ಭೋಜನ ಇತ್ಯಾದಿ ತಯಾರಿಸಲು ಅಡುಗೆಕೋಣೆಯಲ್ಲಿ ಅಗತ್ಯ ವಸ್ತುಗಳಾದ ಸ್ಟೋವ್, ಪಾತ್ರೆ, ನೀರಿನ ವ್ಯವಸ್ಥೆ ಇದ್ದು ಆಯಾಸವಿಲ್ಲದೆ ರುಚಿಶುಚಿಯಾದ ಅಡುಗೆ ತಯಾರಿಸಿ ಸಂತೋಷಿಸಬಹುದು. ಅಕ್ಕಿ, ಬೇಳೆ ಇತ್ಯಾದಿ ಉಪಯೋಗಿ ವಸ್ತುಗಳನ್ನು ಶೇಖರಿಸಲು ಅಡುಗೆಕೋಣೆಗೆ ಹೊಂದಿ ಕೊಂಡಂತೆ ಉಗ್ರಾಣ ಅಥವಾ ಸ್ಟೋರ್ ರೂಂ ಇರುವುದು ಒಳ್ಳೆಯದು. ಪಕ್ಕದಲ್ಲಿ ಡೈನಿಂಗ್ ಹಾಲ್ ಇರುವುದರಿಂದ ಭೋಜನ ಅಥವಾ ಔತಣ ಸಂದರ್ಭದಲ್ಲಿ ತುಂಬ ಆಹ್ಲಾದಕರವಾಗಿದ್ದು ನೆಮ್ಮದಿಯಿರುತ್ತದೆ.
ಮನೆಯಲ್ಲಿ ವಾಸಿಸುವವರು ದಿನವೂ ಸ್ನಾನಾದಿಗಳನ್ನು ಮಾಡಲು ಸ್ನಾನಗೃಹ ಅತ್ಯಗತ್ಯ. ಇಲ್ಲಿ ಬಿಸಿನೀರು. ತಣ್ಣೀರು ವ್ಯವಸ್ಥೆ ಸಮರ್ಪಕವಾಗಿರಬೇಕು. ಅಂತೆಯೇ ಬಟ್ಟೆ ತೂಗುಹಾಕಲು ಹಾಗೂ ಸೋಪು, ಬ್ರೆಷ್ ಇತ್ಯಾದಿ ಇಡಲು ಸ್ಟಾಂಡ್ ಇರುವುದು ಅಗತ್ಯ ಇದಕ್ಕೆ ಹೊಂದಿಕೊಂಡಂತೆ ಸಿಂಕ್ ಇರುವುದು ಅಪೇಕ್ಷಣೀಯ.
ಮನೆಯಲ್ಲಿರುವ ಸದಸ್ಯರಿಗೆ ಅನುಸಾರವಾಗಿ ಮನೆಯಲ್ಲಿ ಶಯನಕೋಣೆ ಇರಬೇಕು. ಅಲ್ಲಿ ಮಂಚ, ಹಾಸಿಗೆ, ಕುರ್ಚಿ, ಡ್ರೆಸ್ಸಿಂಗ್ ಟೇಬಲ್ ಇತ್ಯಾದಿ ಇರಬೇಕು. ಬಟ್ಟೆಗಳನ್ನು ನೇತುಹಾಕಲು ಕಬೋರ್ಡ್‌ಗಳು ಅಗತ್ಯ.
ಮಕ್ಕಳಿಗೆ ಮನೆಯಲ್ಲಿ ವಿಶೇಷ ಕೊಠಡಿ ಇರುವುದು ಸೂಕ್ತ. ಚಿಕ್ಕ ಮಕ್ಕಳಿಗೆ ಕೊಠಡಿಯಲ್ಲಿ ಆಟದ ಸಾಮಾನುಗಳಿದ್ದು, ಮಲಗಲು ಬೇಕಾದ ವ್ಯವಸ್ಥೆಯಿದ್ದರೆ ಮಕ್ಕಳ ಮನಸ್ಸು ಸಂತೋಷದಿಂದ ಹಾರಾಡುತ್ತದೆ,
ಮನೆಯಲ್ಲಿ ಶೌಚಾಲಯವಿರುವುದು ಅತ್ಯಗತ್ಯ. ಶೌಚಾಲಯದಲ್ಲಿ ನೀರಿನ ವ್ಯವಸ್ಥೆಯಿದ್ದು ದಿನವೂ ಅದನ್ನು ಚೊಕ್ಕಟಗೊಳಿಸಿ ಸುವಾಸನಾ ದ್ರವ್ಯವನ್ನು ಸಿಂಪಡಿಸಬೇಕು.
ವಿದ್ಯಾರ್ಥಿಗಳಿಗೆ ಅಗತ್ಯವಾದ ಸ್ಟಡಿ ರೂಂ ತುಂಬ ಮುಖ್ಯ. ಓದು-ಬರಹಕ್ಕೆ ಅನುಕೂಲವಾಗಿರುವಂತೆ ಮೇಜು, ಕುರ್ಚಿ, ದೀಪ ಇತ್ಯಾದಿ ವ್ಯವಸ್ಥೆಯಿದ್ದು ಪುಸ್ತಕಗಳನ್ನು ಜೋಡಿಸಲು ಕಪಾಟುಗಳಿರಬೇಕು.
ಮನೆಯ ಮೇಲ್ಬಾಗದ ಟೆರೇಸ್‌ನಲ್ಲಿ ತರಕಾರಿ, ಹೂವು ಇತ್ಯಾದಿ ಬೆಳೆಸಲು ಅನುಕೂಲ ಮಾಡಿಕೊಳ್ಳುವುದು ಒಳ್ಳೆಯ ಹವ್ಯಾಸವಾಗುತ್ತದೆ. ತಂಗಾಳಿಗೆ ಮೈಯೊಡ್ಡಿ ಖುಷಿಗೊಳ್ಳಲು ಇದು ತುಂಬ ಸಹಾಯಕ.
Our House - Interior
A living room or lounge room is a room in a residential house for relaxing and socializing. Such a room is sometimes called a front room when it is near the main entrance at the front of the house. The term sitting room is sometimes used synonymously with living room, although a sitting room may also occur in a hotel or other public building. In homes that lack a parlour or drawing room, the living room may also function as a reception room. A typical Western living room may contain furnishings such as a sofa, chairs, occasional tables, and bookshelves, electric lamps, rugs, or other furniture.
A dining room is a room for consuming food. In modern times it is usually adjacent to the kitchen for convenience in serving, although in medieval times it was often on an entirely different floor level. Historically the dining room is furnished with a rather large dining table and a number of dining chairs: the most common shape is generally rectangular with two armed end chairs and an even number of un-armed side chairs along the long sides.
A room is any distinguishable space within a structure. Usually, a room is separated from other spaces or passageways by interior walls; moreover, it is separated from outdoor areas by an exterior wall, sometimes with a door.
A room is any distinguishable space within a structure. Usually, a room is separated from other spaces or passageways by interior walls; moreover, it is separated from outdoor areas by an exterior wall, sometimes with a door.
A bedroom is a room where people sleep. A typical Western bedroom consists of a bed, closet, nightstand, desk, and dresser.
A kitchen is a room or part of a room used for cooking and food preparation. In the West, a modern residential kitchen is typically equipped with a stove, a sink with hot and cold running water, a refrigerator and kitchen cabinets arranged according to a modular design. Many households have a microwave oven, a dishwasher and other electric appliances. The main function of a kitchen is cooking or preparing food but it may also be used for dining, food storage, entertaining, dishwashing, laundry
A bathroom is a room for personal hygiene, generally containing a bathtub or a shower. A toilet is a sanitation fixture used primarily for the disposal of human urine and feces. They are often found in a small room referred to as a toilet, bathroom or lavatory. A toilet can be designed for people who prefer to sit or for people who prefer to squat.
A family room is an informal, all-purpose room in a house often confused with a living room. The family room is designed to be a place where family and guests gather for group recreation like talking, reading, watching TV, and other family activities. Often, the family room is located adjacent to the kitchen, and at times, flows into it with no viend
family room often has doors leading to the back yard and
specific outdoor living areas such as a deck, garden, or terrace.