ವಿಶ್ವ ಅಪ್ಪಂದಿರ ದಿನ" HAPPY FATHER'S DAY ( June 3rd sunday)

 



   "ವಿಶ್ವ ಅಪ್ಪಂದಿರ ದಿನ" 

HAPPY FATHER'S DAY



    ಅಪ್ಪ ಎಲ್ಲರ ಪಾಲಿನ ಮೊದಲ ಹೀರೋ. ಅಪ್ಪ ಎಂದರೆ ಮಮತೆಯ ಕಡಲು. ಅಪ್ಪನ ಪ್ರೀತಿ ಆ ಆಗಸಕ್ಕಿಂತಲೂ ಎತ್ತರ. ಪ್ರತಿಯೊಬ್ಬರ ಪಾಲಿಗೆ ಅಮ್ಮ ಒಂದು ಕಣ್ಣಾದರೆ, ಅಪ್ಪ ಇನ್ನೊಂದು ಕಣ್ಣು. ಇದೇ ಕಾರಣಕ್ಕೆ ಎಲ್ಲರ ಬದುಕಿನಲ್ಲೂ ಇವರಿಬ್ಬರಿಗೆ ದೇವರ ಸ್ಥಾನವಿದೆ. ಇಂತಹ ದೇವರಿಗೆ ನಮನ ಸಲ್ಲಿಸುವ ಸಲುವಾಗಿ ಪ್ರತಿವರ್ಷ ಒಂದು ದಿನ ಇವರಿಗೆಂದೇ ಮೀಸಲಿಡಲಾಗುತ್ತದೆ. ಹಾಗಂತ, ಬರೀ ಒಂದು ದಿನ ಮಾತ್ರ ಈ ಆಚರಣೆ ಮಾಡಿ ಸುಮ್ಮನೆ ಕುಳಿತುಕೊಳ್ಳಲಾಗದು. ಯಾಕೆಂದರೆ, ಪ್ರತಿಯೊಬ್ಬರಿಗೂ ಪ್ರತೀ ದಿನವೂ ಅಮ್ಮ, ಅಪ್ಪನ ದಿನವೇ. ಆದರೆ, ಸಾಂಕೇತಿಕವಾಗಿ ಒಂದು ದಿನ ಅಧಿಕೃತವಾಗಿ ಆಚರಿಸಲಾಗುತ್ತದೆಯಷ್ಟೇ. ಈಗಾಗಲೇ ತಾಯಂದಿರ ದಿನವನ್ನು ನಾವು ಆಚರಿಸಿದ್ದೇವೆ. ಈಗ ಅಪ್ಪನ ದಿನದ ಆಚರಣೆಯ ಕ್ಷಣ ಬಂದಿದೆನ್ನು ಅಪ್ಪನ ದಿನವಾಗಿ ಆಚರಿಸಿಕೊಂಡು ಬರಲಾಗುತ್ತದೆ.

   

 ಇವತ್ತು ಈ ಖುಷಿಯ ದಿನ ಬಂದಿದೆ. ಇದು ಅಪ್ಪನಿಗಾಗಿ ಮೀಸಲಾದ ದಿನ. ಅಪ್ಪನಿಗೆ ನಾವು ಧನ್ಯವಾದ ಹೇಳಲು ಇರುವ ದಿನ.


    ಎಲ್ಲರ ಬದುಕಿನಲ್ಲೂ ಅಪ್ಪ, ಅಮ್ಮನ ಪಾತ್ರ ಎಂತಹದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಮಕ್ಕಳ ಬದುಕಿಗೆ ಇವರು ತಮ್ಮ ಜೀವನವನ್ನು ತೇಯುತ್ತಾರೆ. ತಾವು ಕಷ್ಟಪಟ್ಟರೂ ಮಕ್ಕಳ ಬಳಿ ಆ ಕಷ್ಟ ಸುಳಿಯಬಾರದೆಂದು ಹೋರಾಡುತ್ತಿರುತ್ತಾರೆ. ಈ ಹೋರಾಟದ ಋಣವನ್ನು ತೀರಿಸಲು ಯಾವ ಮಕ್ಕಳಿಂದಲೂ ಸಾಧ್ಯವೇ ಇಲ್ಲ. ಜೂನ್ 19, 1910ರಂದು ಮೊದಲ ಬಾರಿಗೆ ಅಮೇರಿಕಾದಲ್ಲಿ ಅಪ್ಪನ ದಿನವನ್ನು ಆಚರಿಸಿ ಸಂಭ್ರಮಿಸಲಾಗಿತ್ತು.