Sslc key Answers phase -1

 



   DOWNLOAD KEY ANSWERS


     2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ವಿಷಯವಾರು ಕೀ ಉತ್ತರಗಳನ್ನು ದಿನಾಂಕ: 06.04.2024ರಂದು ಮಂಡಲಿಯ ಜಾಲತಾಣದಲ್ಲಿ http://kseeb.karnataka.gov.in ನಲ್ಲಿ ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು/ ಪೋಷಕರು/ ಶಿಕ್ಷಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಆಕ್ಷೇಪಣೆಗಳನ್ನು ದಿನಾಂಕ: 08.04.2024ರ ಸಾಯಂಕಾಲ 5.00 ಗಂಟೆಯೊಳಗೆ ಮಂಡಲಿಯ ಜಾಲತಾಣದ ಮೂಲಕ ಸಲ್ಲಿಸಲು ತಿಳಿಸಿದೆ. ಮಂಡಲಿಯ ಜಾಲತಾಣ http://kseab.karnataka.gov.in ಲಿಂಕನ್ನು ಬಳಸಿ ಮಾರ್ಚ್/ಏಪ್ರಿಲ್-2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ಕೀ ಉತ್ತರಗಳನ್ನು ಅವಲೋಕಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಲಾಗಿದೆ. ಸದರಿ ಮಾಹಿತಿಯನ್ನು ತಮ್ಮ ಜಿಲ್ಲೆಯಲ್ಲಿ ಪ್ರಚುರಪಡಿಸಿ ವಿದ್ಯಾರ್ಥಿಗಳು/ಶಿಕ್ಷಕರಿಗೆ ಮಾಹಿತಿಯು ತಿಳಿಯುವಂತೆ ಕ್ರಮ ಕೈಗೊಳ್ಳಲು ತಿಳಿಸಿದೆ. ನಿಗದಿತ ದಿನಾಂಕದ ನಂತರ ಸಲ್ಲಿಸುವ ಆಕ್ಷೇಪಣೆಗಳನ್ನು ಮಂಡಲಿಯು ಪರಿಗಣಿಸುವುದಿಲ್ಲ ಎಂದು ಈ ಮೂಲಕ ತಿಳಿಸಿದೆ. ಈ ಕುರಿತು ಸುತ್ತೋಲೆ ಪ್ರಕಟ.