7th pay Information




7th pay Information recruitment yearwise...





***

7th pay calculation calculator


🏆🏆 ಕರ್ನಾಟಕ ಸರಕಾರಿ ನೌಕರರಿಗೆ ರಾಜ್ಯ ಸರ್ಕಾರವು ೭ ನೇ ವೇತನ ಆಯೋಗದ ವರದಿಯನ್ನು ಅನುಷ್ಠಾನ ಗೊಳಿಸಿರುತ್ತದೆ. ಆದ್ದರಿಂದ ಎಲ್ಲಾ ಸರಕಾರಿ ನೌಕರರು ತಮಗೆ ಅನ್ವಯ ಆಗುವ ವೇತನವನ್ನು ಪರಿಸಿಲಿಸುತ್ತಿದ್ದೀರಿ.


🏆🏆 ನಿಮ್ಮ ಕೆಲಸವನ್ನು ಸರಳೀಕರಣ ಗೊಳಿಸುವ ಸಲುವಾಗಿ ಆನ್ಲೈನ್ ನಲ್ಲಿ ನಿಮ್ಮ  ವೇತನವನ್ನೂ ಕಂಡುಕೊಳ್ಳಲ್ಲೂ ವೆಬ್ಸೈಟ್ ಅಭಿವೃದ್ದಿ ಗೊಳಿಸಲಾಗಿದೆ.


🏆🏆 

https://karpay.calculator.cafe/  


ಈ ವೆಬ್ಸೈಟ್ ಮೂಲಕ ನಿಮ್ಮ ೭ ನೇ ವೇತನ ವನ್ನೂ ಕಂಡುಕೊಳ್ಳಬಹುದಾಗಿದೆ.



 


***



    ರಾಜ್ಯ ಸರ್ಕಾರಿ ನೌಕರರ (Karnataka Govt Employees) ಹಲವು ಬೇಡಿಕೆಗಳಲ್ಲಿ ಹಳೇ ಪಿಂಚಣಿ ಯೋಜನೆ ಜಾರಿ, 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಿ, ಅದರಂತೆ ವೇತನ ನೀಡುವುದಾಗಿತ್ತು. ಇವುಗಳಲ್ಲಿ 7ನೇ ವೇತನ ಆಯೋಗ (7th Pay Commission) ಜಾರಿಯ ಮಹತ್ವದ ನಿರ್ಧಾರವನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ತರವಾದ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.

ಈ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ಅವರು ಆಗಸ್ಟ್.1ರಿಂದ 7ನೇ ವೇತನ ಆಯೋಗವನ್ನು ರಾಜ್ಯ ಸರ್ಕಾರಿ ನೌಕರರಿಗೆ ಜಾರಿಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. 7ನೇ ವೇತನ ಆಯೋಗದ ಜಾರಿಯೇ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ಅಜೆಂಡಾ ಆಗಿತ್ತು. ಇಂತಹ ಬೇಡಿಕೆಯನ್ನು ಈಡೇರಿಸುವಂತ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಇಂದಿನ ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆಗಸ್ಟ್.1ರಿಂದ ಜಾರಿಗೊಳಿಸುವಂತೆ 7ನೇ ವೇತನ ಆಯೋಗವನ್ನು ಜಾರಿಗೆ ತರುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೀಗಾಗಿ ಆಗಸ್ಟ್.1ರಿಂದ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗವು ಜಾರಿಗೊಳ್ಳಲಿದೆ. ಈ ಮೂಲಕ ಭರ್ಜರಿ ಸಿಹಿಸುದ್ದಿಯನ್ನು ರಾಜ್ಯ ಸರ್ಕಾರ, ರಾಜ್ಯ ಸರ್ಕಾರಿ ನೌಕರರಿಗೆ ನೀಡಿದೆ.

ಅಂದಹಾಗೇ ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳಲ್ಲಿ ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವುದು. ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸುವುದು. 

ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವುದು ಪ್ರಮುಖವಾಗಿದ್ದವು. ಇವುಗಳಲ್ಲಿ 7ನೇ ವೇತನ ಆಯೋಗ ಜಾರಿಗೊಳಿಸುವಂತ ಬೇಡಿಕೆಯನ್ನು ಸಿಎಂ ಸಿದ್ಧರಾಮಯ್ಯ ಈಡೇರಿಸಿದ್ದಾರೆ

***

7 ನೇ ವೇತನ ಆಯೋಗದ ಶಿಫಾರಸ್ಸನ್ನು ಯಥಾವತ್ತಾಗಿ ಜಾರಿಗೊಳಿಸಿದಲ್ಲಿ ಜೂಲೈ -2024 ರಲ್ಲಿ ಪಡೆಯುತ್ತಿರುವ ವೇತನ ಮೊತ್ತಕ್ಕಿಂತ ಆಗಸ್ಟ್ - 2024 ಮಾಹೆಯ ವೇತನದಲ್ಲಿ ಎಷ್ಟು ಹೆಚ್ಚಾಗಲಿದೆ ಎಂಬ ಬಗ್ಗೆ ಮಾಹಿತಿ...👇👇




***

7th pay information



 


***

ಕಾಲ್ಪನಿಕ ವೇತನ ನಿಗದಿ ಅಂದರೆ...


Fictional Pay fixation ಅಂದರೆ ಕಾಲ್ಪನಿಕ ವೇತನ ನಿಗದಿ.  ಯಾವ ದಿನಾಂಕದಿಂದ ಕಾಲ್ಪನಿಕ ವೇತನ ನಿಗದಿ ಆಗುವುದೋ ಅದೇ ದಿನಾಂಕವನ್ನು ಹೊಸ ವೇತನ ನೀಡಿದ ದಿನಾಂಕ ಎಂದು ಪರಿಗಣಿಸಿ, ಮುಂದಿನ(next 5th year would be: 01.07.2027)  ವೇತನ ಪರಿಷ್ಕರಣೆಯ ಕೋರಿಕೆಯನ್ನು ಸಲ್ಲಿಸಲಾಗುತ್ತದೆ. ಕಾಲ್ಪನಿಕ ವೇತನದ ಮೇಲೆಯೇ (ಅಂದರೆ 2022 ಜುಲೈ ತಿಂಗಳಲ್ಲಿ ನಿಗದಿಯಾಗಿದ್ದ DA'ಅನ್ನು ಮಾನದಂಡ ಮಾಡಿಕೊಂಡು) ಲೆಕ್ಕಾಚಾರ ಮಾಡಿ, ಅದರ ಮೇಲೆ 27.5% Hike ಕೊಟ್ಟು  Fitment ಸೇರಿಸಿ ಹೊಸ ವೇತನವನ್ನು 01.07.2022 ಗೆ ನಿಗದಿಪಡಿಸಲಾಗುತ್ತದೆ. ಆದರೆ arrears ಅಲ್ಲಿಂದ (ಆರ್ಥಿಕ ಲಾಭ) ಕೊಡುವುದಿಲ್ಲ. ಕಾಲ್ಪನಿಕ ಅಂದರೆ ಹಾಗೆ. ಆರ್ಥಿಕ ಲಾಭ ಕೊಡದೆ ಕೇವಲ  Fitmentಗೆ ಮಾತ್ರ ತೆಗೆದುಕೊಂಡು, ಅದೇ formula' ಅನ್ನು ಹಾಲಿ ಪಡೆಯುತ್ತಿರುವ ವೇತನದ ಮೇಲೆ fix ಮಾಡಿಕೊಂಡು ಬರುವುದು.


Example: 01.07.2022ge Basic Pay 50150 ಇದ್ದಲ್ಲಿ, DA @ 31% ಅಂದರೆ: 15547 ಮತ್ತು Fitment at 27.5% = 13791 ಸೇರಿಸಿದಾಗ Rs. 79488 ಆಗುತ್ತದೆ.  ಹೊಸ pay scale'ನಲ್ಲಿ ಈ 79488ಗೆ ಹತ್ತಿರದ ಹೆಚ್ಚಿನ ಮೊತ್ತದ basic pay ಯಾವುದೆಂದು ನೋಡಿಕೊಂಡು ಅದಕ್ಕೆ fix ಮಾಡಬೇಕು. ಅಂದರೆ ಇಲ್ಲಿ 79900 ಹತ್ತಿರದ ಮೊತ್ತ.  ಹೀಗಾಗಿ ಮೇಲಿನ ದೃಷ್ಟಾಂತದಲ್ಲಿ ನೀಡಲಾದ ನೌಕರರಿಗೆ, 01.07.2022 ಕ್ಕೆ 79900ಕ್ಕೆ ಕಾಲ್ಪನಿಕ ವೇತನ ನಿಗದಿ ಮಾಡಬೇಕು ಮತ್ತು ಅಲ್ಲಿಂದ 2 ವರ್ಷದ ವಾರ್ಷಿಕ ವೇತನ ಬಡ್ತಿಯನ್ನು ಹೊಸ ದರದಲ್ಲಿ ಅಂದರೆ Rs.1900 ದರದಲ್ಲಿ ವಾರ್ಷಿಕ ವೇತನ ಬಡ್ತಿಯನ್ನು ನೀಡಿದರೆ(79900+1900 for calendar year 2023 +1900 for calendar year 2024) ಪರಿಷ್ಕೃತ ವೇತನ ಜಾರಿಗೆ ಬಂದಾಗ (01.08.2024ಕ್ಕೆ ) 83700 basic pay ಬರುತ್ತದೆ. ಅಂದರೆ ಆರ್ಥಿಕ ಲಾಭ ಅಲ್ಲಿಂದ ಶುರುವಾಯಿತು ಅಂತ ಲೆಕ್ಕ. ಅಲ್ಲಿ ತನಕ ಯಾವುದೇ ಆರ್ಥಿಕ ಲಾಭ ಸಿಗುವುದಿಲ್ಲ.... ಸುಮ್ಮನೆ on record fixation ಮಾತ್ರ.💐




DOWNLOAD HERE