5 ನೇ ತರಗತಿ ಕಲಿಕಾಫಲಗಳು

 


ಕನ್ನಡ   ಕಲಿಕಾ ಫಲಗಳು

1. ಆಲಿಸಿದ / ಓದಿದ ಸಾಹಿತ್ಯಗಳ (ಹಾಸ್ಯ, ಸಾಹಸ, ಸಾಮಾಜಿಕ ಮುಂತಾದ ವಿಷಯಗಳನ್ನು ಆಧರಿಸಿದ ಕಥೆ, ಕವಿತೆ ಮುಂತಾದವುಗಳು) ವಿಷಯವಸ್ತು, ಘಟನೆಗಳು, ಚಿತ್ರಗಳು, ಪಾತ್ರಗಳು, ಶಿರೋನಾಮೆಗಳ ಬಗ್ಗೆ ಮಾತನಾಡುತ್ತಾರೆ, ಪ್ರಶ್ನಿಸುತ್ತಾರೆ, ಸ್ವತ: ಟಿಪ್ಪಣಿ ನೀಡುತ್ತಾರೆ. ತಮ್ಮ ಮಾತಿಗೆ ತರ್ಕ ಮಾಡುತ್ತಾರೆ, ತಾರ್ಕಿಕವಾಗಿ ಚಿಂತಿಸಿ, ಚರ್ಚಿಸಿ, ನಿರ್ಣಯಕ್ಕೆ ಬರುತ್ತಾರೆ.


2.  ತಮ್ಮ ಸುತ್ತಮುತ್ತ ನಡೆಯುವ ವಿವಿಧ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳ ಬಗ್ಗೆ ಮೌಖಿಕವಾಗಿ ಪ್ರತಿಕ್ರಿಯೆ ನೀಡುತ್ತಾರೆ, ಪ್ರಶ್ನಿಸುತ್ತಾರೆ ಹಾಗೂ ಬರವಣಿಗೆಯ ರೂಪದಲ್ಲಿ ವ್ಯಕ್ತಪಡಿಸುತ್ತಾರೆ.


3. ವಿವಿಧ ಪರಿಸ್ಥಿತಿ ಮತ್ತು ಉದ್ದೇಶಗಳಿಗಾಗಿ ಬೋರ್ಡ್ ಮೇಲೆ ಬರೆದ ಸೂಚನೆ, ಕಾರ್ಯಕ್ರಮದ ವರದಿ, ಪತ್ರ ಮುಂತಾದವುಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಓದಿ ನಕಲು ಮಾಡುತ್ತಾರೆ ಮತ್ತು ಬೇರೆ ಬೇರೆ ಪರಿಸರ ಮತ್ತು ಉದ್ದೇಶಗಳಿಗಾಗಿ (ಸೂಚನಾ ಫಲಕದಲ್ಲಿ ಹಾಕಿರುವ ಸೂಚನೆಗಳನ್ನು ಓದುತ್ತಾರೆ ಮತ್ತು ಬರೆಯುತ್ತಾರೆ.


4.  ಭಾಷಾ ಸೂಕ್ಷ್ಮತೆಗಳ ಮೇಲೆ ಗಮನ ಹರಿಸಿ, ತಮ್ಮ ಭಾಷೆಯನ್ನು ರಚನೆ ಮಾಡಿಕೊಳ್ಳುತ್ತಾರೆ ಮತ್ತು ಬರವಣಿಗೆಯಲ್ಲಿ ಜಾರಿಗೆ ತರುವುದರ ಜೊತೆಗೆ ನಿರರ್ಗಳವಾಗಿ ಮಾತನಾಡುತ್ತಾರೆ. 


5.  ವಿಭಿನ್ನ ಉದ್ದೇಶಗಳಿಗಾಗಿ ಬರೆಯುತ್ತಿರುವ ತಮ್ಮ ಬರವಣಿಗೆಯಲ್ಲಿ ಲೇಖನ ಚಿಹ್ನೆಗಳು ಉದಾ : ಪೂರ್ಣವಿರಾಮ, ಅಲ್ಪವಿರಾಮ, ಪ್ರಶ್ನಾರ್ಥಕ, ಭಾವಸೂಚಕ ಹಾಗೂ ಉದ್ಧರಣ ಚಿಹ್ನೆಗಳನ್ನು ಸೂಕ್ತವಾಗಿ ಬಳಸುತ್ತಾರೆ.


6.  ಸ್ವ ಇಚ್ಛೆಯಿಂದ ಅಥವಾ ಶಿಕ್ಷಕರು ನಿರ್ಧರಿಸಿದ ಚಟುವಟಿಕೆಗಳಲ್ಲಿ ಬರವಣಿಗೆಯ ಪ್ರಕ್ರಿಯೆಗಳ ಬಗ್ಗೆ ತಿಳಿದು ತಮ್ಮ ಬರವಣಿಗೆಯನ್ನು ಉತ್ಕೃಷ್ಟಗೊಳಿಸುತ್ತಾರೆ, ಬರವಣಿಗೆಯ ಉದ್ದೇಶ ಮತ್ತು ಓದುಗರ ಅನುಸಾರವಾಗಿ ತಮ್ಮ ಬರವಣಿಗೆಯಲ್ಲಿ ಪರಿವರ್ತನೆ ಮಾಡುತ್ತಾರೆ.



7. ಭಾಷಾ ವ್ಯಾಕರಣದ ಅಂಶಗಳನ್ನು (ಉದಾ : ಕಾರಕಗಳು, ಚಿಹ್ನೆಗಳು, ಕ್ರಿಯಾಪದ, ಕಾಲ, ವಿರುದ್ಧಾರ್ಥಕ ಪದ ಮುಂತಾದವು) ಗುರುತಿಸುತ್ತಾರೆ. ಅವುಗಳ ಬಗ್ಗೆ ಸಂಕ್ಷಿಪ್ತವಾಗಿ ಬರೆಯುತ್ತಾರೆ. 


8.  ಸ್ತರಕ್ಕನುಸಾರವಾಗಿ ಬೇರೆ ವಿಷಯಗಳು, ಕಲೆಗಳು ಮುಂತಾದವುಗಳಲ್ಲಿ (ಉದಾ: ಗಣಿತ, ವಿಜ್ಞಾನ, ಸಾಮಾಜಿಕ ಅಧ್ಯಯನ, ನೃತ್ಯ, ಕಲೆ, ಚಿಕಿತ್ಸೆ) ಪ್ರಯೋಗಿಸಿರುವ ಶಬ್ದಗಳ ಬಗ್ಗೆ ತಿಳಿಯುತ್ತಾರೆ ಮತ್ತು ಸಂದರ್ಭ ಮತ್ತು ಪರಿಸ್ಥಿತಿಗನುಗುಣವಾಗಿ ತಮ್ಮ ಬರವಣಿಗೆಯಲ್ಲಿ ಬಳಸುತ್ತಾರೆ.



9.  ತಮ್ಮ ಪಠ್ಯಪುಸ್ತಕದ ಹೊರತಾಗಿ ಬೇರೆ ವಿಷಯ ಸಾಮಗ್ರಿಗಳನ್ನು ಅಂದರೆ ಸಮಾಚಾರ ಪತಿಕೆ, ಬಾಲಪತ್ರಿಕೆ ಮುಂತಾದವುಗಳನ್ನು ಓದಿ ತಿಳಿಯುತ್ತಾರೆ, ಮಾತನಾಡುತ್ತಾರೆ ಮತ್ತು ಚರ್ಚಿಸುತ್ತಾರೆ.



10. ವಿವಿಧ ರೀತಿಯ ವಿಷಯ ಸಾಮಗ್ರಿಗಳಲ್ಲಿ ವೃತ್ತ ಪತ್ರಿಕೆ, ಬಾಲಪತ್ರಿಕೆ, ಮಕ್ಕಳ ಸಾಹಿತ್ಯ, ಪೋಸ್ಟರ್ ಇತ್ಯಾದಿಗಳಲ್ಲಿ ಕಂಡುಬರುವ ಸಂವೇದನಾಶೀಲ ಅಂಶಗಳನ್ನು ಗುರುತಿಸಿ ತನ್ನ ಮಾತಿನಲ್ಲಿ ಬರೆಹದಲ್ಲಿ ವ್ಯಕ್ತಪಡಿಸುತ್ತಾರೆ.


12.  ಅಪರಿಚಿತ ಶಬ್ದಗಳ ಅರ್ಥವನ್ನು ಶಬ್ದಕೋಶಗಳಲ್ಲಿ ಹುಡುಕುತ್ತಾರೆ.



ENGLISH LEARNING OUTCOMES


1.1 Reads text with

comprehension,

locates details and sequence of events. (NAS)

1.2 Engages in a discussion about a topic and responds to questions.

1.3 Writes a paragraph from verbal, visual clues, with appropriate punctuation marks.

2.1 Reads text with comprehension locates details and sequence of events. (NAS)

2.2 Follows instructions that have conditional branching. (For e.g.: If it is raining, do not water the plants (NCF FS 3))

2.3 Writes a paragraph from verbal, visual clues, with appropriate punctuation marks.

2.4 Writes the story inferred from a picture book. (NCF FS 3)

3.1 Reads with comprehension, locates details and sequence of events. (NAS)

3.2 Engages in a discussion about a topic and responds to questions. (NCF FS 3)

3.3 Reads short news items and publicity pamphlets and explains the content. (NCF FS 3) Writes briefly (e.g., a letter) about events and experiences using correct spelling and punctuation.

3.4 Creates small pamphlets / posters/ for objects or events. (e.g., biscuit packets/ film poster etc.)

4.1 Reads text with comprehension and locates details and sequence of events. (NAS)

4.2 Follows instructions that have conditional branching. (For e.g.: If it is raining, do not water the plants (NCF FS 3))

4.3 Writes a paragraph from verbal, visual clues, with appropriate punctuation marks.

4.4 Writes the story inferred from a picture book. (NCF FS 3)

.

comprehension

5.1 Reads text with locates details and sequence of events. (NAS)

5.2 Converts a short story or poem into a skit and enacts it.

5.3 Uses punctuation marks appropriately in writing such as capital letters, full stops, comma, question marks and exclamation marks.

5.4 Writes the story inferred from a picture book. (NCF FS 3)

6.1 Reads text with comprehension, locates details and sequence of events. (NAS)

6.2 Converts a short story or poem into a skit and enacts it

6.3 Writes a paragraph from verbal, visual clues with appropriate punctuation marks.

7.1 Reads text with comprehension locates details and sequence of events. (NAS)

7.2 Follows instructions that have conditional branching. (For e.g.: If it is raining, do not water the plants (NCF FS 3))

7.3 Writes the story inferred frompicture/verbal clues. (NCF FS 3

8.1 Reads text with comprehension locates details and sequence of events. (NAS)

8.2 Creates small pamphlets / posters/ for objects or events (e.g., biscuit packets/ film poster etc.)

8.3 Makes greeting cards with messages for festivals or occasions.


ಗಣಿತ  ಕಲಿಕಾಫಲಗಳು.....


1. ತಮ್ಮ ಸುತ್ತಲಿನ 99,999 ವರೆಗಿನ ಸಂಖ್ಯೆಗಳನ್ನು ಸ್ಥಾನ ಬೆಲೆಗೆ ಅನುಗುಣವಾಗಿ ಓದುವರು ಮತ್ತು ಬರೆಯುವರು


2. ನಿತ್ಯ ಜೀವನಕ್ಕೆ ಸಂಬಂಧಿಸಿದ ಐದಂಕಿ ಸಂಖ್ಯೆಗಳ ಸಂಕಲನ ಮತ್ತು ವ್ಯವಕಲನ ಸಮಸ್ಯೆಗಳನ್ನು ಬಿಡಿಸುವರು. (99,999ಕ್ಕೆ ಮೀರದಂತೆ)


3. ನಿತ್ಯ ಜೀವನಕ್ಕೆ ಸಂಬಂಧಿಸಿದ 2 ಅಂಕಿ ಮತ್ತು 3 ಅಂಕಿ ಸಂಖ್ಯೆಗಳ ಗುಣಾಕಾರದ ಸಮಸ್ಯೆಗಳನ್ನು ಬಿಡಿಸುವರು.


4. ನಿತ್ಯ ಜೀವನಕ್ಕೆ ಸಂಬಂಧಿಸಿದ 3 ಅಂಕಿ ಸಂಖ್ಯೆಯನ್ನು 2 ಅಂಕಿಯಿಂದ ಆದರ್ಶ ಕ್ರಮವಿಧಾನ ಮೂಲಕ ಬಾಗಿಸುವರು ಮತ್ತು ಭಾಗಾಕಾರ ಗುಣಾಕಾರಗಳ ನಡುವಿನ ಅಂತರ್ ಸಂಬಂಧ ತಿಳಿಯುವರು.


5. ಒಂದು ಸಂಖ್ಯೆಯು ಒಟ್ಟು ಸಮೂಹದಲ್ಲಿನ ಒಂದು ಭಾಗವಾಗಿರುತ್ತದೆ ಎಂದು ಪತ್ತೆ ಹಚ್ಚುವರು.


6. ದತ್ತ ಭಿನ್ನರಾಶಿಗೆ ಸಮಾನ ಭಿನ್ನರಾಶಿಗಳನ್ನು ಬರೆಯುವರು. 7. ಭಿನ್ನರಾಶಿಗಳನ್ನು ದಶಮಾಂಶ ರೂಪಕ್ಕೆ ಮತ್ತು ದಶಮಾಂಶಗಳನ್ನು ಭಿನ್ನರಾಶಿ ರೂಪಕ್ಕೆ ಪರಿವರ್ತಿಸುವರು.


8. ಉದ್ದ, ತೂಕ, ಗಾತ್ರ ಮತ್ತು ಸಮಯಕ್ಕೆ ಸಂಬಂಧಿಸಿದ ವಿವಿಧ ಅಳತೆ ಮಾನಗಳ ಸಂಬಂಧ ಕಲ್ಪಿಸುವರು ಮತ್ತು ದೊಡ್ಡಮಾನಗಳನ್ನು ಚಿಕ್ಕಮಾನಗಳನ್ನು ದೊಡ್ಡಮಾನಗಳಾಗಿ

ಚಿಕ್ಕಮಾನಗಳಾಗಿ, ಪರಿವರ್ತಿಸುವರು.


9. ಉದ್ದ, ತೂಕ, ಗಾತ್ರ ಮತ್ತು ಕಾಲ ಗಣನೆಗಳಿಗೆ ಗಣಿತ ನಾಲ್ಕು ಮೂಲ ಕ್ರಿಯೆಗಳನ್ನು ಅನ್ವಯಿಸಿ ಸಮಸ್ಯೆಗಳನ್ನು ಬಿಡಿಸುವರು. 10. ಕೋನಗಳನ್ನು ಲಂಬ, ಲಘು ಮತ್ತು ವಿಶಾಲ ಕೋನಗಳಾಗಿ ವರ್ಗೀಕರಿಸುವರು ಮತ್ತು ಕೋನಗಳ ಚಿತ್ರ ಬರೆಯುವ ಮೂಲಕ ಪ್ರತಿನಿಧಿಸುವರು.


11. ಸರಳ ಜ್ಯಾಮಿತಿ ಆಕೃತಿಗಳಿಗೆ ಸುತ್ತಳತೆ ಮತ್ತು ವಿಸ್ತೀರ್ಣವನ್ನು (ಚೌಕ ಎಣಿಸುವ ಮೂಲಕ) ಕಂಡುಹಿಡಿಯುವರು.


12. ವಿವಿಧ ಸನ್ನಿವೇಶದಲ್ಲಿ ಬಳಕೆಯಾಗುವ ವಿನ್ಯಾಸಗಳನ್ನು ಗುರುತಿಸುವರು ಮತ್ತು ವಿಸ್ತರಿಸುವರು (ತ್ರಿಭುಜ ಸಂಖ್ಯೆಗಳು ಮತ್ತು ವರ್ಗ ಸಂಖ್ಯೆಗಳ ವಿನ್ಯಾಸ)


13. ನಿತ್ಯ ಜೀವನದ ಸನ್ನಿವೇಶಗಳಲ್ಲಿನ ದತ್ತಾಂಶಗಳನ್ನು ಸಂಗ್ರಹಿಸುವರು. ಇವುಗಳನ್ನು ಕೋಷ್ಟಕ ಮತ್ತು ಸ್ತಂಭಾಕೃತಿಯಲ್ಲಿ ಪ್ರತಿನಿಧಿಸುವರು ಹಾಗೂ ಅರ್ಥೈಸುವರು.



ಪರಿಸರ ಅಧ್ಯಯನ -  ಕಲಿಕಾಫಲಗಳು

ಜೀವ ಪ್ರಪಂಚ

1. ವೀಕ್ಷಣೆ, ವಾಣಿ, ಶ್ರವಣ, ದನಿಗೆ ಸಂಬಂಧಿಸಿದಂತೆ ವಿಶೇಷ ಇಂದ್ರಿ ಶಕ್ತಿ ಹೊಂದಿದ ಪ್ರಾಣಿಗಳ ಲಕ್ಷಣಗಳು ಹಾಗೂ ಬೆಳಕು, ಶಬ್ದ, ಆಹಾದಕ್ಕೆ ಅವುಗಳ ಪ್ರತಿಕ್ರಿಯೆಯನ್ನು ವಿವರಿಸುವರು.

2, ಪ್ರಾಣಿ, ಸಸ್ಯ ಮತ್ತು ಮಾನವರ ಪರಸ್ಪರ ಅವಲಂಬನೆಯನ್ನು ವಿವರಿಸುವರು.


ಕುಟುಂಬ ಮತ್ತು ಸಮುದಾಯ

 3. ಗ್ರಾಮ, ನಗರ, ಬುಡಕಟ್ಟು ಸಮುದಾಯದ ಜೀವನಕ್ರಮ, ಸಮಸ್ಯೆಗಳು. ವಿವಿಧ ಕೆಲಸಗಳ ಅಗತ್ಯತೆ: ಮತ್ತು ಮೌಲ್ಯಗಳನ್ನು ತಿಳಿದು, ಶ್ರಮಗೌರವವನ್ನು ಮೆಚ್ಚುವರು.


ನೈಸರ್ಗಿಕ ಸಂಪನ್ಮೂಲಗಳು

4. ವಿವಿಧ ನೈಸರ್ಗಿಕ ಸಂಪನ್ಮೂಲಗಳ ಮಹತ್ವವನ್ನು ಅರಿತು, ಅದರ ಮರುಬಳಕೆ ಮತ್ತು ಸಂರಕ್ಷಣೆಯ ಅಗತ್ಯತೆಯನ್ನು ಅರ್ಥ ಮಾಡಿಕೊಳ್ಳುವರು.


ವಾಯು

5. ವಾಯುವಿನ ಸಂಯೋಜನೆ, ಉಪಯೋಗಗಳನ್ನು ಗುರುತಿಸಿ ಮಾಲಿನ್ಯಕ್ಕೆ ಕಾರಣ, ಪರಿಣಾಮ ಮತ್ತು ಪರಿಹಾರಗಳನ್ನು ಚರ್ಚಿಸುವರು.


ನೀರು

6. ನೀರಿನ ಆಕರಗಳು, ಭೌತಿಕ ಗುಣಗಳು, ಜೈವಿಕ ಪ್ರಾಮುಖ್ಯತೆ, ಮತ್ವ ಮತ್ತು ನೀರಿನ ಸಂರಕ್ಷಣೆಯ ವಿಧಾನಗಳು, ಸಾಂಪ್ರದಾಯಿಕ ಜಲ ಸಂರಕ್ಷಣಾ ಕ್ರಮಗಳನ್ನು ತಿಳಿಯುವರು.


ಆಹಾರ

7. ಬದಲಾಗುತ್ತಿರುವ ಆಹಾರ ಅಭ್ಯಾಸಗಳು ಹಾಗೂ ಅದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಚರ್ಚಿಸುವರು.

 8. ಆಹಾರದ ಪೋಲಾಗುವಿಕೆ ಮತ್ತು ಅದರ ಸಂರಕ್ಷಣಾ ಕ್ರಮಗಳನ್ನು ತಿಳಿಯುವರು.


ಶಕ್ತಿ

9. ಶಕ್ತಿಯ ವಿವಿಧ ರೂಪಗಳನ್ನು ಗುರುತಿಸಿ, ಅವುಗಳ ಉಪಯೋಗಗಳನ್ನು ಪತ್ತೆ ಹಚ್ಚುವರು.

10. ಶಕ್ತಿ ಸಂರಕ್ಷಣೆಯ ಮಹತ್ವವನ್ನು ಅರ್ಥೈಸಿಕೊಂಡು ಸಂರಕ್ಷಣೆಯ ಸರಳ ಕ್ರಮಗಳನ್ನು ದೈನಂದಿನ ಜೀವನದಲ್ಲಿ ಅನುಸರಿಸುವರು.


ವಸ್ತು ಸ್ವರೂಪ

11. ವಿವಿಧ ರೂಪದ ವಸ್ತುಗಳನ್ನು ಗುರುತಿಸಿ, ಅವುಗಳ ವೈಶಿಷ್ಟ್ಯ ಮತ್ತು ಲಕ್ಷಣಗಳನ್ನು (ಆಕಾರ, ರುಚಿ, ಬಣ್ಣ, ವಿನ್ಯಾಸ ಇತ್ಯಾದಿ) ಆಧರಿಸಿ, ವಸ್ತುಗಳನ್ನು ವರ್ಗೀಕರಿಸುವರು.


ನಕ್ಷೆ ರಚನೆ

12. ನಕ್ಷೆಗಳಲ್ಲಿ ಸ್ಥಳ, ಸ್ಥಳದ ಚಿಹ್ನೆಗಳು, ದಿಕ್ಕುಗಳು ಹೆಗ್ಗುರುತುಗಳನ್ನು ಗುರುಕಿಸುವರು ಮತ್ತು ದಿಕ್ಕುಗಳನ್ನು ಊಹಿಸುವರು.



ಬಾನಂಗಳ

13. ಭೂಮಿಯು ಇತರ ಗ್ರಹಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಅರಿಯುವರು.


14. ಭೂಮಿಯ ಆಕಾರ, ಚಲನೆಗಳು ಹಾಗೂ ಹಗಲು ರಾತ್ರಿಗಳು ಉಂಟಾಗುವಿಕೆಯ ಮಾದರಿಗಳನ್ನು ತಯಾರಿಸುವರು.


ನಮ್ಮ ಭಾರತ

15. ಭಾರತದ ಭೌಗೋಳಿಕ ಸ್ಥಾನ, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳನ್ನು ಗುರುತಿಸುವರು.


16. ಭಾರತದ ಭೂ ಪ್ರದೇಶ, ಹವಾಮಾನ, ಸಂಪನ್ಮೂಲಗಳು (ಆಹಾರ, ನೀರು, ಆಶ್ರಯ, ಜೀವನೋಪಾಯ) ಮತ್ತು ಸಾಂಸ್ಕೃತಿಕ ಜೀವನದ ನಡುವೆ ಸಂಪರ್ಕವನ್ನು ಸ್ಥಾಪಿಸುವರು.