ಸಾಹಿತ್ಯ:-ಸಂತ ಶಿಶುನಾಳ ಶರೀಫ
ಸಂಗೀತ/ಗಾಯನ:-ಸಿ.ಅಶ್ವಥ್
ಬರಕೋ ಪದಾ ಬರಕೋ
ಇದರನ್ವಯ ತಿಳಿಕೋ ||ಪ||
ಸದಮಲಜ್ಞಾನದ ಗುರಿಉಕ್ಕಿ ಬರುವಾಗ
ನದರಿಪು ನಿನ್ನೊಳು ಸದಮಲ ತತ್ವದಿ ||ಅ.ಪ.||
ಅಡಿಗಣ ಪ್ರಾಸಕೆ ನಿಲುಕದ ಪದವು
ಗುರಿಶಬ್ದಕೆ ನಿಲುಕದ ಪದವು
ಎಡತೆರವಿಲ್ಲದೆ ನಡುವಿನಕ್ಷರದಿ
ಕಡುಶೂನ್ಯದ ಗುರುತದ ಗುರು ಪದವು ||೧||
ಸರಿಗಮ ಸ್ವರಗಳೆ ರಸಮಸುಪದವು
ಹಸನಾಗಿ ನಿನ್ನೊಳು ಎಸೆಯುವ ಪದವು
ಕುಶಲದ ಐದಕ್ಷರದಿಕ ಪದವು
ರಸಿಕ ಸಾಧುಜನ ಹಾಡುವ ಪದವು ||೨||
ಗುರುಗೋವಿಂದನ ಧ್ಯಾನದ ಪದವು
ವರ ಓಂಕಾರ ಪ್ರಣಮದ ಪದವು
ಧರೆಯೊಳು ಶಿಶುನಾಳಧೀಶನ ಪದವು
ದುರಿತ ದುರ್ಗುಣವ ದೂಡುವ ಪದವು ||೩||