ಸುಪ್ತ ದೈವರೆ ಏಳಿರೇಳಿ - ವಿವೇಕ ಗೀತೆ

ಸಾಹಿತ್ಯ:-ಸ್ವಾಮಿ ಶಾಸ್ತ್ರಾನಂದಜಿ

ಗಾಯನ:-ಸಮೂಹ ಗಾಯನ



ಸುಪ್ತದೈವರೆ ಏಳಿರೇಳಿ

ಲುಪ್ತಪದವಿಯ ಮರಳಿ ತಾಳಿ|

ಸಪ್ತ ಭುವಿಗಳ ಆಳಿರೆನುತ

ದೀಪ್ತವಾಣಿಯ ಜಗದಿ ಮೊಳಗಿಹೆ||


ಜಯ ವಿವೇಕಾನಂದ ಗುರುವರ

ಭುವನಮಂಗಲಕಾರಿ|

ಚಿರಸಮಾಧಿಯ ಗಿರಿಶಿಖರದಿಂ

ನರರ ಸೇವೆಗೆ ಇಳಿದ ನರವರ||


ವಿಶ್ವವ್ಯಾಪಕ ಪ್ರೇಮಮೂರ್ತಿಯೇ

ವಿಶ್ವದ್ಯೋತಕ ಪರಮಜ್ಞಾನಿಯೇ|

ವಿಶ್ವಮುಕ್ತಿ ಸಮರ್ಪಿತಾತ್ಮನೆ

ವಿಶ್ವವಂದ್ಯನೆ ಜಯತು ಜಯತು||