ಸಾಹಿತ್ಯ:-ಜಿ.ಎಸ್.ಶಿವರುದ್ರಪ್ಪ
('ಕಾರ್ತೀಕ' ಕವನ ಸಂಕಲನದಿಂದ)
ಸಂಗೀತ/ಗಾಯನ:-ಶಿವಮೊಗ್ಗ ಸುಬ್ಬಣ್ಣ
ಶಕ್ತಿಯ ಕೊಡು, ಶಕ್ತಿಯ ಕೊಡು,
ಶಕ್ತಿಯ ಕೊಡು ಹೇ ಪ್ರಭೂ.
ಸತ್ಯಕಾಗಿ ನಿಲುವ ಛಲವ
ದೀಪ್ತಗೊಳಿಸು ನನ್ನೊಳು.||
ಎಡರ ಕಡಲ ತೆರೆ ಹೆಡೆಗಳು
ಭೋರ್ಗರೆಯುತ ಬಂದರೂ
ತಡೆದು ನಿಲುವ ಮಳಲ ತಡಿಯ
ಬಲವ ನೀಡು ಶ್ರೀ ಗುರೂ.||
ನೂರುಲ್ಕೆಯ ರಭಸ ಮತಿಯ
ಅಬ್ಬರಗಳ ನಡುವೆಯೂ
ನಿಯತ ಗತಿಯ ತೋರಗೆಯೊಲು
ನೇರವಿರಿಸು ನನ್ನನು.||
ಗುಡುಗು ಸಿಡಿಲ್ ಮಿಂಚಿನಾಚೆ
ಅಚಂಚಲದ ನೀಲಿಗೆ
ಸದಾ ತುಡಿವ ಗರುಡಗತಿಯ
ತುಂಬು ನನ್ನ ಹೃದಯಕೆ.||