ಕಾಲಗಳು

 



ಕಾಲಗಳು :


1) ಅವನು ಶಾಲೆಗೆ ಹೋಗುತ್ತಾನೆ.

2) ಅವನು ಶಾಲೆಗೆ ಹೋದನು.

3) ಅವನು ಶಾಲೆಗೆ ಹೋಗುವನು.


ಈ ಮೇಲಿನ ಮೂರೂ ವಾಕ್ಯಗಳಲ್ಲಿ ಹೋಗು ಎಂಬ ಪದ ಧಾತುವಾಗಿದ್ದು,  ಇದರ ಜತೆಗೆ ಮೊದಲ ವಾಕ್ಯದಲ್ಲಿ -ಉತ್ತ ಎರಡನೆಯ ವಾಕ್ಯದಲ್ಲಿ - ಹಾಗೂ ಮೂರನೆಯ ವಾಕ್ಯದಲ್ಲಿ - ಎಂಬ ಪ್ರತ್ಯಯ ಇರುವುದನ್ನು ಗಮನಿಸಬಹುದು. 

ಇವುಗಳಲ್ಲಿ

 -ಉತ್ತ ಎಂಬುದು ವರ್ತಮಾನಕಾಲವನ್ನೂ,  

- ಎಂಬುದು ಭೂತಕಾಲವನ್ನೂ 

- ಎಂಬುದು ಭವಿಷ್ಯತ್‌ಕಾಲವನ್ನೂ

 ಸೂಚಿಸುವ ಪ್ರತ್ಯಯಗಳಾಗಿವೆ. ಹಾಗಾಗಿ ಮೊದಲನೇ ವಾಕ್ಯ ವರ್ತಮಾನಕಾಲದಲ್ಲೂ ಎರಡನೆಯ ವಾಕ್ಯ ಭೂತಕಾಲದಲ್ಲೂ ಮೂರನೆಯ ವಾಕ್ಯ ಭವಿಷ್ಯತ್‌ಕಾಲದಲ್ಲೂ ಇವೆ ಎಂದು ತಿಳಿಯಬೇಕು. 

ಧಾತುಗಳಿಗೆ ಕಾಲಸೂಚಕ ಪ್ರತ್ಯಯ ಸೇರುವುದರ ಜತೆಗೆ 

-ಆನೆ 

-ಅನು 

-ಉದು 

-ಎನು ಇತ್ಯಾದಿ ಆಖ್ಯಾತಪ್ರತ್ಯಯಗಳು ಸೇರುತ್ತವೆ.


ಈ ಪ್ರತ್ಯಯಗಳು ಪುರುಷಾರ್ಥಕ ಸರ್ವನಾಮ, ಲಿಂಗ ಮತ್ತು ವಚನಗಳಿಗನುಗುಣವಾಗಿ ಬೇರೆಬೇರೆ ಆಗಿರುವುದನ್ನು ತಿನ್ನು ಎಂಬ ಧಾತುವಿನ ಆಧಾರದಿಂದ ಗಮನಿಸಬಹುದು.


1. ವರ್ತಮಾನಕಾಲ


ನಾನು ತಿನ್ನುತ್ತೇನೆ.      ನಾವು ತಿನ್ನುತ್ತೇವೆ.
ನೀನು ತಿನ್ನುತ್ತಿ.          ನೀವು ತಿನ್ನುತ್ತೀರಿ.
ಅವನು ತಿನ್ನುತ್ತಾನೆ.    ಅವರು ತಿನ್ನುತ್ತಾರೆ.
ಅವಳು ತಿನ್ನುತ್ತಾಳೆ.    ಅವರು ತಿನ್ನುತ್ತಾರೆ.
ಅದು ತಿನ್ನುತ್ತದೆ.        ಅವು ತಿನ್ನುತ್ತವೆ.


2. ಭೂತಕಾಲ


ನಾನು ತಿಂದೆನು.      ನಾವು ತಿಂದೆವು.

ನೀನು ತಿಂದೆ.          ನೀವು ತಿಂದಿರಿ.
ಅವನು ತಿಂದನು.    ಅವರು ತಿಂದರು.
ಅವಳು ತಿಂದಳು.    ಅವರು ತಿಂದರು.
ಅದು ತಿಂದಿತು.        ಅವು ತಿಂದವು.

3. ಭವಿಷ್ಯತ್‌ಕಾಲ


ನಾನು ತಿನ್ನುವೆನು.      ನಾವು ತಿನ್ನುವೆವು.

ನೀನು ತಿನ್ನುವಿ.          ನೀವು ತಿನ್ನುವಿರಿ.
ಅವನು ತಿನ್ನುವನು.    ಅವರು ತಿನ್ನುವರು.
ಅವಳು ತಿನ್ನುವಳು.    ಅವರು ತಿನ್ನುವರು.
ಅದು ತಿನ್ನುವುದು.      ಅವು ತಿನ್ನುವುವು.


ಉದಾಹರಣೆ : 


ವರ್ತಮಾನ ಕಾಲ : 

1) ರಾಮನು ಶಾಲೆಗೆ ಹೋಗುತ್ತಾನೆ.

2) ಸಂಗೀತಾ ಸುಮಧುರವಾಗಿ ಹಾಡುತ್ತಾಳೆ.

3) ಸಚಿನ್ ಉತ್ತಮವಾಗಿ ಕ್ರಿಕೆಟ್ ಆಡುತ್ತಾನೆ.


ಭೂತಕಾಲ

1)  ರಾಮನು ಶಾಲೆಗೆ ಹೋದನು.

2) ಸಂಗೀತಾ ಸುಮಧುರವಾಗಿ ಹಾಡಿದಳು.

3) ಸಚಿನ್ ಉತ್ತಮವಾಗಿ ಕ್ರಿಕೆಟ್ ಆಡಿದನು.


ಭವಿಷ್ತ್ಯತ್  ಕಾಲ

 1) ರಾಮನು ಶಾಲೆಗೆ ಹೋಗುವನು.

2) ಸಂಗೀತಾ ಸುಮಧುರವಾಗಿ ಹಾಡುವಳು.

3) ಸಚಿನ್ ಉತ್ತಮವಾಗಿ ಕ್ರಿಕೆಟ್ ಆಡುವನು.


ಕಾಲಪಲ್ಲಟ

ಒಂದು ಕಾಲದ ಕ್ರಿಯೆಯನ್ನು ಇನ್ನೊಂದು ಕಾಲದ ಕ್ರಿಯಾರೂಪದಿಂದ ಹೇಳುವುದೇ ಕಾಲಪಲ್ಲಟ.


ಹೀಗೆ ಕಾಲಪಲ್ಲಟವಾಗುವಾಗ ಭವಿಷ್ಯತ್ ಕಾಲದ ಕ್ರಿಯಾಪದಗಳು ವರ್ತಮಾನ ಕಾಲದಲ್ಲೂ ವರ್ತಮಾನದ ಕಾಲದ ಕ್ರಿಯಾಪದಗಳು ಭವಿಷ್ಯತ್ ಕಾಲದಲ್ಲೂ ಪ್ರಯೋಗವಾಗುವುವು.


ಉದಾ: 1. ವರ್ತಮಾನಕಾಲವು ಭವಿಷ್ಯತ್‌ಕಾಲದಲ್ಲಿ

— ಅವನು ಒಳಗೆ ಊಟ ಮಾಡುವನು (ಊಟ ಮಾಡುತ್ತಾನೆ ಎಂದಾಗಬೇಕು)

— ಅವಳು ಒಳಗೆ ಅಡುಗೆ ಮಾಡುವಳು (ಅಡುಗೆ ಮಾಡುತ್ತಾಳೆ ಎಂದಾಗಬೇಕು)


ಉದಾ.: 2. ಭವಿಷ್ಯತ್‌ಕಾಲವು ವರ್ತಮಾನಕಾಲದಲ್ಲಿ

— ಅವನು ನಾಳೆ ಹೋಗುತ್ತಾನೆ (ಹೋಗುವನು ಎಂದಾಗಬೇಕು)

— ನಾನು ಮುಂದಿನ ತಿಂಗಳು ಬರುತ್ತೇನೆ (ಬರುವೆನು ಎಂದಾಗಬೇಕು)...