ಏಕವಚನ ಬಹುವಚನ

 



ವಚನಗಳು 

ವಸ್ತು , ಪ್ರಾಣಿ ಅಥವಾ ವ್ಯಕ್ತಿಗಳ ಸಂಖ್ಯೆಯನ್ನು ತಿಳಿಸುವ ಶಬ್ದಗಳನ್ನು ‘ ವಚನ ' ಎಂದು ಕರೆಯುತ್ತೇವೆ . 

ಇದು ಸಂಖ್ಯೆಯನ್ನು ಬೋಧಿಸುವ ಪ್ರತ್ಯಯವಾಗಿದೆ . 

ವಚನಗಳಲ್ಲಿ ಎರಡು ವಿಧಗಳು..

ಏಕವಚನ

ಬಹುವಚನ


1 ) ಏಕವಚನ : 

ಒಂದು ವಸ್ತು ಎಂದು ಹೇಳುವ ಶಬ್ದಗಳೆಲ್ಲ ಏಕವಚನಗಳು. ಒಂದು ವಸ್ತುವೆಂದು ಹೇಳುವ ಪದಗಳು.

ಉದಾಹರಣೆ : ರಾಣಿ, ಗೆಳತಿ, ಮರ, ಮಗು


2 ) ಬಹುವಚನ: 


ಒಂದಕ್ಕಿಂತ ಹೆಚ್ಚು ವಸ್ತು , ಸ್ಥಳ ಅಥವಾ ವ್ಯಕ್ತಿಗಳನ್ನು ಸೂಚಿಸುವುದಕ್ಕೆ 'ಬಹುವಚನ ' ಎನ್ನುವರು . 

ಇದು ಬಹುತ್ವವನ್ನು ಸೂಚಿಸುತ್ತದೆ . 

ಉದಾಹರಣೆ : ರಾಣಿಯರು , ಗೆಳತಿಯರು , ಮರಗಳು , ಮಕ್ಕಳು 

ವಚನಗಳ ಕೆಲವು ಪ್ರತ್ಯಯಗಳು


ಅರು - ಪುಲ್ಲಿಂಗ ಮತ್ತು ಸ್ತ್ರೀಲಿಂಗಗಳು

           (ಶಿಕ್ಷಕ - ಶಿಕ್ಷಕರು

           ಮಹಿಳೆ - ಮಹಿಳೆಯರು)

ಗಳು - ನಪುಂಸಕ ಲಿಂಗಗಳು

         (ನಾಯಿ + ಗಳು = ನಾಯಿಗಳು)


ವು - ಆತ್ಮಾರ್ಥಕ ಸರ್ವನಾಮಗಳು, 

         ತಾನು - ತಾವು

         (ಅದು - ಅವು = ಪ್ರಥಮ ಪುರುಷ)


ಅಂದಿರು : ಸಂಬಂಧಾರ್ಥಕ ಪದಗಳು..

        ಅಣ್ಣ + ಅಂದಿರು = ಅಣ್ಣಂದಿರು


***

ಏಕವಚನ           ಬಹುವಚನ

ಕಿವಿ                ಕಿವಿಗಳು (ಕಿವಿ+ಗಳು)

ತಾಯಿ            ತಾಯಿಯರು (ತಾಯಿ+ಅರು)

ನಾನು             ನಾವು (ನಾನು+ವು)

ಅರಸು            ಅರಸರು (ಅರಸು+ಅರು)

ನೀನು             ನೀವು (ನೀನು+ವು)

ಮರ               ಮರಗಳು (ಮರ+ಗಳು)

ಅರಸಿ             ಅರಸಿಯರು (ಅರಸಿ+ಅರು)

ತಂದೆ             ತಂದೆಗಳು (ತಂದೆ+ಗಳು)

ಮನೆ              ಮನೆಗಳು (ಮನೆ+ಗಳು)

ಅಣ್ಣ               ಅಣ್ಣಂದಿರು (ಅಣ್ಣ+ಅಂದಿರು)