ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಎಸ್ ಮಧು ಬಂಗಾರಪ್ಪ ರವರು ನಡೆದ ಸಭೆಯಲ್ಲಿ ನೀಡಿದ ಸೂಚನೆಗಳ ಸಂಕ್ಷಿಪ್ತ ಹಾಗೂ ಪರಿಷ್ಕೃತ ಮಾರ್ಗಸೂಚಿಗಳು...



ಮಾನ್ಯ ಶಿಕ್ಷಣ ಸಚಿವರಾದ ಶ್ರೀ  ಎಸ್ ಮಧು ಬಂಗಾರಪ್ಪ ರವರು  ನಡೆದ ಸಭೆಯಲ್ಲಿ ನೀಡಿದ ಸೂಚನೆಗಳ ಸಂಕ್ಷಿಪ್ತ ಹಾಗೂ ಪರಿಷ್ಕೃತ ಮಾರ್ಗಸೂಚಿಗಳು.


1. “ನಮ್ಮ ಸರ್ಕಾರಿ ಶಾಲೆ – ನಮ್ಮ ಹೆಮ್ಮೆ” ಲೋಗೋ ಬಳಸಿ ಶಾಲೆಯಲ್ಲಿ ಲಭ್ಯವಿರುವ ಸೌಲಭ್ಯಗಳು, ದಾಖಲಾತಿ ಅಭಿಯಾನ ಹಾಗೂ ಶಾಲಾ ಪ್ರಾರಂಭೋತ್ಸವ ಕುರಿತು ಫ್ಲೆಕ್ಸ್‌ಗಳನ್ನು ಅಳವಡಿಸಬೇಕು.


2. ನಾಳೆಯಿಂದ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಚರಿಸಿ ಮಕ್ಕಳ ದಾಖಲಾತಿ ಅಭಿಯಾನ ಪ್ರಾರಂಭಿಸಬೇಕು.


3. ಎಸ್‌ಡಿಎಂಸಿ ಸಹಕಾರದಿಂದ ಬೇರೆ ಶಾಲೆಗಳಿಗೆ ತೆರಳುತ್ತಿರುವ ಮಕ್ಕಳ ಪೋಷಕರನ್ನು ಮನವೊಲಿಸಿ, ನಮ್ಮ ಶಾಲೆಗಳಲ್ಲಿ ದಾಖಲಾತಿ ಮಾಡಿಸುವುದು ಹಾಗೂ ದ್ವಿಭಾಷಾ ಮಾಧ್ಯಮದ ಬಗ್ಗೆ ಜಾಗೃತಿ ಮೂಡಿಸಬೇಕು.


4. ಜೂನ್ 1, 2026 ರಂದು ಶಾಲಾ ಪ್ರಾರಂಭೋತ್ಸವವನ್ನು ಮಾನ್ಯ ಮುಖ್ಯಮಂತ್ರಿಗಳು  ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಘಾಟಿಸಲಿದ್ದು, ಎಲ್ಲಾ ಶಾಲೆಗಳು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು.


5. ಮುಖ್ಯಮಂತ್ರಿಗಳ ಉದ್ಘಾಟನಾ ಕಾರ್ಯಕ್ರಮವನ್ನು ಪ್ರತಿಯೊಂದು ಶಾಲೆಯಲ್ಲೂ ಟಿವಿ ಪ್ರಸಾರದ ಮೂಲಕ ಎಲ್ಲಾ ಪೋಷಕರು ಮತ್ತು ಮಕ್ಕಳಿಗೆ ವೀಕ್ಷಣೆಯಾಗುವಂತೆ ಕ್ರಮ ಕೈಗೊಳ್ಳಬೇಕು.


6. ಜೂನ್ 1 ರಂದು ಎಲ್ಲಾ ಪೋಷಕರ ಹಾಜರಾತಿ ಕಡ್ಡಾಯವಾಗಿದ್ದು, ಮೇಘ ಪೋಷಕರ ಸಭೆಯನ್ನು ಆಯೋಜಿಸಬೇಕು.


7. ಮೇ 30ರಿಂದಲೇ ಮಕ್ಕಳ ಶಾಲಾ ಹಾಜರಾತಿ ಪ್ರಾರಂಭವಾಗಬೇಕು.


8. ಮೇ 29ರೊಳಗೆ ಶಾಲೆಗಳ ಸ್ವಚ್ಛತಾ ಕಾರ್ಯವನ್ನು ಸಂಪೂರ್ಣಗೊಳಿಸಬೇಕು.


9. ಹಳೆ ವಿದ್ಯಾರ್ಥಿ ಸಂಘಗಳ ವಾಟ್ಸಾಪ್‌ ಗುಂಪುಗಳಲ್ಲಿ ಶಾಲಾ ಪ್ರಾರಂಭೋತ್ಸವದ ಮಾಹಿತಿಯನ್ನು ಹಂಚಿಕೊಳ್ಳಬೇಕು. ದಾನಿಗಳನ್ನು ಸಂಪರ್ಕಿಸಿ ಶಾಲೆಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಬೇಕು.


10. ಜೂನ್ 1ರಂದು ಯಾವುದೇ ಶಿಕ್ಷಕರು ರಜೆ ಪಡೆಯಬಾರದು.


11. ಪ್ರತಿ ಶಾಲೆಯಲ್ಲೂ ಒಬ್ಬ ಅಧಿಕಾರಿ ಹಾಜರಿದ್ದು ಶಾಲಾ ಪ್ರಾರಂಭೋತ್ಸವವನ್ನು ಯಶಸ್ವಿಗೊಳಿಸಬೇಕು.


12. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಂಬಂಧಿಸಿದ ಸ್ವಚ್ಛತೆ ಹಾಗೂ ಅಗತ್ಯ ಸಾಮಗ್ರಿಗಳ ಸಿದ್ಧತೆ ಮಾಡಿಕೊಳ್ಳಬೇಕು.


13. ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಲಿದೆ.


14. ಜುಲೈ ಅಂತ್ಯದೊಳಗೆ ಶೂ ಮತ್ತು ಸಾಕ್ಸ್‌ಗಳನ್ನು ಇಲಾಖೆ ವತಿಯಿಂದ ವಿತರಿಸಲಾಗುವುದು.


15. SATS ದಾಖಲಾತಿಯನ್ನು ಸಂಪೂರ್ಣಗೊಳಿಸಬೇಕು.


16. ದ್ವಿಭಾಷಾ ಮಾಧ್ಯಮ ಆರಂಭದ ಕುರಿತು ಹೆಚ್ಚಿನ ಪ್ರಚಾರ ಮತ್ತು ಜಾಗೃತಿ ಮೂಡಿಸಬೇಕು.


17. 1ನೇ ತರಗತಿ ಮಕ್ಕಳಿಗೆ “ವಿದ್ಯಾ ಚೇತನ” ಅಡಿಯಲ್ಲಿ 30 ದಿನಗಳ ಚಟುವಟಿಕೆ ಆಧಾರಿತ ಬೋಧನೆ ನಡೆಸಬೇಕು.


18. 2 ರಿಂದ 4 ನೇ ತರಗತಿ ಮಕ್ಕಳಿಗೆ ಕಲಿಕಾ ಫಲ ಆಧಾರಿತ 15 ದಿನಗಳ ಸೇತುಬಂಧ ಕಾರ್ಯಕ್ರಮ ನಡೆಸಬೇಕು.


19. 5 ರಿಂದ 10 ನೇ ತರಗತಿ ಮಕ್ಕಳಿಗೂ 15 ದಿನಗಳ ಸೇತುಬಂಧ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.


20. ದ್ವಿಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಶಿಕ್ಷಕರಿಗೆ ಈಗಾಗಲೇ 5 ದಿನಗಳ ತರಬೇತಿ ನಡೆದಿದ್ದು, ಜೂನ್ ತಿಂಗಳಲ್ಲಿ ಪುನರ್ಬಲನ ಆನ್‌ಲೈನ್ ತರಬೇತಿ ನಡೆಯಲಿದೆ.


21. ಮುಂದಿನ ದಿನಗಳಲ್ಲಿ ಎಲ್ಲಾ ಶಿಕ್ಷಕರಿಗೆ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಾಗುವುದು.


22. ಎಲ್ಲಾ ಶಾಲೆಗಳ ಫಲಕಗಳಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ (ದ್ವಿಭಾಷಾ) ಎಂದು ಸ್ಪಷ್ಟವಾಗಿ ಬರೆಸಬೇಕು.


23. ಪ್ರತಿಯೊಂದು ಶಾಲೆಯಲ್ಲೂ ಫ್ಲೆಕ್ಸ್ ಅಳವಡಿಸುವುದು ಕಡ್ಡಾಯವಾಗಿದೆ.


24. ಕಳೆದ ವರ್ಷದ ದಾಖಲಾತಿಗಿಂತ ಈ ವರ್ಷದ ದಾಖಲಾತಿ ಹೆಚ್ಚಳವಾಗಿರಬೇಕು. ಇದನ್ನು ಪ್ರತಿ ಶಾಲೆಯಲ್ಲಿ ಪರಿಶೀಲಿಸಲಾಗುವುದು.


25. ಈ ತಿಂಗಳ ಅಂತ್ಯದೊಳಗೆ SATS ಹಾಗೂ UDISE+ ನಲ್ಲಿ ಎಲ್ಲಾ ಮಕ್ಕಳ ಪ್ರೋಗ್ರೇಷನ್ ಅಪ್‌ಡೇಟ್ ಪೂರ್ಣಗೊಳಿಸಬೇಕು.


26. ಆಧಾರ್ ಹಾಗೂ ಅಪಾರ್ ಐಡಿ ನೋಂದಣಿಯಲ್ಲಿ 100% ಪ್ರಗತಿ ಸಾಧಿಸಬೇಕು.


27. ಈಗಿರುವ ನಲಿ-ಕಲಿ ತರಗತಿ ಕೋಣೆಗಳನ್ನು ದ್ವಿಭಾಷಾ ಬೋಧನೆಗೆ ಅನುಗುಣವಾಗಿ ಪರಿಷ್ಕರಿಸಿ, ಇಂಗ್ಲಿಷ್ ಬೋಧನೆಗೆ ಪೂರಕವಾದ ಮಾಹಿತಿಗಳನ್ನು ನವೀಕರಿಸಬೇಕು.


ಆದೇಶ ಶಾಲಾ ಶಿಕ್ಷಣ ಇಲಾಖೆ,

(ಸಂಗ್ರಹ)