ಶೈಕ್ಷಣಿಕ ವರ್ಷ 2025-26 + LBA +FA & SA


ಶೈಕ್ಷಣಿಕ ಮಾರ್ಗದರ್ಶಿ 2025-26


DOWNLOAD


***

LBA INFORMATION


CLICK HERE

****

CCE INFORMATION 2025-26

****

2025-26 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ನಡೆಸುವ ಬಗ್ಗೆ.




***

ABOUT LBA ORDER

(16/07/2025)

***
***

 *FA and SA updates*










ಈ ವರ್ಷದಿಂದ ರೂಪನಾತ್ಮಕ ಮೌಲ್ಯಮಾಪನ ಹಾಗೂ ಸಂಕಲನಾತ್ಮಕ ಮೌಲ್ಯಮಾಪನದಲ್ಲಿ ಬದಲಾವಣೆಗಳಾಗಿವೆ.


ರೂಪನಾತ್ಮಕ ಮೌಲ್ಯಮಾಪನ ಹಾಗೂ ಸಂಕಲನಾತ್ಮಕ ಮೌಲ್ಯಮಾಪನಕ್ಕೂ ಕಡ್ಡಾಯವಾಗಿ ಪರೀಕ್ಷೆಗಳನ್ನು ತೆಗೆದುಕೊಳ್ಳುವುದು.


ಎಲ್ಲಾ ರೀತಿಯ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ LBA  ಪ್ರಶ್ನೆ ಕೋಠಿಯಲ್ಲಿ ನೀಡಿರುವ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳುವುದು.


ರೂಪನಾತ್ಮಕ ಮೌಲ್ಯಮಾಪನ ಒಟ್ಟು ನಾಲ್ಕು ,


ಆಯಾ ಅವಧಿಗಳಲ್ಲಿ ನಿಗದಿಪಡಿಸಿದ ಘಟಕಗಳ ಮೇಲೆ ಪ್ರಶ್ನೆ ಪತ್ರಿಕೆಯನ್ನ LBA ಪ್ರಶ್ನೆ ಕೋಠಿಯಿಂದ ಆಯ್ದುಕೊಂಡು ರಚಿಸಿಕೊಳ್ಳುವುದು.


ರೂಪನಾತ್ಮಕ ಮೌಲ್ಯಮಾಪನಕ್ಕೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆ ಅಂಕಗಳನ್ನು ನಿಗದಿಪಡಿಸುವುದು ಆಯಾ ಶಿಕ್ಷಕರ ವಿವೇಚನೆಗೆ ಬಿಟ್ಟದ್ದು ಆದರೆ ಪರೀಕ್ಷೆಯ ನಂತರ ಅಂಕಗಳನ್ನು ಇಲಾಖೆ ನಿಗದಿಪಡಿಸಿದ ಶೇಕಡ 10ಕ್ಕೆ  (ಹಿರಿಯ ತರಗತಿ) ಮತ್ತು ಶೇಕಡಾ 15ಕ್ಕೆ (ಕಿರಿಯ ತರಗತಿ) ಪರಿವರ್ತನೆ ಮಾಡಿಕೊಳ್ಳುವುದು. 


ರೂಪನಾತ್ಮಕ ಮೌಲ್ಯಮಾಪನಕ್ಕೆ ಈಗಾಗಲೇ ಇಲಾಖೆಯ ದಿನಾಂಕಗಳನ್ನು ನಿಗದಿಪಡಿಸಿದ್ದು ಅದೇ ದಿನಾಂಕದಂದು ಪರೀಕ್ಷೆಯನ್ನು ತೆಗೆದುಕೊಳ್ಳುವುದು.


***

*2025-25ನೇ ಈ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 1-10 ನೇ ತರಗತಿ ಪರೀಕ್ಷಾ ನೀತಿ ಬದಲಾವಣೆ: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ 'ಯೂನಿಟ್ ಟೆಸ್ಟ್' ಪದ್ಧತಿ LBA ಪದ್ದತಿ ಜಾರಿ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಓದಿಕೊಳ್ಳಿ* 


ಪರೀಕ್ಷಾ ನೀತಿ ಬದಲು,FA 1,2,3,4  SA, 1,2 ಬದಲಾಗಿ( LBA) ಪಾಠ ಅಧಾರಿತ ಮೌಲ್ಯಾOಕನ ಪದ್ಧತಿ ಜಾರಿ 2025-26 ಇದೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ 


ಖಾಸಗಿ ಶಾಲೆಗಳಲ್ಲಿ ಇರುವಂತೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಯೂನಿಟ್ ಟೆಸ್ಟ್ ಪದ್ಧತಿ ಜಾರಿಗೊಳಿಸಲು ಸರ್ಕಾರ ಕ್ರಮಕೈಗೊಂಡಿದೆ.


ಪಾಠ ಆಧಾರಿತ ಮೌಲ್ಯಾಂಕನ ಪರೀಕ್ಷೆ(LBA) ಅನುಷ್ಠಾನಗೊಳ್ಳಲಿದ್ದು, ವಿದ್ಯಾರ್ಥಿಗಳು ಪ್ರತಿ ಅಧ್ಯಯನ ಮುಗಿದ ನಂತರ ಕಿರುಪರೀಕ್ಷೆ ಬರೆಯಬೇಕಿದೆ.


ಸರ್ಕಾರಿ ಶಾಲೆಗಳಲ್ಲಿ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನ ಜಾರಿಯಲ್ಲಿದೆ.


ವಿದ್ಯಾರ್ಥಿಗಳಿಗೆ ಪ್ರತಿ ಅಧ್ಯಯನ ಮುಗಿದ ನಂತರ ಪರೀಕ್ಷೆ ಮಾಡುವುದರಿಂದ ಅರ್ಥೈಸಿಕೊಳ್ಳುವುದು, ಕಲಿಕೆಯ ಗುಣಮಟ್ಟದ ಬಗ್ಗೆ ಖಾತ್ರಿಗೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪಾಠ ಆಧಾರಿತ ಮೌಲ್ಯಾಂಕನ ಪರೀಕ್ಷೆ ಜಾರಿಗೊಳಿಸುತ್ತಿದೆ. ಪ್ರಸಕ್ತ 2025- 26ನೇ ಶೈಕ್ಷಣಿಕ ಸಾಲಿನಿಂದಲೇ ಇದು ಜಾರಿಗೆ ಬರಲಿದೆ.


ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬೇಕಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಶಾಲೆಗಳಿಗೆ ನೀಡಲಿದೆ. ಶಾಲೆಗಳು ಇದರ ಆಧಾರದ ಮೇಲೆ ಪರೀಕ್ಷೆ, ಮೌಲ್ಯಾಂಕನ ನಡೆಸಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಅವರ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ(SATS) ಅಪ್ಲೋಡ್ ಮಾಡಬೇಕಿದೆ.


ರಾಜ್ಯದಲ್ಲಿ 46, 757 ಸರ್ಕಾರಿ ಶಾಲೆಗಳಿದ್ದು, 42.92 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆರಂಭದಿಂದಲೇ ವಿದ್ಯಾರ್ಥಿಗಳ ಮೌಲ್ಯಾಂಕನ ಮಾಡಿದಲ್ಲಿ ಮುಂಬರುವ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಬಹುದೆಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಯೋಜನೆ ರೂಪಿಸಿದೆ.


ವಿದ್ಯಾರ್ಥಿಗಳಲ್ಲಿ ಕಲಿಕೆ, ಗ್ರಹಿಕೆ ಮಟ್ಟವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಎಫ್‌ಎ ಮತ್ತು ಎಸ್‌ಎ ಜಾರಿಗೆ ತರಲಾಗಿದೆ. ಒಂದು ವರ್ಷದಲ್ಲಿ ಎಫ್‌ಎ -4, ಎಸ್‌ಎ-2 ನಡೆಸಲಾಗುತ್ತಿತ್ತು. ಈಗ ಪಾಠ ಆಧಾರಿತ ಮೌಲ್ಯಾಂಕನ ಹೆಸರಲ್ಲಿ ಹಳೆ ಪದ್ಧತಿಯನ್ನು ಶಿಕ್ಷಣ ಇಲಾಖೆ ಮತ್ತೆ ಅನುಷ್ಠಾನಗೊಳಿಸುತ್ತಿದೆ ಎನ್ನುವ ಅಭಿಪ್ರಾಯ ಕೂಡ ಕೇಳಿ ಬಂದಿದೆ.


ಪ್ರತಿ ಪರೀಕ್ಷೆ 30 ಅಂಕಗಳಿಗೆ ಮೀಸಲಾಗಿದ್ದು, 25 ಪ್ರಶ್ನೆಗಳು ಇರುತ್ತವೆ. ಇವುಗಳಲ್ಲಿ ಸುಲಭ ಶೇಕಡ 75, ಸಾಮಾನ್ಯ ಶೇಕಡ 25, ಕಠಿಣ ಶೇಕಡ 10 ಎನ್ನುವ ಮಾದರಿಯಲ್ಲಿ ಪ್ರಶ್ನೆಗಳನ್ನು ವಿಭಜಿಸಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗುವುದು. ಬಹುತೇಕ ಪ್ರಶ್ನೆಗಳು ಬಹು ಆಯ್ಕೆ ಮಾದರಿಗಳಿಂದ ಕೂಡಿರುತ್ತವೆ.


ಎಸ್‌ಎಸ್‌ಎಲ್ಸಿ ಪ್ರಶ್ನೆ ಪತ್ರಿಕೆ ಸ್ವರೂಪ ಕೂಡ ಬದಲಾಗಲಿದೆ. ಬಹು ಆಯ್ಕೆ ಮಾದರಿ, ಒಂದು ವಾಕ್ಯದಲ್ಲಿ ಉತ್ತರಿಸಿ, ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ, ಸಂದರ್ಭ ಮತ್ತು ಸ್ವಾರಸ್ಯ, 8 ಅಥವಾ 10 ವಾಕ್ಯಗಳಲ್ಲಿ ಉತ್ತರಿಸಿ, ಗದ್ಯಭಾಗ ಓದಿ ಉತ್ತರ ಬರೆಯುವಂತಹ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.


****

ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಅನುಷ್ಠಾನ ಮತ್ತು

2025-26 ನೇ ಶೈಕ್ಷಣಿಕ ಸಾಲಿನ ಪೂರ್ವ ತಯಾರಿಯ ಕುರಿತ ಆದೇಶ

    ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ,ಪ್ರೌಢ ಶಾಲೆಗಳಿಗೆ 2025-26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನು ನಿಗದಿಪಡಿಸುವ ಬಗ್ಗೆ.

ಮೊದಲನೇ ಅವಧಿ : 


29/05/2025 ರಿಂದ 19/09/2025


ದಸರಾ ರಜೆ : 


20/09/2025 ರಿಂದ  07/10/2025


ಎರಡನೇ ಅವಧಿ : 


08/10/2025 ರಿಂದ 10/04/2026


ಬೇಸಿಗೆ ರಜೆ: 


11/04/2026  ರಿಂದ  28/10/2026

DOWNLOAD PDF HERE