ಸಾಹಿತ್ಯ: ಡಾ|| ಎಚ್.ಎಸ್. ವೆಂಕಟೇಶಮೂರ್ತಿ
ಸಂಗೀತ: ಉಪಾಸನಾ ಮೋಹನ್
ಗಾಯನ: ಉಪಾಸನಾ ಬಳಗ
ಕನ್ನಡವೇ ನಮ್ಮೊಲವು
ಭಾಷೆಗಳಿದ್ದರು ಹಲವು
ಕನ್ನಡ ಮಾತೆಯ ಗುಡಿಗೆ ಕನ್ನಡ
ಮಂತ್ರಾಕ್ಷರ ಬಲವು ||
ನೂರಾರಿದ್ದರು ಗಿರಿ ಪರ್ವತಗಳು
ಈ ಭೂತಳದೊಳಗೆ
ಸಹ್ಯಾದ್ರಿಯ ಸಿರಿಮುಡಿಗೆ ಮೀಸಲು
ಸಪ್ತ ವರ್ಣದ ಮಾಲೆ ||
ಸಾವಿರ ಸಾವಿರ ತಾರೆಗಳಿದ್ದರು
ಸಮವೆ ಚಂದ್ರಮಗೇ
ಕೋಟಿ ಕೋಟಿ ಬೆಲೆ ಇದ್ದರು ರತ್ನಕೆ
ಸಮವೇ ಕರಿಮಣಿಗೆ ||
ಎಲ್ಲ ತಾಯಿಯರು ಒಬ್ಬಳೆ ಅವ್ವ
ಭಾರತಿ ಮಡಿಲೊಳಗೆ
ಕನ್ನಡವೇ ಕನ್ನಡಿಗರುಸಿರು
ಕರ್ನಾಟಕದೊಳಗೆ ||