ಹಕ್ಕಿಯೊಂದು ಹಾಡಿತು ಕನ್ನಡದಿ ಕುಕ್ಕು ಕುಕ್ಕೂ ಕುಕ್ಕು ಕುಕ್ಕೂ ಕೂಹು - ಕೆ. ಎಸ್. ನರಸಿಂಹ ಸ್ವಾಮಿ


ಸಾಹಿತ್ಯ:-ಕೆ. ಎಸ್. ನರಸಿಂಹ ಸ್ವಾಮಿ

ಸಂಗೀತ:-ಹಂಸಲೇಖ

ಗಾಯನ:-ಲತಾ ಹಂಸಲೇಖ




ಹಕ್ಕಿಯೊಂದು ಹಾಡಿತು ಕನ್ನಡದಿ

ಕುಕ್ಕು ಕುಕ್ಕೂ ಕುಕ್ಕು ಕುಕ್ಕೂ ಕೂಹು

ಕಳೆದ ವರುಷ ಚೈತ್ರದಲ್ಲಿ

ಮನೆಗೆ ಬರುವ ಹಾದಿಯಲ್ಲಿ

ನಾನು ಕಂಡ ಮಾವಿನಲ್ಲಿ ||


ನಾನು ಬಳಿಗೆ ಹೋಗಲಿಲ್ಲ

ಅದೂ ನನ್ನ ನೋಡಲಿಲ್ಲ

ಅದರ ಭಾಷೆ ತಿಳಿಯಲಿಲ್ಲ

ಹಾಡು ಮಾತ್ರ ಹೊಳೆಯಿತು

ನಿನ್ನ ಹಾಡಿನರ್ಥವೇನು

ಎಂದು ಕೇಳಲಿಲ್ಲ ನಾನು

ಎದೆಯ ತುಂಬಿ ದನಿಯಾ ಜೇನು

ಕಣ್ಣು ಒದ್ದೆಯಾಯಿತು

ಹಾಡಿ ಹಾಡಿ ಹಾಡಿ ಕಡೆಗೆ ಹಾಡು ಮುಗಿಯಿತೆಂದು ತನಗೆ

ತೋರಿದಾಗ ಬೇರೆ ಕಡೆಗೆ

ಹಕ್ಕಿ ಹಾರಿ ಹೋಯಿತು ಹಾಡಿಕೊಂಡು 

ಕುಕ್ಕು ಕುಕ್ಕೂ,ಕುಕ್ಕು ಕುಕ್ಕೂ ಕೂಹು ಹಕ್ಕಿ||


ಹಕ್ಕಿ ಹೀಗೆ ಹಾಡಿತೆಂದು          

ದುಡಿದೆ ನಾನು ಮನೆಗೆ ಬಂದು

ಅಷ್ಟೇ ತಾನೆ ಎಂದರಿವರು

ನನ್ನ ಬಲ್ಲ ಗೆಳೆಯರು

ಅದರ ಕೊರಲಿನಲ್ಲಿ ಹಸಿವು

ಮುಗಿತೇನೋ ಎಂದಾನೊಬ್ಬ

ಭಗ್ನವಾಗಿ ಅದರ ಒಲವು

ಅದ್ದೀತೇನೊ ಎಂದಾನೊಬ್ಬ

ಹಕ್ಕಿ ತನ್ನ ಖುಷಿಗೆ ತಾನೆ

ಹಾಡಿತೇನೊ ಎಂದಾನೊಬ್ಬ

ರಾಗ ತಾಳ ಗೊತ್ತೇ ಅದಕೆ

ಕೇಳಿ ನೋಡು ಎಂದಾನೊಬ್ಬ

ಇಷ್ಟು ಸರಳವಾದ ಹಾಡು

ತನಗೆ ಹಿಡಿಸದೆಂದನೊಬ್ಬ

ಅದನು ಕೇಳುವಷ್ಟು ಬಿಡುವು

ತನಗೆ ಸಿಕ್ಕದೆಂದನೊಬ್ಬ

ಹಾಗೆ ಹೀಗೆ ಚರ್ಚೆ ನಡೆದು

ಎಲ್ಲಾ ಚರ್ಚೆಯಲ್ಲಿ ಮುಗಿದು

ಮೂಲ ವಿಷಯ ಮರೆಗೇ ಸರಿದು

ಹೇಗೋ ಸಂಜೆಯಾಯಿತು ||


ಮತ್ತೆ ಬಂದ ಚೈತ್ರದಲ್ಲಿ

ಮನೆಗೆ ಬರುವ ಹಾದಿಯಲ್ಲಿ

ತಳಿತಾದೆ ಮಾವಿನಲ್ಲಿ

ಅದೆ ಹಕ್ಕಿ ಹಾಡಿತು ಕನ್ನಡದಿ 

ಕುಕ್ಕು ಕುಕ್ಕೂ ಕುಕ್ಕು ಕುಕ್ಕೂ ಕೂಹು ||