ನಮ್ಮ ನಾಡು, ನಮ್ಮ ನುಡಿ, ನಮ್ಮ ಸಂಸ್ಕೃತಿ - ಎಚ್. ಡುಂಡಿರಾಜ್


ಸಾಹಿತ್ಯ:-ಎಚ್. ಡುಂಡಿರಾಜ್

ಸಂಗೀತ: ಉಪಾಸನಾ ಮೋಹನ್

ಗಾಯನ: ಉಪಾಸನಾ ಬಳಗ



ನಮ್ಮ ನಾಡು, ನಮ್ಮ ನುಡಿ, ನಮ್ಮ ಸಂಸ್ಕೃತಿ

ಹೆಮ್ಮೆಯಿಂದ ಹಾಡಿ ನಲಿಯುವಂತ ಸಂಗತಿ ||


ಭಾರತಾಂಬೆ ಕೊರಳಿನಲ್ಲಿ ಹತ್ತು ಹಲವು ಸರ 

ಅವುಗಳಲ್ಲಿ ಸಿರಿಗನ್ನಡ ಶ್ರೀಗಂಧದ ಹಾರ 

ಭಾರತಾಂಬೆ ಗೂಡಿನಲ್ಲಿ ನೂರು ಹಕ್ಕಿ ಸ್ವರ 

ಗುರುತುಸಿರೆ ಕನ್ನಡದ ಕೋಗಿಲೆಯ ಇಂಚರ ||


ಭಾರತಾಂಬೆ ಧರಿಸುವಳು ವಿವಿಧ ಉಡುಗೆ ತೊಡುಗೆ 

ಎಂಥ ಹೊಳಪು ನಮ್ಮ ನುಡಿಗೆ ರೇಷ್ಮೆ ಸೀರೆ ಹಾಗೆ 

ಭಾರತಾಂಬೆ ಮರದ ರೆಂಬೆ ಕೊಂಬೆ ತುಂಬಾ ಹೂವು 

ಕನ್ನಡದ ಮಲ್ಲಿಗೆಯ ಮರೆಯ ಬಹುದೆ ನಾವು ||