ಸಾಹಿತ್ಯ:-ಬಿ.ಎಂ.ಶ್ರೀ
ಸಂಗೀತ:-ಪಿ. ಕಾಳಿಂಗರಾವ್
ಗಾಯನ:-ರವಿ ಮುರೂರು,ಮಂಗಳಾರವಿ ಮತ್ತು ವೃಂದ
ಏರಿಸಿ, ಹಾರಿಸಿ, ಕನ್ನಡದ ಬಾವುಟ
ಓಹೋ ಕನ್ನಡನಾಡು
ಆಹಾ ಕನ್ನಡ ನುಡಿ
ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ
ಬಾಳ್ ಕನ್ನಡ ತಾಯ್
ಏಳ್ ಕನ್ನಡ ತಾಯ್
ಆಳ್ ಕನ್ನಡ ತಾಯ್
ಕನ್ನಡಿಗರೊಡತಿ ಓ ರಾಜೇಶ್ವರೀ….
ಕನ್ನಡದ ಬಾವುಟವ ಹಿಡಿಯದವರಾರು
ಕನ್ನಡದ ಬಾವುಟಕೆ ಮಡಿಯದವರಾರು
ನಮ್ಮ ಈ ಬಾವುಟಕೆ ಮಿಡಿಯದವರಾರು
ಹೇಳಿರೋ ಹೆಸರೊಂದು ನೆನಹಿನಲಿ ಸುಳಿದರೆ
ಹುಡುಕಿರೋ ಹೇಡಿ ತಾನೊಬ್ಬ ಮನೆಗುಳಿದರೇ
ಬಾಳ್ ಕನ್ನಡ ತಾಯ್
ಏಳ್ ಕನ್ನಡ ತಾಯ್
ಆಳ್ ಕನ್ನಡ ತಾಯ್
ಕನ್ನಡಿಗರೊಡತಿ ಓ ರಾಜೇಶ್ವರೀ….
ಕನ್ನಡದ ನಾಡಲ ಕನ್ನಡದ ನುಡಿಯಲ
ಕನ್ನಡಿಗನೆದೆ ಕಡಿಯಲಾ ತೆರೆಯಲ ಕೆನೆಯಲ
ಬೆಳಕು ಹರಿಯಿತು ಏಳಿ ಇರುಳು ಸರಿಯಿತು ತಾಯ ಕರೆ ಕೇಳಿ
ಏಳಿರೋ ಏಳಿರೋ ಬಾಳ ಬಲಿ ಬೇಳಿರೋ
ಎಲ್ಲೊಲುಮೆಯೂ ಕೂಡಿದೊಂದೊಲುಮೆ ತಾಳಿರೋ
ಬಾಳ್ ಕನ್ನಡ ತಾಯ್
ಏಳ್ ಕನ್ನಡ ತಾಯ್
ಆಳ್ ಕನ್ನಡ ತಾಯ್
ಕನ್ನಡಿಗರೊಡತಿ ಓ ರಾಜೇಶ್ವರೀ….
ಇಂದಿನದೆ ಹೇಳಿರೋ ಈ ನಮ್ಮ ಬಾವುಟ
ಕುಂದಿಹುದೆ ನೋಡಿರೋ ಈ ನಮ್ಮ ಬಾವುಟ
ಚಂದವಿದೆ ಇಂದಿಗೂ ಕನ್ನಡದ ಬಾವುಟ
ಹಾರಿಸಿ, ತೋರಿಸಿ ಕೆಚ್ಚೆದೆಯ ಬಾವುಟ
ಬಾಳ್ ಕನ್ನಡ ತಾಯ್
ಏಳ್ ಕನ್ನಡ ತಾಯ್
ಆಳ್ ಕನ್ನಡ ತಾಯ್
ಕನ್ನಡಿಗರೊಡತಿ ಓ ರಾಜೇಶ್ವರೀ….
ಏನೇನಕಂಡುದೋ ಬಾನಾಡಿ ಬಾವುಟ
ಆವುದನು ಕಾಣದೋ ಜೀವಕಳೆ ಬಾವುಟ
ಕನ್ನಡದ ಬಾವುಟಗಳೊಂದಾದ ಬಾವುಟ
ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ
ಬಾಳ್ ಕನ್ನಡ ತಾಯ್
ಏಳ್ ಕನ್ನಡ ತಾಯ್
ಆಳ್ ಕನ್ನಡ ತಾಯ್
ಕನ್ನಡಿಗರೊಡತಿ ಓ ರಾಜೇಶ್ವರೀ….