ಮತ್ತೆ ಎಂದು ಮೆರೆವೆಯಮ್ಮ ಕನ್ನಡಿಗರ ಪೊರೆವೆಯಮ್ಮ - ಕೆ.ಎಸ್.ನಿಸಾರ್ ಅಹಮದ್

 ಸಾಹಿತ್ಯ:–ಕೆ.ಎಸ್.ನಿಸಾರ್ ಅಹಮದ್

ಸಂಗೀತ:–ಬಿ. ವಿ. ಶ್ರೀನಿವಾಸ

ಗಾಯನ:–ಮೈಸೂರು ಅನಂತಸ್ವಾಮಿ




ಮತ್ತೆ ಎಂದು ಮೆರೆವೆಯಮ್ಮ 

ಕನ್ನಡಿಗರ ಪೊರೆವೆಯಮ್ಮ 

ಕರ್ನಾಟಕಧೀಶ್ವರಿ 

ಮುಗಿವುದೆಂದು ನಿನ್ನ ಪಾಡು 

ಪುಟಿವುದೆಂದು ಹೊಸತು ಹಾಡು 

ಅರಿನಾಶಿ ಅನಶ್ವರಿ ||


ಪರಭಾಷ ಜನರ ನಡುವೆ 

ಪ್ರಾಗ್ವೈಭವ ರತ್ನದೊಡವೆ 

ಕಳೆದುಕೊಂಡು ನೀನು ಬಡವೆ 

ನಿನ್ನ ಮನೆಯೊಳೆ 

ಗತಕಾಲದ ಭವ್ಯವೃಕ್ಷದಲ್ಲೇ 

ನಿನ್ನ ಪಾದ ವರ್ಷ 

ನಿನಗಿಲ್ಲವೆ ಸವಿಭವಿಷ್ಯ 

ನಾಡಿನಿನಿಯೊಳೆ ||


ಅರಸುಗುವರರಂತೆ ಬಾಳಿ 

ನೆರೆಯ ರಾಜ್ಯಗಳನು ಆಳಿ 

ಮೆರೆದ ತನಯವಿಂದು 

ಗಾಳಿಗೈಯ ತರಗೆಲೆ 



ಮರೆತು ತಮ್ಮ ಕೀರ್ತಿ ತವರ 

ಹೆರರ ಸೇವೆಯನ್ನು 

ಬೆವರ ಸುರಿಸಿ ಕೈಯ 

ತೊಳೆಯುತಿಹರು ಕಣ್ಣ ಹನಿಯೊಳೆ ||


ನಾಡಗುಡಿಗೆ ಹೊನ್ನ ಕಳಸ 

ಕಾವ್ಯ ಕಲಾ ಬಿತ್ತಿಗೆಲದ 

ಸಾಧನೆಗಳ ಧ್ವಜಸ್ಥಭ 

ನಿಲಿಸಲಾಸೆ ಬಲಿಯಲಿ 

ಜನಜೀವನ ಉನ್ನತ ಗುರಿ 

ನವರಂಗದ ಭುವನೇಶ್ವರಿ 

ಹೃದಯ ಗರ್ಭದಲ್ಲಿ ನುಡಿಯ 

ರಾಜೇಶ್ವರಿ ನಲಿಯಲಿ ||