APAAR, which stands for Automated Permanent Academic Account Registry, is a specialized identification system designed for all students in India. This initiative is part of the 'One Nation, One Student ID' program launched by the government, aligning with the new National Education Policy of 2020....
ವಿದ್ಯಾರ್ಥಿಗಳಿಗೆ ಅಪಾರ್ ಐಡಿ ಎಂದರೇನು?
ಅಪಾರ್ ಐಡಿ ಕಾರ್ಡ್ ಅನ್ನು ಶಿಕ್ಷಣ ಸಚಿವಾಲಯವು ಪ್ರಾರಂಭಿಸಿದೆ. ಇದು ಭಾರತದಾದ್ಯಂತ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಅಥವಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಡಿಜಿಟಲ್ ಐಡಿ ಕಾರ್ಡ್ ಆಗಿದೆ. ಅಪಾರ್ ಐಡಿ ಕಾರ್ಡ್ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಲಗಳು, ಪದವಿಗಳು ಮತ್ತು ಇತರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಲು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಅಡಿಯಲ್ಲಿ 2026-27 ರ ವೇಳೆಗೆ ಶಾಲಾ ವಿದ್ಯಾರ್ಥಿಗಳ ಎಲ್ಲಾ ಶಿಕ್ಷಣ ದಾಖಲೆಗಳನ್ನು ಅದರ 'ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ID' ಎಂಬ ಯೋಜನೆಯ ಅಡಿಯಲ್ಲಿ ಈ ಗುರುತಿನ ಚೀಟಿಗಳ ವಿತರಣೆಗೆ ಮುಂದಾಗಿದೆ. ಇದು ವಿದ್ಯಾರ್ಥಿಗಳಿಗೆ ಬಹಳಷ್ಟು ಕೆಲಸಕ್ಕೆ ಬರಲಿದೆ ಎಂದು ತಿಳಿಸಲಾಗಿದೆ.
ವಿದ್ಯಾರ್ಥಿ ಪಡೆದ ಪದವಿಗಳು, ಸ್ಕಾಲರ್‌ಶಿಪ್, ಬಹುಮಾಣ, ಕ್ರೆಡಿಟ್ ಅವರ ಶೈಕ್ಷಣಿಕ ದಾಖಲೆಗಳು, ಅವರ ಅಧ್ಯಯನ ವಿಷಯಗಳ ಇತಿಹಾಸ ಸೇರಿ ಹಲವು ಮಾಹಿತಿಯನ್ನು ಈ ಕಾರ್ಡ್‌ಗಳ ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಯ ಎಲ್ಲಾ ದಾಖಲೆಗಳು ಒಂದೇ ಕಾರ್ಡ್‌ನಲ್ಲಿ ಏಕೀಕೃತ ವಿಧಾಣಧ ಅಡಿಗೆ ತರುವಂತಹ ಯೋಜನೆ ಇದಾಗಿರಲಿದೆ. APAAR ID ಕಾರ್ಡ್‌ನಲ್ಲಿ ಆಧಾರ್ ಕಾರ್ಡ್‌ನಂತೆಯೇ ವಿಶೇಷ ಗುರುತಿನ ಸಂಖ್ಯೆಗಳ ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಪ್ರಯಾಣ ಮತ್ತು ಸಾಧನೆಗಳನ್ನು ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಟ್ರ್ಯಾಕ್ ಮಾಡಲು ಸಹಾಯ ಮಾಡಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಪೋಷಕರನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ಅಥವಾ ಒಂದು ರಾಜ್ಯಕ್ಕೆ ಮತ್ತೊಂದು ರಾಜ್ಯಕ್ಕೆ ವರ್ಗಾಯಿಸುವ ಸಂದರ್ಭದಲ್ಲಿ ಸಹಾಯಕವಾಗಿರುತ್ತದೆ.
ಹಾಗೆ ಅರ್ಧದಲ್ಲಿ ಶಾಲೆಯನ್ನು ಬಿಟ್ಟಿರುವ, ಅನುತ್ತೀರ್ಣರಾದ ವಿದ್ಯಾರ್ಥಿಗಳ ವಿಶೇಷ ಮೇಲ್ವಿಚಾರಣೆ ಹಾಗೂ ಅವರನ್ನು ಮತ್ತೆ ಶಾಲೆಯತ್ತ ಕರೆತರುವುದರಿಂದ ಹಿಡಿದು ದೇಶದ ಸಾಕ್ಷರತೆಯ ಮಟ್ಟ ಹೆಚ್ಚಿಸಲು ಕೂಡ ಇದು ನೆರವಾಗಲಿದೆ ಎನ್ನಲಾಗಿದೆ. ಹಾಗೆ ಈ ಕಾರ್ಡ್‌ನಲ್ಲಿ ಅವರು ಸಮಗ್ರ ವರದಿಗಳು, ಫಲಿತಾಂಶಗಳು ಸೇರಿ ಎಲ್ಲಾ ಮಾಹಿತಿಯನ್ನು ಸುರಕ್ಷಿತವಾಗಿಡಬಹುದು.
ಅಪಾರ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡಲಾಗುತ್ತದೆಯೇ?
ಈಗ ಎಲ್ಲಾ ಕಾರ್ಡ್‌ಗಳನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಗ್ ಮಾಡಲಾಗುತ್ತಿದೆ. ಈ ಅಪಾರ್ ಕಾರ್ಡ್ ಕೂಡ ಆಧಾರ್ ಜೊತೆಗೆ ಲಿಂಕ್ ಮಾಡಲಾಗುತ್ತದೆ. ಆದ್ರೆ ಅಪಾರ್ ಕರ್ಡ್‌ನ ಸಂಖ್ಯೆಗಳು ಬದಲಾಗುವುದಿಲ್ಲ. ಈ ಕಾರ್ಡ್‌ಗೆ ಪೋಷಕರ ಆಧಾರ್‌ನೊಂದಿಗೂ ಲಿಂಕ್ ಮಾಡಲಾಗುತ್ತದೆ. ಈ ಐಡಿಯು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಿಂದ ಪ್ರಾರಂಭವಾಗುವ ಶಾಲಾ ಶಿಕ್ಷಣ ವ್ಯವಸ್ಥೆಯಾದ್ಯಂತ ಸಾರ್ವತ್ರಿಕ ವಿದ್ಯಾರ್ಥಿ ಗುರುತಿಸುವಿಕೆಯಾಗಿ ಕಾರ್ಯನಿರ್ವಹಿಸುತ್ತದೆ...
ಐಡಿ ಜನರೇಟ್ ಮಾಡಲು ದಾಖಲಿಕರಣಕ್ಕಾಗಿ ಪೋಷಕರ ಒಪ್ಪಿಗೆ ಪತ್ರ .