Maharshi Valmiki - ಮಹರ್ಷಿ ವಾಲ್ಮೀಕಿ











































        ಭಾರತವು ಪ್ರಪಂಚದಾದ್ಯಂತ ತನ್ನ ಸಾಹಿತ್ಯ, ಪಠ್ಯ ಮತ್ತು ಕವಿತೆಗಳಿಗೆ ಬಹಳ ಹೆಸರುವಾಸಿಯಾಗಿದೆ.

ಜಗತ್ತಿನ ಅತಿ ದೊಡ್ಡ ಕಾವ್ಯಗಳಲ್ಲಿ ಒಂದಾದ ರಾಮಾಯಣವನ್ನು ಇಲ್ಲಿ ರಚಿಸಲಾಗಿದೆ.

ರಾಮಾಯಣ : ಇಲ್ಲಿ ರಾಮನೇ ಕಥಾನಾಯಕ. ಅಯನ ಎಂದರೆ ಪಯಣ ಎಂದರ್ಥ. ಒಟ್ಟಾರೆ ರಾಮಾಯಣದ ಅರ್ಥ ಶ್ರೀ ರಾಮನ ಜೀವನದ ಪಯಣ ಎಂಬರ್ಥವನ್ನು ಹೊಂದಿದೆ.

ರಾಮಾಯಣ ರಚಿಸಿದ ಋಷಿ ವಾಲ್ಮೀಕಿಯನ್ನು ಆದಿಕವಿ (ಮೊದಲ ಕವಿ) ಎಂದು ಕರೆಯಲಾಗುತ್ತದೆ ಹಾಗಾದರೆ ಬನ್ನಿ ಆದಿಕವಿ ವಾಲ್ಮೀಕಿಯ ಬಗ್ಗೆ ಮಾಹಿತಿ ಪಡೆದುಕೊಳ್ಳೋಣ.

ವಾಲ್ಮೀಕಿ ರಾಮಾಯಣದಲ್ಲಿ ಸುಮಾರು 24 ಸಾವಿರ ಶ್ಲೋಕಗಳನ್ನು ಏಳು ಖಂಡಗಳಾಗಿ ಅಂದ್ರೆ ಭಾಗಗಳಾಗಿ ವಿಭಾಗಿಸಲಾಗಿದೆ.

 ಈ ಏಳು ಕಾಂಡಗಳಂದರೆ 
1) ಬಾಲಕಾಂಡ್ 
2) ಅಯೋಧ್ಯಾ ಕಾಂಡ್ 
3) ಅರಣ್ಯ ಕಾಂಡ್ 
4) ಕಿಷ್ಕಿಂದ ಕಾಂಡ್ 
5) ಸುಂದರಕಾಂಡ 
6)ಯುದ್ದಕಾಂಡ್ ಅಥವಾ ಲಂಕಾ ಕಾಂಡ್ 
6)ಉತ್ತರ ಕಾಂಡ್.


ಈ ಏಳು ಕಾಂಡಗಳಲ್ಲಿ ಶ್ರೀರಾಮನ ಜೀವನ ಚರಿತ್ರೆಯನ್ನು ವಿವರಿಸಲಾಗಿದೆ.

ಋಷಿ ವಾಲ್ಮೀಕಿಯ ಸಂಕ್ಷಿಪ್ತ ಜೀವನ ಪರಿಚಯ ತಿಳಿಯೋಣ.

ತ್ರೇತಾಯುಗದಲ್ಲಿ ಭೃಗ  ಗೋತ್ರದ ಪ್ರಚೇತ ಎಂಬ ಬ್ರಾಹ್ಮಣನ ಮಗನಾಗಿ ಇವರು ಜನಿಸಿದರು. ಮಗನಿಗೆ ರತ್ನಾಕರ ಎಂಬ ಹೆಸರನ್ನ ನೀಡಿದ್ದರು.

ಚಿಕ್ಕ ವಯಸ್ಸಿನಲ್ಲಿ ತಂದೆಯು ಹೋಗಬೇಡ ಎಂದು ತಿಳಿಸಿದ್ದ ಸಮೀಪದ ಅರಣ್ಯಕ್ಕೆ ರತ್ನಾಕರ ಹೋಗಿದ್ದನು.

ಆದರೆ ಮರಳಿ ಬರುವ ದಾರಿಯನ್ನು ಹುಡುಕುತ್ತಾ ದಾರಿ ಕಾಣದಾಗದೆ ಕಾಡಿನಲ್ಲಿ ಉಳಿಯುವಂತಾಗುತ್ತದೆ.

ದಾರಿ ಕಳೆದುಕೊಂಡ ಚಿಕ್ಕ ಮಗು ರತ್ನಾಕರ ಸುಮಾಲಿ ಪಂಗಡದ ವ್ಯಕ್ತಿಗೆ ದೊರೆತು ಆತನ ಪೋಷಣೆಯಲ್ಲಿ ಬೆಳೆದು ದೊಡ್ಡವನಾಗುತ್ತಾನೆ.

ದೊಡ್ಡವನಾದ ರತ್ನಾಕರನು ವಿವಾಹಿತನಾಗಿ ಸಂಸಾರದ ಜವಾಬ್ದಾರಿಯನ್ನು ಹೊತ್ತನು.


 ಕುಟುಂಬದ ಜವಾಬ್ದಾರಿ ಹೆಚ್ಚಿ ಕುಟುಂಬದ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಕೂಡ ಅವನ ಹೆಗಲಿಗೆ ಹೊರೆಯಾಯಿತು.


 ಕುಟುಂಬದ ಜವಾಬ್ದಾರಿ ನಿರ್ವಹಣೆಗೆ ಕಳ್ಳತನ,  ಡಕಾಯತಿಯಂತಹ ಕೃತ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡನು.

  ಒಂದು ದಿನ ನಾರದ ಮುನಿಗಳು ಅಲ್ಲಿ ಹೋಗುವಾಗ ಅವರನ್ನು ದೋಚಲು ರತ್ನಾಕರ ಅವರನ್ನು ಅಡ್ಡಗಟ್ಟಿದನು.

 ಯಾವಾಗ ನಾರದ ಮುನಿಗಳನ್ನು ದೋಚಲು ಚಾಕು  ತೋರಿಸಿದಾಗ ಮುನಿಗಳು ಹೆದರದೆ ಅವನಿಗೆ ಒಂದು ಪ್ರಶ್ನೆಯನ್ನು ಕೇಳಿದರು.


 ಯಾವ ಕುಟುಂಬದ ನಿರ್ವಹಣೆಗೆ ಈ ಕೃತ್ಯ ಮಾಡಿ ನಿನ್ನ ಪಾಪದ ಕೊಡವನ್ನು ತುಂಬಿಸಿಕೊಳ್ಳುತ್ತಿರುವೆಯೋ ಆ ಪಾಪದ ಪಾಲಿನಲ್ಲಿ ನಿನ್ನ ಕುಟುಂಬದವರು ಪಾಲುದಾರರಾಗುವರೇ ಎಂದು ಕೇಳಿದರು.

ನಾರದ ಮುನಿಗಳ ಈ ಪ್ರಶ್ನೆಗೆ ರತ್ನಾಕರ ಉತ್ತರಿಸಲಾಗದೆ ಬಹಳ ವಿಚಾರಿತನಾದ.  ಮನೆಗೆ ತೆರಳಿ ಇದೇ ಪ್ರಶ್ನೆಯನ್ನು ಮನೆಯವರಿಗೆ ಕೇಳಿದ ಆದರೆ ಮನೆಯವರು ಅವನ ಮಾತನ್ನು ತಿರಸ್ಕರಿಸಿದರು.


 ನಂತರ ಅವನಿಗೆ ತನ್ನ ತಪ್ಪಿನ ಅರಿವಾಯಿತು. ಅಂದಿನಿಂದ ಎಲ್ಲವನ್ನು ಬಿಟ್ಟು, ತಕ್ಷಣ ನಾರದ ಮುನಿಗಳನ್ನು ಭೇಟಿ ಆಗಲು ತೆರಳಿದನು.


ನಾರದ ಮುನಿಗಳು ತನ್ನ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ರಾಮ ರಾಮ ಎನ್ನುತ್ತಾ ತಪಸ್ಸು ಮಾಡಲು ತಿಳಿಸಿ ಅಲ್ಲಿಂದ ಹೊರಟು ಹೋದರು.

ಹಲವು ವರ್ಷಗಳ ನಂತರ ನಾರದ ಮುನಿಗಳು ರತ್ನಾಕರನ ಭೇಟಿ ಮಾಡಲು ಅಲ್ಲಿಗೆ ಬಂದರು. ಆದರೆ ಅವರಿಗೆ ಆತನು ಕಾಣಲಿಲ್ಲ .


ಆಗ ಅಲ್ಲಿಯ ಒಂದು ಹುತ್ತದಿಂದ ಮರ ಮರ ಎಂಬ ಧ್ವನಿಯು ಕೇಳಿಸಿತು.

ಅದರ ಬಳಿಗೆ ಹೋದ ನಾರದ ಮುನಿಗಳು ರತ್ನಾಕರನನ್ನು ಹೊರಬರಲು ಕರೆದರು.  ಅದರಿಂದ ರತ್ನಾಕರನು ಬ್ರಾಹ್ಮಣ ಅವತಾರದಿಂದ ಹೊರಬಂದನು.


ಈ ರೀತಿಯಾಗಿ ರತ್ನಾಕರ ವಾಲ್ಮೀಕಿ ಎಂಬ ಹೆಸರು ಪಡೆದರು. ಸಂಸ್ಕೃತದಲ್ಲಿ ಹುತ್ತಕ್ಕೆ ವಲ್ಮೀಕ ಎಂದು ಕರೆಯುತ್ತಾರೆ. ವಲ್ಮೀಕದಿಂದ ಹೊರಬಂದವರು ವಾಲ್ಮೀಕಿಯಾದರು.


ಒಂದು ಸಂಜೆ ಋಷಿ ವಾಲ್ಮೀಕಿ ಅವರು ತಮ್ಮ ಶಿಷ್ಯ ಭಾರದ್ವಾಜನ ಜೊತೆಗೆ ತಮಸಾ ನದಿಯ ದಡದಲ್ಲಿ ವಿಹರಿಸುತ್ತಿದ್ದರು.

 ಅಲ್ಲಿಯೇ ಎರಡು ಕ್ರೌಂಚ ಪಕ್ಷಿಗಳು ಪ್ರೇಮದಿಂದ ಆಟವಾಡುತ್ತಿರುವುದನ್ನು ನೋಡುತ್ತಿದ್ದರು.


ತಕ್ಷಣಕ್ಕೆ ಎಲ್ಲಿಂದಲೋ ಬಂದ ಒಂದು ಬಾಣವು ಒಂದು ಕ್ರೌಂಚ ಪಕ್ಷಿಯ ಮೇಲೆ ಬಿದ್ದು ಆ ಪಕ್ಷಿಯ ಸಾವಿಗೆ ಕಾರಣವಾಗುತ್ತದೆ.

ಒಂದು ಕ್ರೌಂಚ ಪಕ್ಷಿಯ ಸಾವನ್ನು ನೋಡಿದ ಇನ್ನೊಂದು ಪಕ್ಷಿಯು ಸಹ ಸ್ವತಃ ಸಾವನ್ನಪುತ್ತದೆ.



 ಸಂತೋಷಭರಿತವಾಗಿದ್ದ ಪಕ್ಷಿಗಳ ದುರಂತ ಕಣ್ಣಾರೆ ಕಂಡ ವಾಲ್ಮೀಕಿ ಮುನಿಗಳು,  ಬಾಣ ಹೂಡಿದ ವ್ಯಕ್ತಿಯನ್ನು ಹುಡುಕಲು ಆರಂಭಿಸಿದರು.

ಮುನಿಗಳು ಬೇಟೆಗಾರನನ್ನು ನೋಡಿ ಬಹಳ ಕುಪಿತರಾಗುತ್ತಾರೆ. ಕೋಪದಿಂದ ನೋಡಿದ ಮುನಿಗಳಿಂದ ಸಂಸ್ಕೃತದ ಮೊದಲ ಶ್ಲೋಕ ಹೊರಹೊಮ್ಮುತ್ತದೆ 


ಆ ಶ್ಲೋಕವು ಈ ರೀತಿಯಲ್ಲಿದೆ.

ಮಾ ನಿಷಾದ ಪ್ರತಿಷ್ಟಾಂ
ತ್ವಮಗಮಃ ಶಾಶ್ವತೀಃ ಸಮಾಃ |
ಯತ್ಕ್ರೌಂಚ ಮಿಥುನಾದೇಕಮವಧೀಃ ಕಾಮಮೋಹಿತಮ್ |


ಈ ಶ್ಲೋಕದ ಅರ್ಥ : 

ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ | 
ನಿನ್ನ ಪಾಪದ ಫಲವಾಗಿ ನೀ ಈ ಕೂಡ ಸಾಯಿ |

ವಾಲ್ಮೀಕಿ ಋಷಿಗಳು ಈ ಶ್ಲೋಕವನ್ನು ಅನುಷ್ಟುಪ್ ಛಂದ್   ನಲ್ಲಿ ರಚಿಸಿದ್ದಾರೆ . 


ಈ ಘಟನೆಯ ಸ್ವಲ್ಪ ಸಮಯದ ನಂತರ ಬ್ರಹ್ಮ ದೇವರು ಋಷಿ ವಾಲ್ಮೀಕಿ ಅವರನ್ನು ಅವರ ಆಶ್ರಮದಲ್ಲಿ ಭೇಟಿ ಮಾಡಿದರು.

 ಮಹರ್ಷಿಗಳಿಗೆ ಮರ್ಯಾದಾ ಪುರುಷೋತ್ತಮ್ ಶ್ರೀ ರಾಮನ ಜೀವನ ಚರಿತ್ರೆಯನ್ನು ಅನುಷ್ಟುಪ್  ಛಂದ್ ನಲ್ಲಿ ರಚಿಸಲು ತಿಳಿಸಿದರು ಎನ್ನಲಾಗುತ್ತದೆ.

 ಈ ರೀತಿಯಾಗಿ ಋಷಿ ವಾಲ್ಮೀಕಿಯು ರಾಮಾಯಣ ಎಂಬ ಮೊದಲ ಕಾವ್ಯ ರಚಿಸಿ ಆದಿಕವಿ ಎನಿಸಿಕೊಂಡರು.

***

🌺ಅಕ್ಟೋಬರ್-17 ಮಹರ್ಷಿ ವಾಲ್ಮೀಕಿ ಜಯಂತಿ

ರಾಮಾಯಣ
    ಮಹಾಕಾವ್ಯವನ್ನು ಬರೆದಿದ್ದಕ್ಕಾಗಿ ವಾಲ್ಮೀಕಿ ಅವರು ಅತ್ಯಂತ ಪ್ರಸಿದ್ಧರಾಗಿದ್ದಾರೆ.

     ಇದು ಭಗವಾನ್ ವಿಷ್ಣುವಿನ ಎಂಟು ಅವತಾರಗಳ ಕಥೆಯನ್ನು ಹೇಳುತ್ತದೆ. ವಾಲ್ಮೀಕಿ ಅವರನ್ನು ಭಾರತದಲ್ಲಿ ದೇಶ ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

     ಮೂಲತಃ ವಾಲ್ಮೀಕಿ ಬರೆದ ರಾಮಾಯಣವು 24,000 ಶ್ಲೋಕಗಳನ್ನು ಒಳಗೊಂಡಿದೆ. ರಾಮಾಯಣವು ಸುಮಾರು 480,002 ಪದಗಳಿಂದ ಕೂಡಿದೆ. ಇದು ಮಹಾಭಾರತದ ಪೂರ್ಣ ಪಠ್ಯದ ಕಾಲು ಭಾಗವಾಗಿದೆ.

    ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ರಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ.

    ರಾಮಾಯಣವು ಭಾರತೀಯರ ಜೀವನಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ. ಮಹರ್ಷಿ    
ವಾಲ್ಮೀಕಿಯು ರಾಮಾಯಣದಲ್ಲಿ ಭರತಖಂಡದಲ್ಲಿನ ಅರಣ್ಯಗಳು, ಪರ್ವತಗಳು, ನದಿಗಳು, ಸರೋವರಗಳು, ಸಮುದ್ರಗಳು ಮತ್ತು ಜಲಪಾತಗಳ ಪ್ರಕೃತಿ ಸೌಂದರ್ಯವನ್ನು ವರ್ಣಿಸಿದ್ದಾರೆ.  ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ! ಚಿತ್ರಿಸಿದ್ದಾರೆ.

    ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿ ದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ದಿನಾಂಕ ಅಕ್ಟೋಬರ್ 17, 2024 ಗುರುವಾರ ಮಹಾನ್ ಋಷಿ ಕವಿ ಮಹರ್ಷಿ ವಾಲ್ಮೀಕಿಯವರ ಜನ್ಮ ವಾರ್ಷಿಕೋತ್ಸವವನ್ನು ಗೌರವಿಸಲಾಗುತ್ತದೆ.

ವಾಲ್ಮೀಕಿ ಜಯಂತಿ ಇತಿಹಾಸ

 ವಾಲ್ಮೀಕಿಯ ಜನನದ ನಿಖರವಾದ ದಿನಾಂಕ ಮತ್ತು ಸಮಯ ತಿಳಿದಿಲ್ಲ. 500 B.C.E ನಿಂದ 100 B.C.E ವರೆಗಿನ ಅವಧಿಯಲ್ಲಿ ಅವರು ರಾಮಾಯಣ ಬರೆದರು. ಅವರ ಮೂಲ ಕಥೆಯ ಹಿಂದೆ ಅನೇಕ ಜನಪ್ರಿಯ
ದಂತಕಥೆಗಳಿವೆ.

 ದಂತಕಥೆಯ ಪ್ರಕಾರ ಅವರು ಒಮ್ಮೆ ಮಹಾನ್ ಋಷಿ ನಾರದರನ್ನು ಭೇಟಿಯಾದರು. ಅವರ ಕರ್ತವ್ಯಗಳ ಬಗ್ಗೆ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರ. ನಾರದನ ಮಾತಿನಿಂದ ಪ್ರೇರಿತನಾದ ರತ್ನಾಕರ ತಪಸ್ಸು ಮಾಡಲು ಪ್ರಾರಂಭಿಸಿದನು. ಆಗ ರತ್ನಾಕರ 'ಮರಾ' ಅಂದರೆ 'ಸಾವು' ಎಂಬ ಪದವನ್ನು ಜಪಿಸಿದನು. ಅವರು ಹಲವಾರು ವರ್ಷಗಳ ಕಾಲ ತಪಸ್ಸು ಮಾಡಿದ ಕಾರಣ, ಪದವು 'ರಾಮ' ಎಂದು ಮಾರ್ಪಟ್ಟಿತು, ಇದು ವಿಷ್ಣು ದೇವರ ಹೆಸರು. ಸುದೀರ್ಘ ತಪ್ಪಸ್ಸಿನಿಂದಾಗಿ ರತ್ನಾಕರನ ಸುತ್ತ ಇರುವೆಗಳ ಹುತ್ತ ರೂಪುಗೊಂಡಿತು. ಅದನ್ನು ಭೇದಿಸಿಕೊಂಡು ಹೊರಬಂದಿದ್ದರಿಂದ ಅವರಿಗೆ ವಾಲ್ಮೀಕಿ ಎಂಬ ಬಿರುದು ಬಂದಿದೆ. ದೈವಿಕ ಶಕ್ತಿಯಿಂದ ಅವನ ತಪಸ್ಸು ಯಶಸ್ವಿಯಾಯಿತು. ನಂತರ ಅವರು ಪ್ರಮುಖ ಕವಿಯಾದರು.

 ಸಂಸ್ಕೃತ ಸಾಹಿತ್ಯದ ಮೊದಲ ಕವಿ ಎಂಬ ಕಾರಣಕ್ಕಾಗಿ ಅವರನ್ನು ನಂತರ ಆದಿ ಕವಿ ಎಂದು ಗೌರವಿಸಲಾಯಿತು.