ವಿಶ್ವದಿಂದ ಪೋಲಿಯೋವನ್ನು ಹೋಗಲಾಡಿಸಲು ಶ್ರಮಿಸಿದ ಹಾಗೂ ಪೋಲಿಯೋ ಲಸಿಕೆ ಕಂಡು ಹಿಡಿದ ಜೋನಸ್ ಸಾಲ್ಕ್ ಅವರ ಸವಿನೆನಪಿಗಾಗಿ ಪ್ರತಿ ವರ್ಷ ವಿಶ್ವದಾದ್ಯಂತ ಅಕ್ಟೋಬರ್ 24 ರಂದು "ವಿಶ್ವ ಪೋಲಿಯೋ ಲಸಿಕೆ"ದಿನವನ್ನಾಗಿ ಆಚರಿಸಲಾಗುತ್ತಿದೆ.
ಈ ದಿನವು ಪೋಲಿಯೋ ಮುಕ್ತ, ಭವಿಷ್ಯದ ಕಡೆಗೆ ಜಾಗತಿಕ ಪ್ರಯತ್ನಗಳನ್ನು ಸ್ಮರಿಸಲಾಗುತ್ತದೆ.ಹಾಗೆಯೇ ಪ್ರಪಂಚದ ಮೂಲೆ ಮೂಲೆಯಿಂದ ಪೋಲಿಯೊವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹೋರಾಟದ ಮುಂಚೂಣಿಯಲ್ಲಿ ಕಾರ್ಯ ಮಾಡುವವರ ನಿಸ್ವಾರ್ಥ ತ್ಯಾಗವನ್ನು ಇಂದು ನೆನಪಿಸಿ ಕೊಂಡಾಡಲಾಗುತ್ತದೆ.
ಪಲ್ಸ್ ಪೋಲಿಯೋ ಎನ್ನುವುದು ಭಾರತದಲ್ಲಿ ಪೋಲಿಯೊಮೈಲಿಟಿಸ್ ಅನ್ನು ತೊಡೆದುಹಾಕಲು ಭಾರತ ಸರ್ಕಾರವು ಸ್ಥಾಪಿಸಿದ ರೋಗನಿರೋಧಕ ಅಭಿಯಾನವಾಗಿದೆ.ಭಾರತವನ್ನು ಪೋಲಿಯೊ ಮುಕ್ತವನ್ನಾಗಿಸಲು 1994 ರಲ್ಲಿ ಪ್ರಾರಂಭವಾದ ಈ ಪಲ್ಸ್ ಪೋಲಿಯೊ ಯೋಜನೆಯಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ.ಪೋಲಿಯೋ ಲಸಿಕೆ ಹಾಕುವ ಅಭಿಯಾನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪೋಲಿಯೋದಿಂದ ಉಂಟಾಗುವ ಅಂಗವಿಕಲತೆಯೊಂದಿಗೆ ಭೀಕರ ಪರಿಣಾಮಗಳನ್ನು ಬೀರಬಹುದಾದ ಈ ಮಾರಕ ರೋಗವನ್ನು ತಡೆಗಟ್ಟಲು ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ಹಾಕಿಸಬೇಕಾಗಿದೆ ಹಾಗೂ ನಮ್ಮ ಜವಾಬ್ದಾರಿ ಕೂಡ ಹೌದು.
_#ಹಿನ್ನಲೆ :_
ವಿಶ್ವ ಆರೋಗ್ಯ ಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ನಂತರ 1988 ರಲ್ಲಿ ಪೋಲಿಯೊ ನಿರ್ಮೂಲನೆಯ ಜಾಗತಿಕ ಉಪಕ್ರಮದೊಂದಿಗೆ ಪಲ್ಸ್ ಪೋಲಿಯೊವನ್ನು ಪ್ರಾರಂಭಿಸಲಾಯಿತು.