ಆತ್ಮೀಯ ಮುಖ್ಯ ಶಿಕ್ಷಕರೇ, ಶಿಕ್ಷಕರೇ ಮತ್ತು ಪೋಷಕರೇ:
2024 25ನೇ ಶೈಕ್ಷಣಿಕ ವರ್ಷಕ್ಕಾಗಿ ಕರ್ನಾಟಕ ಸರ್ಕಾರದ ವತಿಯಿಂದ ಅಲ್ಪಸಂಖ್ಯಾತ ಸಮುದಾಯದ 1-8ನೇ ತರಗತಿ ಮಕ್ಕಳಿಗಾಗಿ ನೀಡಲಾಗುವ ಎಸ್ ಎಸ್ ಪಿ ವಿದ್ಯಾರ್ಥಿ ವೇತನದ ಆನ್ಲೈನ್ ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದ್ದು ಅಕ್ಟೋಬರ್ 31 ಕೊನೆಯ ದಿನಾಂಕವಾಗಿರುತ್ತದೆ.
ಇದರ ಕುರಿತಾದ ಕೆಲವು ಮಾಹಿತಿಗಳು ಈ ಕೆಳಕಂಡಂತಿವೆ:
ಅರ್ಜಿ ಸಲ್ಲಿಕೆಯ ಪ್ರಕ್ರಿಯೆ
ಕಳೆದ ವರ್ಷ ಅರ್ಜಿ ಸಲ್ಲಿಸಿದರೂ ಕಾರಣಾಂತರಗಳಿಂದ ವಿದ್ಯಾರ್ಥಿ ವೇತನ ಬಾರದೇ ಇರುವಂತಹ ವಿದ್ಯಾರ್ಥಿಗಳು ಈ ಕೆಳಕಂಡ ಲಿಂಕ್ ಅನ್ನು ಒತ್ತುವ ಮೂಲಕ ತಮ್ಮ ಹಳೆ ಐಡಿ ಮತ್ತು ಪಾಸ್ವರ್ಡ್ ಬಳಸಿಕೊಂಡು ವಿದ್ಯಾರ್ಥಿವೇತನದ ಅರ್ಜಿ ಸಲ್ಲಿಸಬಹುದಾಗಿದೆ.👇
(Long press on links - then click open)
https://ssp.postmatric.karnataka.gov.in/ssppre/signin.aspx
ಒಂದನೇ ತರಗತಿಗೆ ಹೊಸದಾಗಿ ಶಾಲೆಗೆ ಸೇರುವಿರುವಂತಹ ಮಕ್ಕಳಿಗಾಗಿ ಎಸ್ಎಸ್ಪಿ ಪೋರ್ಟಲ್ ನಲ್ಲಿ ಮೊದಲು ನೊಂದಾಯಿಸಿಕೊಳ್ಳಬೇಕಾಗಿರುತ್ತದೆ. ಅದಕ್ಕಾಗಿ ಈ ಲಿಂಕನ್ನು ಒತ್ತಿ ನೊಂದಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುಕೊಳ್ಳಬಹುದು.👇
https://ssp.postmatric.karnataka.gov.in/CA/
ನೋಂದಣಿ ಮಾಡಿಕೊಂಡ ನಂತರ ಈ ಲಿಂಕನ್ನು ಬಳಸಿ ಹೊಸ ಅರ್ಜಿಗಳನ್ನು ಸಲ್ಲಿಸಬಹುದು.👇
https://ssp.postmatric.karnataka.gov.in/ssppre/signin.aspx
ರಿನಿವಲ್ ವಿದ್ಯಾರ್ಥಿಗಳು
ಕಳೆದ ವರ್ಷ ಅರ್ಜಿಯನ್ನು ಸಲ್ಲಿಸಿ ಈಗಾಗಲೇ ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಪಡೆದಿರುವಂತಹ ಎಲ್ಲಾ ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಹೊಸ ಅರ್ಜಿಗಳನ್ನು ಅಥವಾ ಅರ್ಜಿಗಳನ್ನು ನವೀಕರಿಸುವಂತಹ ಅವಶ್ಯಕತೆ ಇರುವುದಿಲ್ಲ. ಇವರ ಅರ್ಜಿಗಳನ್ನು ಇಲಾಖೆಯು ಸ್ವತಹ ನವೀಕರಿಸಿ ಅವರಿಗೆ ಈ ವರ್ಷದ ವಿದ್ಯಾರ್ಥಿ ವೇತನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಿದೆ. ಹಾಗಾಗಿ ಅನಗತ್ಯವಾಗಿ ತಮ್ಮ ಅರ್ಜಿಗಳನ್ನು ರಿನಿವಲ್ ಮಾಡಿಸಲು ಸೈಬರ್ ಇತ್ಯಾದಿ ಕಡೆಗಳಲ್ಲಿ ಅಲೆದಾಡುವಂತಹ ಅವಶ್ಯಕತೆ ಇರುವುದಿಲ್ಲ.
ಬ್ಯಾಂಕ್ ಖಾತೆ ತೆರೆಯುವುದು
ಒಂದನೇ ತರಗತಿಗೆ ಸೇರಿರುವ ಮಕ್ಕಳು ಮತ್ತು ಈವರೆಗೂ ತಮ್ಮ ಬ್ಯಾಂಕ್ ಖಾತೆಗಳನ್ನು ಹೊಂದಿರದೆ ಇರುವಂತಹ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿರುವುದು ಅವಶ್ಯಕವಾಗಿದೆ. ವಿದ್ಯಾರ್ಥಿ ವೇತನ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಆಗುವುದರಿಂದ ಪ್ರತಿ ವಿದ್ಯಾರ್ಥಿಯು ತನ್ನ ಹೆಸರಿನಲ್ಲಿ ಅಥವಾ ತಮ್ಮ ಪೋಷಕರೊಂದಿಗೆ ಜಂಟಿ ಬ್ಯಾಂಕ್ ಖಾತೆಯನ್ನು ಹೊಂದಲೇ ಬೇಕಾಗಿರುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಹತ್ತಿರದ ಯಾವುದೇ ಎಸ್ ಬಿ ಐ ಬ್ಯಾಂಕ್ ಶಾಖೆಗೆ ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳಿಗೆ ಅಥವಾ ಪೋಸ್ಟ್ ಆಫೀಸ್ ಗಳಿಗೆ ಭೇಟಿ ನೀಡಿ ಬ್ಯಾಂಕ್ ಖಾತೆಯನ್ನು ತೆರೆಯಬಹುದಾಗಿದೆ.
ಕಳೆದ ವರ್ಷ ವಿದ್ಯಾರ್ಥಿ ವೇತನ ಮಂಜೂರು ಆಗಿರುವ ಬಗ್ಗೆ ವೀಕ್ಷಿಸುವ ವಿಧಾನ
ವಿದ್ಯಾರ್ಥಿಗಳು ಅಥವಾ ಪೋಷಕರು ಅಥವಾ ಶಿಕ್ಷಕರು ಈ ಕೆಳಗೆ ನೀಡಿರುವ ಲಿಂಕನ್ನು ಒತ್ತಿ ಮಗುವಿನ ಎಸ್ ಏ ಟಿ ಎಸ್ ಸಂಖ್ಯೆ ಮತ್ತು ಶೈಕ್ಷಣಿಕ ವರ್ಷವನ್ನು ಆಯ್ಕೆ ಮಾಡಿಕೊಂಡು ಮಗುವಿಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ವೇತನ ಮಂಜೂರು ಆಗಿದೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ.👇
https://ssp.karnataka.gov.in/studentstatusreportforstudent.aspx