ಓದುವ ಅಭಿಯಾನ : 10/09/2024 ದಿನದ ವಿಷಯ ಮತ್ತು ಕಥೆ.

 


 ವಿಷಯ:   ಮನೆಯಲ್ಲಿ ಓದುವ ಮೂಲೆಯನ್ನು ಮಾಡುವುದು.


    ಮಕ್ಕಳು ತಮ್ಮ ಮನೆಯಲ್ಲಿ ಲಭ್ಯವಿರುವ ಪುಸ್ತಕಗಳೊಂದಿಗೆ ಓದುವ ಮೂಲೆಯನ್ನು ಮಾಡುವುದು. ಅವರು ಚಾರ್ಟ್ ಗಳು ಮತ್ತು ಚಿತ್ರಗಳನ್ನು ತಯಾರಿಸುವ ಮತ್ತು ಅಂಟಿಸುವ ಮೂಲಕ ಮುದ್ರಣ ಸಮೃದ ಪರಿಸರವನ್ನು ಮಾಡುವುದು.



ಕಥೆ : ಚಳಿಗಾಲದ ಸ್ನೇಹ




     ಧೂಳಿನ ಮೋಡದ ನಡುವೆ, ಟಣ್-ಟಣ್ ಮತ್ತು ಖಣ್-ಖಣ್ ಸದ್ದಿನೊಂದಿಗೆ ಬಣ್ಣಬಣ್ಣದ ಗುಂಪೊಂದು ಬರುತ್ತಿದೆ. ಏನನ್ನೋ ನೋಡಿದ ಬಿಬ್ರು ಕಣ್ಣಲ್ಲಿ ಹೊಳಪು. ಅದು ಏನೆಂದು ನೋಡೋಣ ಬನ್ನಿ.

    ಚಟುವಟಿಕೆ

ಗಟ್ಟಿಯಾಗಿ ಓದುವುದು

    ಶಿಕ್ಷಕರು ಈ ಕಥೆಯನ್ನು ತಮ್ಮ ತರಗತಿ ಮಕ್ಕಳಿಗೆ ಗಟ್ಟಿಯಾಗಿ ಓದುತ್ತಾರೆ. ಆ ನಂತರ, ಕಥೆಯ ಕಥಾವಸ್ತು, ಪಾತ್ರಗಳು, ಮತ್ತು ವಿಷಯಗಳನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಾರೆ. ಈ ಕೆಳಗಿನ ಪ್ರಶ್ನೆಗಳನ್ನು

ಚರ್ಚಿಸಬಹುದು:

1. ಗಡೋಲಿಯಾ ಕಮ್ಮಾರರ ಗುಂಪು ಯಾವ ಕಡೆ ಬರುತ್ತಿತ್ತು?

2. ಜಬ್ರುವಿನ ಹತ್ತಿರ ಚಕ್ಕಿ ಬರದಿದ್ದರೆ ಅವರ ಗೆಳೆತನ ಹೇಗಿರುತ್ತಿತ್ತು?

3. ನಿಮ್ಮ ಊರಿಗೆ ಇಂತಹ ಯಾವುದಾದರೂ ಗುಂಪುಗಳು ಬಂದು ಹೋಗಿವೆಯಾ? ಅವರೊಟ್ಟಿಗಿನ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ.

    ಓದಿನ ನಂತರದ ಚಟುವಟಿಕೆಗಳು ಇಷ್ಟವಾದುದು ಮತ್ತು ಇಷ್ಟವಾಗದಿರುವುದು

    ಗಟ್ಟಿಯಾಗಿ ಓದು ಅವಧಿ ನಂತರ, ಶಿಕ್ಷಕರು ವಿದ್ಯಾರ್ಥಿಗಳಿಗೆ ಕಥೆಯ ಬಗ್ಗೆ ಇಷ್ಟಪಟ್ಟ ಮತ್ತು ಇಷ್ಟಪಡದ ವಿಷಯಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸುತ್ತಾರೆ. ಇದು ಸರಿಯಾದ ಅಥವಾ ತಪ್ಪು ಉತ್ತರಗಳ ಚರ್ಚೆಯಲ್ಲ, ಬದಲಾಗಿ, ಅವರ ಪ್ರಾಮಾಣಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರೇರೇಪಿಸುವುದಾಗಿದೆ.

     ವಿದ್ಯಾರ್ಥಿಗಳು ಕಥೆಯ ಬಗ್ಗೆ ಯೋಚಿಸಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವರು ಇಷ್ಟಪಟ್ಟ ಮತ್ತು ಇಷ್ಟಪಡದ ಒಂದು ವಿಷಯವನ್ನು ಬರೆಯುತ್ತಾರೆ.