ವ್ಯಥೆಗಳ ಕಳೆಯುವ ಕಥೆಗಾರ ನಿನ್ನ ಕಲೆಗೆ ಯಾವುದು ಭಾರ - ಸಾಹಿತ್ಯ:-ಪು.ತಿ.ನರಸಿಂಹಾ ಚಾರ್

ಸಾಹಿತ್ಯ:-ಪು.ತಿ.ನರಸಿಂಹಾ ಚಾರ್

ಸಂಗೀತ/ಗಾಯನ:-ಸಿ. ಅಶ್ವಥ್


ವ್ಯಥೆಗಳ ಕಳೆಯುವ ಕಥೆಗಾರ

ನಿನ್ನ ಕಲೆಗೆ ಯಾವುದು ಭಾರ

ಯಾವುದು ವಿಸ್ತರ

ಯಾವುದು ದುಸ್ತರ

ನಿನಗೆಲೆ ಹರ್ಷದ ಹರಿಕಾರ ||


ಕಪಿ ಹಾರಿತು ಹೆಗ್ಗಡಲನು ಎಂಬೆ

ಕಡಲನೆ ಕಡೆದರು ಬಟ್ಟದೊಳೆಂಬೆ 

ನಿನ್ನೂಹೆಯಾ ಹೇರಾಳವ ತುಂಬೇ

ಸೃಷ್ಟೀಕರ್ತನಿಗೂ ಅರಿದೆಂಬೇ ||


ಓಲುಮೆ ಬೇಹಿಗಾ ಮೇಘ ಮರಾಳ

ಮುನೀಯಾ ತೋಹಿಗ

ಮರಾಂಗನೇ ಮೇಳಾ

ಸುರರೆಡೆಯೊಳೆ ಕಲಿ ಪುರುಷಕರಾಳ

ಅರಿವರಾರು ನಿನ್ನೈಂದ್ರ ಜಾಲ ||


ಮಾತೋಳೆ ವಿಶ್ವವ ತೋಲಿಸುವ

ಬಗೆಯೊಳಿವಿಲ್ಲವ ಜಾಲಿಸುವ

ಮುದದೊಳಗೆಲ್ಲರ ಗೀಲಿಸುವ

ನಿನ್ನನದಾರಿಗೇ ಹೋಲಿಸುವ ||