ಓದುವ ಅಭಿಯಾನ ದಿನಾಂಕ : 09/09/2024

 ಎರಡನೇ ವಾರ : ನನ್ನ ಸಮುದಾಯ


ವಿಷಯ : ಅಜ್ಜಿ-ತಾತನಿಗೋಸ್ಕರ ಓದುವುದು.




    ಮಕ್ಕಳು ತಮ್ಮ ನೆಚ್ಚಿನ ಕಥೆ ಪುಸ್ತಕವನ್ನು ತಮ್ಮ ಅಜ್ಜ ಅಜ್ಜಿ / ಪೋಷಕರು / ಸಮುದಾಯದ ಸದಸ್ಯರಿಗೆ ಓದಿ ಮತ್ತು ವೀಡಿಯೊವನ್ನು ರೆಕಾರ್ಡ್ ಮಾಡಿ ಶಿಕ್ಷಕರ ವಾಟ್ಸಾಪ್ ಗುಂಪಿಗೆ ಕಳುಹಿಸುವುದು.


ಕಥೆ : ಕಪ್ಪೆಯ ನಕ್ಷತ್ರಭರಿತ ಕನಸು



    ಕಪ್ಪೆಗೆ ನಕ್ಷತ್ರಗಳನ್ನು ನೋಡುವುದೆಂದರೆ ಬಹಳ ಇಷ್ಟ. ಒಂದು ರಾತ್ರಿ ಅದು ನಕ್ಷತ್ರಗಳನ್ನು ಮುಟ್ಟಲು ನಿರ್ಧರಿಸುತ್ತೆ. ಆಗ ಅದು ಒಂದು ದೊಡ್ಡ ಬಂಡೆ ಏರುತ್ತೆ, ನಂತರ ಎತ್ತರದ ತೆಂಗಿನ ಮರ, ಒಂದು ಬೆಟ್ಟವನ್ನೇ ಏರುತ್ತೆ! ಆದರೆ ಕಪ್ಪೆಗೆ ಅವು ಎಟುಕದ ನಕ್ಷತ್ರಗಳು. ಹಾಗಾದರೆ ನಕ್ಷತ್ರಗಳ ಬಳಿಗೆ ಹೋಗಲು ಕಪ್ಪೆ ಏನಾದರೂ ದಾರಿ ಕಂಡುಕೊಳ್ಳುವುದೇ?


ನಂತರದ ಚಟುವಟಿಕೆಗಳ..


ಗಟ್ಟಿಯಾಗಿ ಓದುವುದು


  ಶಿಕ್ಷಕರು ಈ ಕಥೆಯನ್ನು ತಮ್ಮ ತರಗತಿ ಮಕ್ಕಳಿಗೆ ಗಟ್ಟಿಯಾಗಿ ಓದುತ್ತಾರೆ. ಕಥೆಯ ಕಥಾವಸ್ತು, ಪಾತ್ರಗಳು, ಮತ್ತು ವಿಷಯಗಳನ್ನು ಚರ್ಚಿಸುತ್ತಾರೆ. ಈ ಕೆಳಗಿನ ಪ್ರಶ್ನೆಗಳನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಬಹುದು:


1. ಕಪ್ಪೆಗೆ ಏನೆಂದರೇ ಇಷ್ಟ?


2. ನಕ್ಷತ್ರಗಳನ್ನು ಮುಟ್ಟಲು ಸಾದ್ಯವೇ? ಮುಟ್ಟಲೇ ಬೇಕೆಂದರೆ ಏನೆಲ್ಲ ಪ್ರಯತ್ನ ಮಾಡಬಹುದು?


3. ಒಂದು ವೇಳೆ ನೀವು ಕಪ್ಪೆಯಾಗಿದರೆ, ಏನು ಮಾಡುತಿದ್ದಿರಿ?


ಓದಿನ ನಂತರದ ಚಟುವಟಿಕೆಗಳು - ಕಥೆಯ ದೃಷ್ಟಿಕೋನವನ್ನು ಬದಲಾಯಿಸುವುದು


   ಗಟ್ಟಿಯಾಗಿ ಓದುವ ಅವಧಿ ನಂತರ, ಶಿಕ್ಷಕರು ವಿದ್ಯಾರ್ಥಿಗಳಿಗೆ ಕಥೆಯಲ್ಲಿನ ಒಂದು ದೃಶ್ಯವನ್ನು ಆಯ್ಕೆ ಮಾಡಿ, ಅದನ್ನು ಬೇರೆ ಪಾತ್ರದ ದೃಷ್ಟಿಕೋನದಿಂದ ಮತ್ತೆ ಬರೆಯಲು ಸೂಚಿಸುತ್ತಾರೆ. ಅವರು ದೃಷ್ಟಿಕೋನದ ಜೊತೆಗೆ ಕಥೆಯ ಧ್ವನಿ, ಗಮನ, ಮತ್ತು ವಿವರಗಳನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಚರ್ಚಿಸುತ್ತಾರೆ.


    ವಿದ್ಯಾರ್ಥಿಗಳು ಆಯ್ಕೆ ಮಾಡಿದ ದೃಶ್ಯವನ್ನು ವಿಭಿನ್ನ ಪಾತ್ರದ ದೃಷ್ಟಿಕೋನದಿಂದ ಮತ್ತೆ ಬರೆಯುತ್ತಾರೆ. ಈ ಪ್ರಕ್ರಿಯೆಯಲ್ಲಿ, ಅವರು ಪಾತ್ರದ ಆಲೋಚನೆಗಳು, ಭಾವನೆಗಳು, ಮತ್ತು ಅವಲೋಕನಗಳು ನಿರೂಪಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಗಣಿಸುತ್ತಾರೆ.


  ಈ ದೃಷ್ಟಿಕೋನದಿಂದ ಯಾವ ಹೊಸ ವಿಷಯಗಳು ಅಥವಾ ಒಳನೋಟಗಳು ಹೊರಹೊಮ್ಮುತ್ತವೆ ಎಂಬುದರ ಬಗ್ಗೆ ಯೋಚಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ.