ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ - ಪ್ರೌಢಶಾಲಾ ವಿದ್ಯಾರ್ಥಿಗಳಿಗೆ

 



       ಜವಾಹರಲಾಲ್‌ ನೆಹರು ತಾರಾಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. 


- ಸ್ಪರ್ಧೆಯಲ್ಲಿ ಬ್ಲಾಕ್‌ ಹಂತ, ಜಿಲ್ಲಾ ಮಟ್ಟ, ವಿಭಾಗೀಯ ಮಟ್ಟ, ರಾಜ್ಯ ಮಟ್ಟ ಮತ್ತು ಅಂತಿಮ ಹಂತ ಎಂಬ 5 ಹಂತಗಳು ಇರಲಿವೆ. 


- ಪ್ರಥಮ ಬಹುಮಾನ ಪಡೆದ ತಂಡಕ್ಕೆ 40 ಸಾವಿರ ರೂ., ಹಾಗೂ ಪ್ರಶಂಸಾ ಪತ್ರ ವಿತರಿಸಲಾಗುತ್ತದೆ.


- ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 30 ಸಾವಿರ ರೂ. ಮತ್ತು ತೃತೀಯ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ರೂ. ಬಹುಮಾನವಿದೆ. 


     ಪ್ರತಿ ಪ್ರೌಢಶಾಲೆಗಳಿಂದ ಇಬ್ಬರು ವಿದ್ಯಾರ್ಥಿಗಳುಳ್ಳ ಒಂದು ತಂಡಕ್ಕೆ ಇದರಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಒಂದು ತಂಡದಲ್ಲಿ ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿ ಇರತಕ್ಕದ್ದು. ಬಾಲಕಿಯರ ಶಾಲೆಯಾಗಿದ್ದಲ್ಲಿ ಇಬ್ಬರು ಬಾಲಕಿಯರು ಮತ್ತು ಬಾಲಕರ ಶಾಲೆಯಾಗಿದ್ದಲ್ಲಿ ಇಬ್ಬರು ಬಾಲಕರು ಭಾಗವಹಿಸಲು ಅವಕಾಶವಿರುತ್ತದೆ. 

      8,9 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. 


ಸ್ಪರ್ಧಿಗಳಿಗೆ ನಿಬಂಧನೆಗಳು: 


- ಆಯ್ಕೆಯಾದ ಸ್ಪರ್ಧಿಗಳು ತಾವು ಓದುತ್ತಿರುವ ಶಾಲೆ ಹಾಗೂ ತರಗತಿಯ ಬಗ್ಗೆ ಪುರಾವೆ ನೀಡಬೇಕು.


- ಯಾವುದೇ ಸ್ಪರ್ಧಿಯ ವರ್ತನೆ / ಭಾಗವಹಿಸುವಿಕೆ ನಿಯಮ ಬಾಹಿರವೆಂದು ಕಂಡುಬಂದಲ್ಲಿ ಸ್ಪರ್ಧಿಯನ್ನು ಅನರ್ಹಗೊಳಿಸಲಾಗುವುದು.


- ಅರ್ಹತೆ, ಸ್ಪರ್ಧಿಯ ದೃಢೀಕರಣ ಮತ್ತು ಇತರ ನಿರ್ಧಾರಗಳ ಹಕ್ಕನ್ನು ಜವಾಹರಲಾಲ್‌ ನೆಹರು ತಾರಾಲಯ, ಬೆಂಗಳೂರು ಹೊಂದಿರುತ್ತದೆ. 


- ಸೂಕ್ತ ಸಂದರ್ಭಗಳಲ್ಲಿ ಎಲ್ಲಾ ಹಂತಗಳಲ್ಲೂ ಪರೀಕ್ಷೆಯಲ್ಲಿ ಬದಲಾವಣೆ ಮಾಡುವ ಹಕ್ಕು ಜವಾಹರಲಾಲ್ ನೆಹರು ತಾರಾಲಯ ಹೊಂದಿರುತ್ತದೆ. 


- ಯಾವುದೇ ಸಂದರ್ಭದಲ್ಲಿ ಸ್ಪರ್ಧೆಯ ಆಯೋಜಕರಾದ ಜವಾಹರಲಾಲ್ ನೆಹರು ತಾರಾಲಯದ ತೀರ್ಪು ಅಂತಿಮವಾಗಿರುತ್ತದೆ.



ಹೆಚ್ಚಿನ ಮಾಹಿತಿಗಾಗಿ...




ಸ್ಕ್ಯಾನ್ ಮಾಡಿರಿ...