ಬೆಂಗಳೂರು: ರಾಜ್ಯದಲ್ಲಿರುವಂತ ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವಂತೆ ಮಕ್ಕಳ ಪೋಷಕರು ಆಗ್ರಹಿಸಿದ್ದರು. ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳ ಪಟ್ಟಿ ಪ್ರಕಟ: ಪೋಷಕರೇ ಈ ರೀತಿ ಪಟ್ಟಿ ಪರಿಶೀಲಿಸಿ
ಬೆಂಗಳೂರು: ರಾಜ್ಯದಲ್ಲಿರುವಂತ ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವಂತೆ ಮಕ್ಕಳ ಪೋಷಕರು ಆಗ್ರಹಿಸಿದ್ದರು. ಪೋಷಕರ ಒತ್ತಡಕ್ಕೆ ಮಣಿದಿರುವಂತ ಶಾಲಾ ಶಿಕ್ಷಣ ಇಲಾಖೆಯು, ಕೊನೆಗೆ ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳ ಪಟ್ಟಿಯನ್ನು ಪ್ರಕಟಿಸಿದೆ. ಹಾಗಾದ್ರೇ ಪಟ್ಟಿ ಹೇಗೆ ಪರಿಶೀಲಿಸಬೇಕು ಅಂತ ಮುಂದೆ ಓದಿ.
ರಾಜ್ಯದಲ್ಲಿ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆಯದೇ, ಕೆಲ ಖಾಸಗಿ ಶಾಲೆಗಳು ಮಕ್ಕಳನ್ನು ಶಾಲೆಗಳಿಗೆ ದಾಖಲಾಗಿ ಮಾಡಿಕೊಳ್ಳುತ್ತಿದ್ದಾವೆ. ಈ ಮೂಲಕ ಶಾಲಾ ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟ ಆಡ್ತಿದ್ದಾವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಆಗ್ರಹಿಸಿದ್ದರು. ಅಲ್ಲದೇ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳ ಪಟ್ಟಿ ಪ್ರಕಟಿಸುವಂತೆಯೂ ಆಗ್ರಹಿಸಿದ್ದರು.
ಈ ಬೆನ್ನಲ್ಲೇ ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ, ಖಾಸಗಿ ಶಾಲೆ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದಿದ್ಯೋ ಇಲ್ಲವೋ ಅಂತ ಪರಿಶೀಲಿಸುವಂತೆ ಸೂಚಿಸಿದೆ.
ಖಾಸಗಿ ಅನುದಾನ ರಹಿತ ಶಾಲೆಗಳ ಪಟ್ಟಿ ವೀಕ್ಷಿಸುವುದು ಹೇಗೆ.?
ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳ ಪಟ್ಟಿ ಪ್ರಕಟಗೊಂಡಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಪಟ್ಟಿ ಪರಿಶೀಲಿಸಲು ಶಿಕ್ಷಣ ಇಲಾಖೆ
https://schooleducation.karnataka.gov.in
ವೆಬ್‌ಸೈಟ್‌ಗೆ ಭೇಟಿ ನೀಡಿ. ಜಿಲ್ಲಾವಾರು ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ಬ್ಲಾಕ್ ವಹಿ ಶಾಲೆಗಳ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ.
ಇದಲ್ಲದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ‘ಖಾಸಗಿ ಅನುದಾನರಹಿತ ಅಧಿಕೃತ ಶಾಲೆಗಳ ಪಟ್ಟಿ’ ಮೇಲೆ ಕ್ಲಿಕ್ ಮಾಡಿ. ಜಿಲ್ಲೆ ಹಾಗೂ ಬ್ಲಾಕ್ ಆಯ್ಕೆ ಮಾಡಿ. ವ್ಯೂ ಕ್ಲಿಕ್ ಮಾಡಿದರೆ ಪಿಡಿಎಫ್ ಫೈಲ್ ಡೌನ್‌ಲೋಡ್ ಆಗಲಿದೆ.
ಒತ್ತಡಕ್ಕೆ ಮಣಿದಿರುವಂತ ಶಾಲಾ ಶಿಕ್ಷಣ ಇಲಾಖೆಯು, ಕೊನೆಗೆ ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳ ಪಟ್ಟಿಯನ್ನು ಪ್ರಕಟಿಸಿದೆ. ಹಾಗಾದ್ರೇ ಪಟ್ಟಿ ಹೇಗೆ ಪರಿಶೀಲಿಸಬೇಕು ಅಂತ ಮುಂದೆ ಓದಿ.
ರಾಜ್ಯದಲ್ಲಿ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆಯದೇ, ಕೆಲ ಖಾಸಗಿ ಶಾಲೆಗಳು ಮಕ್ಕಳನ್ನು ಶಾಲೆಗಳಿಗೆ ದಾಖಲಾಗಿ ಮಾಡಿಕೊಳ್ಳುತ್ತಿದ್ದಾವೆ. ಈ ಮೂಲಕ ಶಾಲಾ ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟ ಆಡ್ತಿದ್ದಾವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಆಗ್ರಹಿಸಿದ್ದರು. ಅಲ್ಲದೇ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳ ಪಟ್ಟಿ ಪ್ರಕಟಿಸುವಂತೆಯೂ ಆಗ್ರಹಿಸಿದ್ದರು.
ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳ ಪಟ್ಟಿ ಪ್ರಕಟಗೊಂಡಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಪಟ್ಟಿ ಪರಿಶೀಲಿಸಲು ಶಿಕ್ಷಣ ಇಲಾಖೆ schooleducation.karnataka.gov.inವೆಬ್‌ಸೈಟ್‌ಗೆ ಭೇಟಿ ನೀಡಿ. ಜಿಲ್ಲಾವಾರು ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ಬ್ಲಾಕ್ ವಹಿ ಶಾಲೆಗಳ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ.
ಇದಲ್ಲದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ‘ಖಾಸಗಿ ಅನುದಾನರಹಿತ ಅಧಿಕೃತ ಶಾಲೆಗಳ ಪಟ್ಟಿ’ ಮೇಲೆ ಕ್ಲಿಕ್ ಮಾಡಿ. ಜಿಲ್ಲೆ ಹಾಗೂ ಬ್ಲಾಕ್ ಆಯ್ಕೆ ಮಾಡಿ. ವ್ಯೂ ಕ್ಲಿಕ್ ಮಾಡಿದರೆ ಪಿಡಿಎಫ್ ಫೈಲ್ ಡೌನ್‌ಲೋಡ್ ಆಗಲಿದೆ.