2024 ರ ಲೋಕಸಭಾ ಚುನಾವಣೆಗೆ ಮುನ್ನ ಮತದಾನದ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಲು ಕೊನೆಯ ಅವಕಾಶ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವೇ?
ಮತದಾರರಾಗಿ ತಮ್ಮ ಹೆಸರನ್ನು ನೋಂದಾಯಿಸುವುದು ಈಗ ಅತೀ ಸುಲಭದ ಕೆಲಸ, ಈ ಕೂಡಲೇ
Voter Helpline App
ನ ಮೂಲಕ ತಮ್ಮ ಹೆಸರನ್ನು ಮನೆಯಲ್ಲೇ ಕುಳಿತು ನೋಂದಾಯಿಸಿಕೊಳ್ಳಲು ಅವಕಾಶವಿದೆ.
ಅರ್ಜಿ ಸಲ್ಲಿಸುವ ವಿಧಾನ👇🏻
ನಿಮ್ಮ ಮೊಬೈಲ್‌ನಲ್ಲಿ Play Store ಗೆ ಹೋಗಿ
Voter Helpline App ( 👈app link)
ಅನ್ನು Install ಮಾಡಿಕೊಳ್ಳಬೇಕು. Install ಮಾಡಿದ ನಂತರ App ನ್ನು Open ಮಾಡಿ.
1) New User Id ಯನ್ನು ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್, ಹೆಸರು, ಒಟಿಪಿ, ಪಾಸ್‌ವರ್ಡ್ ನ್ನು ಹಾಕಿ ನೊಂದಾಯಿಸಿ ಕೊಳ್ಳಬೇಕು.
2) ನೊಂದಾಯಿಸಿದ ನಂತರ ಮೊಬೈಲ್ ನಂಬರ್ ಹಾಗೂ ಪಾಸ್‌ವರ್ಡ್‌ನ್ನು ಹಾಕಿ Login ಮಾಡಿಕೊಳ್ಳಿ.
3) ನಂತರ ಮುಖ ಪುಟ ತೆರೆದುಕೊಳ್ಳುತ್ತದೆ ಅದರಲ್ಲಿ Voter Registration ಗೆ ಹೋಗಿ New Voter Registration (Form 06) ಕ್ಲಿಕ್ ಮಾಡಿ.
4) Yes, I Am Applying for First Time ಮೇಲೆ ಕ್ಲಿಕ್ ಮಾಡಿ.
5) ನಂತರ ನಿಮ್ಮ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ ಹಾಗೂ ಜನ್ಮದಿನಾಂಕವನ್ನು ನಮೂದಿಸಿ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ದಾಖಲೆಯನ್ನು Upload ಮಾಡಿ.(ದಾಖಲೆಗಳು ಯಾವುವು ಎಂದು ಮುಂದೆ ತಿಳಿಸಲಾಗಿದೆ 14.)
6) ನಂತರ Photo ವನ್ನು upload ಮಾಡಿ, ಹೆಸರು, ಆಧಾರ್ ನಂಬರ್, ಮೊಬೈಲ್ ನಂಬರನ್ನು ನಮೂದಿಸಿ ಹಾಗೂ Disability(ಅಂಗವಿಕಲತೆ) ಇದ್ದರೆ Tick ಮಾಡಿ,
7) ನಂತರ ತಂದೆ/ತಾಯಿ/ಗಂಡನ ಹೆಸರನ್ನು ನಮೂದಿಸಿ...
8) ನಂತರದಲ್ಲಿ ವಿಳಾಸವನ್ನು ನಮೂದಿಸಿ ವಿಳಾಸಕ್ಕೆ ಸಂಬಂಧಿಸಿದ ದಾಖಲೆಯನ್ನು Upload ಮಾಡಿ....(ಯಾವ ದಾಖಲೆಗಳು ಎಂದು ಮುಂದೆ ಕಾಣಬಹುದು 13.)
9) ನಂತರ Declaration ಕೊಡಬೇಕು ಹಾಗಾಗಿ ಮತ್ತೊಮ್ಮೆ ನಿಮ್ಮ ರಾಜ್ಯ, ಜಿಲ್ಲೆ, ಗ್ರಾಮ/ಪಟ್ಟಣ/ನಗರ, ಅರ್ಜಿ ಸಲ್ಲಿಸುವ ದಿನಾಂಕ ಹಾಗೂ ಸ್ಥಳವನ್ನು ಭರ್ತಿ ಮಾಡಿ.
10) ಕೊನೆಯಲ್ಲಿ ನೀವು ತುಂಬಿದ ಎಲ್ಲಾ ವಿವರಗಳು ಸರಿಯಾಗಿದೆಯೆ ಎಂಬುದನ್ನು Check ಮಾಡಿ Confirm ಕೊಡಿ.
12) Confirm ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರಿಗೆ Reference ನಂಬರ್ ಬರುತ್ತದೆ ಅದನ್ನು ತೆಗೆದಿಟ್ಟುಕೊಳ್ಳಿ, Voter I'd ಯ ಸ್ಥಿತಿಯನ್ನು ತಿಳಿಯಬಹುದಾಗಿದೆ.
13) ವಿಳಾಸಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಯಾವುದಾದರು ಒಂದು ದಾಖಲೆಯನ್ನು Upload ಮಾಡಬಹುದು.
1) ಆಧಾರ್ ಕಾರ್ಡ್.
2) ಪಾಸ್ ಪೋರ್ಟ್.
3) ಬ್ಯಾಂಕಿನ ಪಾಸ್ ಪುಸ್ತಕ
4) ನೀರಿನ/ ವಿದ್ಯುತ್/ ಗ್ಯಾಸ್ ಸಂಪರ್ಕ ರಶೀದಿ.
5) ರೇಷನ್ ಕಾರ್ಡ್.
14) ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದಾದರು ಒಂದು ದಾಖಲೆಯನ್ನು upload ಮಾಡಬಹುದು.
1) ಜನನ ಪ್ರಮಾಣ ಪತ್ರ.
2) ಆಧಾರ್ ಕಾರ್ಡ್.
3) ಪಾನ್ ಕಾರ್ಡ್.
4) ಡ್ರೈವಿಂಗ್ ಲೈಸೆನ್ಸ್.
5) ಎಸ್.ಎಸ್.ಎಲ್.ಸಿ / ಪಿಯುಸಿ ಅಂಕಪಟ್ಟಿ.
6) ಪಾಸ್ ಪೋರ್ಟ್.