ಒಂದೇ ಬಾರಿ ನನ್ನ ನೋಡಿ - ಭಾವಗೀತೆ - ದ.ರಾ.ಬೇಂದ್ರೆ.


ಸಾಹಿತ್ಯ – ದ.ರಾ. ಬೇಂದ್ರೆ

ಸಂಗೀತ – ಸಿ ಅಶ್ವಥ್

ಗಾಯನ – ಸಂಗೀತ ಕಟ್ಟಿ ಕುಲಕರ್ಣಿ..




ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ

ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ! ||


ಗಾಳಿ ಹೆಜ್ಜಿ ಹಿಡದ ಸುಗಂಧ ಅತ್ತ ಅತ್ತ ಹೋಗುವಂದ 

ಹೋತ ಮನಸು ಅವನ ಹಿಂದ ಹಿಂದ ನೋಡದ ಗೆಳತಿ ಹಿಂದ ನೋಡದ ||


ನಂದ ನನಗ ಎಚ್ಚರಿಲ್ಲ ಮಂದಿಗೊಡವಿ ಏನ ನನಗ 

ಒಂದೇ ಅಳತಿ ನಡೆದದ ಚಿತ್ತ ಹಿಂದ ನೋಡದ ಗೆಳತಿ ಹಿಂದ ನೋಡದ ||


ಸೂಜಿ ಹಿಂದ ದಾರದ್ಹಾಂಗ ಕೊಳ್ಳದೊಳಗ ಜಾರಿದ್ಹಾಂಗ     

ಹೋತ ಹಿಂದ ಬಾರದ್ಹಾಂಗ ಹಿಂದ ನೋಡದ ಗೆಳತಿ ಹಿಂದ ನೋಡದ ||


ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ

ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ! ||