ಬಾನಂಗಳ - solar system - ಸೌರವ್ಯೂಹ

     ನಾವು ಆಕಾಶದಲ್ಲಿ ರಾತ್ರಿಯ ಹೊತ್ತು ಹಲವಾರು ಆಕಾಶಕಾಯಗಳನ್ನು ನೋಡುತ್ತೇವೆ. ಅವುಗಳಲ್ಲಿ ಕೆಲವು ಪ್ರಮುಖ ಆಕಾಶಕಾಯಗಳು ಯಾವುವು?  ಅವುಗಳ ಲಕ್ಷಣಗಳೇನು ? ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯೋಣ.









    ಸೂರ್ಯ

    ಸೂರ್ಯ ಮತ್ತು ಅವನ ಪರಿವಾರವನ್ನು ಸೌರವ್ಯೂಹ ಎಂದು ಕರೆಯುವರು.

  ಪರಿವಾರ ಅಂದರೆ ಗ್ರಹಗಳು, ಉಪಗ್ರಹಗಳು, ಸಾವಿರಾರು ಕ್ಷುದ್ರಗ್ರಹಗಳು, ಉಲ್ಕೆಗಳು ಮತ್ತು ಧೂಮಕೇತುಗಳಿವೆ.











ಸೂರ್ಯ ಒಂದು ನಕ್ಷತ್ರ. ಇತರೆ ನಕ್ಷತ್ರಗಳಿಗಿಂತ ಭೂಮಿಗೆ ಹತ್ತಿರದಲ್ಲಿ ಇರುವುದರಿಂದ ಬೇರೆ ಎಲ್ಲಾ ನಕ್ಷತ್ರಗಳಿಗಿಂತಲೂ ಪ್ರಕಾಶಮಾನವಾಗಿ ಹಾಗೂ ದೊಡ್ಡದಾಗಿ ಕಾಣುತ್ತದೆ. 

ಸೂರ್ಯ ಸೌರವ್ಯೂಹದ ಕೇಂದ್ರಬಿಂದು. 

ಸೂರ್ಯನ ಗುರುತ್ವಾಕರ್ಷಣೆಗೆ ಒಳಪಟ್ಟು ಇತರೆ ಆಕಾಶಕಾಯಗಳು ಸೂರ್ಯನ ಸುತ್ತ ಸುತ್ತುತ್ತವೆ.

ಭೂಮಿಗೆ ಬೆಳಕು ಹಾಗೂ ಶಾಖವನ್ನು ಸೂರ್ಯ ನೀಡುತ್ತಾನೆ.