ಸಾಹಿತ್ಯ:-ಕನಕದಾಸರು
ಗಾಯನ:-ಪುತ್ತೂರು ನರಸಿಂಹ ನಾಯಕ್
ಏಸು ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷ
ಜೀವ ರಾಶಿಯನ್ನು ದಾಟಿ ಬಂದ ಈ ಶರೀರ ||
ತಾನಲ್ಲ ತನ್ನದಲ್ಲ ಆಸೆ ತರವಲ್ಲ , ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು ||
ಆಶ ಕ್ಲೇಶ ದೋಷವೆಂಬ ಅಬ್ಬಿಯೊಳು ಮುಳುಗಿ
ಯಮನ ಪಾಶಕ್ಕೊಳಗಾಗದೆ ನಿರ್ದೋಶಿಯಾಗು ಸಂತೋಷಿಯಾಗು||
ಕಾಶಿ ವಾರಾಣಸಿ ಕಂಚಿ ಕಾಳಹಸ್ತಿ ರಮೇಶ್ವರ
ಎಸು ದೇಶ ತಿರುಗಿದರು ಬಾಹೂದೇನೂ ಅಲ್ಲಿ ಹೋದೆನು ||
ದೂಷನಾಶ ಕೃಷ್ಣವೇಣಿ ಗಂಗೆ ಗೋದಾವರಿ ಭವ
ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ ||
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ
ಎಸು ಬಾರಿ ಮಾಡಿದರು ಫಲವೇನು ಈ ಛಲವೇನು ||ದಾಸ||
ಅಂದಿಗೊ ಇಂದಿಗೊ ಒಮ್ಮೆ ಸಿರಿ ಕಮಲೇಶನ್ನನ್ನು
ಒಂದು ಬಾರಿಯಾರು ಹಿಂದ ನೆನೆಯಲಿಲ್ಲ ಮನ ದಣಿಯಲಿಲ್ಲ ||
ಬಂದು ಬಂದು ಭ್ರಮೆಗೊಂಡು ಮಾಯಾ ಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ದ್ವಂದ್ವ ಕಳೆಯಲ್ಲಿಲ್ಲ ||
ಸಂದೇಹವ ಮಾಡಿದರು ಅರಿಯು ಎಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪೀoಡಾoಡ ಹಾಗೆ ಬ್ರಹ್ಮಾಂಡ ||
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
ಮುಕುಂದನೀಂದ ಮುಕ್ತಿ ಬೇಡುಕಂಡ್ಯ ನೀ ನೋಡುಕಂಡ್ಯ ||ದಾಸ||
ಮೂರುಬಾರಿ ಶರಣು ಮಾಡಿ ನೇರ ಮುಳುಗಲ್ಲ್ಯಾಕೆ
ಪರನರಿಯರ ನೋಟಕೆ ಗುರಿಯ ಮಾಡಿದಿ ಮನ ಸೆಳೆಯ ಮಾಡಿದಿ ||
ಸುರೆಯೋಳು ಸುರೆ ತುಂಬಿ ಮೇಲೆ ಹೂವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ||
ಗಾರುಡಿಯ ಮಾತ ಬಿಟ್ಟು ನಾದ ಬ್ರಹ್ಮನ ಪಿಡಿದು
ಸಾರಿ ಸುರಿ ಮುಕ್ತಿಯನ್ನು ಶಮನದಿಂದ ಮತ್ತೆ ಸಮನದಿಂದ ||
ನಾರಾಯಣ ಅಚುತ್ಯ ಅನಂತಾದಿ ಕೇಶವನ
ಸಾರಮೃತವನ್ನು ಉಂಡು ಸುಖಿಸೋ ಲಂಡ ಜೀವವೇ ಎಲೋ ಭಂಡ ಜೀವವೇ ||ದಾಸ||
*