ಸಾಹಿತ್ಯ:-ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ/ಗಾಯನ:-ಶಿವಮೊಗ್ಗ ಸುಬ್ಬಣ್ಣ
ಕಾಣಬಹುದು ಹೇಗೆ ನಿನ್ನ
ಕರೆಯಬಹುದು ಹೇಗೆ
ಯಾವ ಎಲ್ಲೆ ಇರದ ನಿನ್ನ
ಅರಿಯಬಹುದು ಹೇಗೆ ||
ಹಗಲು ನಗಲು ಬೆಳಕ ಚೆಲ್ಲಿ
ದೃಷ್ಟಿ ಕೊಡುವ ದಿವ್ಯವೇ
ಇರುಳಿನಲ್ಲಿ ನೀಲನಭರಿ
ದೀಪ ಉರಿವ ಕರುಣೆಯೇ
ಮಳೆ ಬಿಸಿಲಿನ ಹೊಳೆ ಉಸಿರಿನ
ಪಾದದಲ್ಲಿ ಚಲಿಸಿ ಉದಯಾಸ್ತದ
ಹೊನ್ನ ಬಣ್ಣದಲ್ಲಿ ಪುಟಿವ ಭಾಗ್ಯವೇ ||
ಎದೆಯಲೆಲ್ಲೋ ಹೊಳೆದು ತುಟಿಯ ತುದಿಗೆ ಬರದೆ ನಿಲುವೇ
ಬಳಿಯೆ ನಿಂತು ಸಿಗದೆ ನನ್ನ
ಹಂಗಿಸುತ್ತ ನಗುವೇ
ನಿನ್ನ ಹೊರೆತು ಬಾಳೆಲ್ಲವು
ಬರಿದೂ ಎಂದೆನಿಸುವೆ
ಜೀವನದಿ ನೀಡು ಯಾತ್ರೆಗೆ
ಅಂತಿಮ ಗುರಿ ಎನಿಸಿಹೇ ||