ಸುಗ್ಗಿ ಮಾಡೋಣುಬಾರವ್ವ ಗೆಳತಿ - ಶಿಶುನಾಳ ಶರೀಪರು


ಸಾಹಿತ್ಯ:-ಸಂತ ಶಿಶುನಾಳ ಶರೀಫ*

ಸಂಗೀತ:-ಸಿ. ಅಶ್ವಥ್

ಗಾಯನ:-ಸಮೂಹ ಗಾಯನ


ಸುಗ್ಗಿ ಮಾಡೋಣು ಬಾರವ್ವ ಗೆಳತಿ

ಸುಮ್ಮನ್ಯಾಕ ಕುಳತಿ || ಪ ||

ಅಗ್ಗದ ಫಲಗಳ ಕೊಯ್ಯಲಿಕ್ಕೆ ಹೊಲದೊಳು ಹೊಗ್ಗಿಲಿ ಕರೆದರ ಹಿಗ್ಗೀಲಿ ಹೋಗಿ ||ಅ.ಪ.||


ಹೊಲದವ ಕರೆದರೆ ಹೋಗಲಿಬೇಕು

ನೆಲೆಯನು ತಿಳಿಯಬೇಕು

ಕುಲದವರೊಂದು ಸಲಗಿಯ ಸಾಕು

ಬಲು ಜೋಕಿರಬೇಕು

ಹೊಲದೊಳು ಬೆಳದಿಹ ಹುಳ್ಳಿ ಮಿಕ್ಕಿ ಕಸ

ತಳದ ಕೋಲಿಯ ದಾಟಿ ಕೊಯ್ಯೋಣ ಗೆಳತಿ ||೧ ||


ಏಳೆಂಟು ಅಕ್ಕಡಿಯ ಎಣಿಸಿ

ನಮ್ಮ ಬಾಳನು ಅದರೊಳು ದಣಿಸಿ

ಕಾಳಕೂಟ ವಿಷ ಎಣಿಸಿ ದಂಟಿನ

ಸೋಲಗರೆಲ್ಲವ ಗಳಿಸಿ 

ಬಾಳಿನ ರಾಗಿ ನವಣಿ ಸಜ್ಜಿಯ

ಓಲ್ಯಾಡುತ ಬಹು ರಾಗದಿ ಕೊಯ್ಯುತ ||೨||


ಶಿಶುನಾಳಧೀಶನೆ ಗುರುವೂ  ಅವ

ಕರೆದಲ್ಲಿ ಹೋಗೋದು ತರವೂ

ಕಸವ ಕಳೆದು ಕೈ ಕುಡಗೋಲ ಹಿಡಿಯುತ

ಹಸನಾಗಿ ಹಲವರ ಹರಿವ ಮನವ ಸುಟ್ಟು ||೩||