ಚೆಲುವಿನ ಗೀತೆ ಉಲಿದಿದೆ ಕೋಗಿಲೆ - ದೊಡ್ಡರಂಗೇಗೌಡ


ಸಾಹಿತ್ಯ:-ಡಾ||ದೊಡ್ಡರಂಗೇಗೌಡ

ಸಂಗೀತ:-ಇಂದೂ ವಿಶ್ವನಾಥ

ಗಾಯನ:-ಶೃತಿ ಜಿ ರಾವ್&ಪೂಜಾ ರಾವ್



ಚೆಲುವಿನ ಗೀತೆ ಉಲಿದಿದೆ ಕೋಗಿಲೆ

ನಗೆಯನು ಬೀರಿ ನಲಿದಳು ಶ್ಯಾಮಲೆ ||


ಬಣ್ಣದಾ ಉಡುಗೆಯಲಿ ಹೂಗಳ ತೊಡುಗೆಯಲಿ

ದುಂಬಿಯಾ ರಾಗದಲಿ ಅಬ್ಬೆಯ ತಾನದಲಿ

ಹಿಗ್ಗುತಾ ಮೆರೆದಳು               

ರೂಪಸಿ ಧಾರಿಣಿ ||


ತರುಲತೆ ಬಳುಕುತಲಿ ಲಾಸ್ಯವೇ ಮೈದುಂಬಿ

ಸೊಬಗಿನಾ ಕಣಿವೆ ಸಿರಿ ನೋಟವೇ ಕಣ್ತುಂಬಿ

ಮೂಡಣಾ ನೇಸರು ಬೆಳಕಾಗಿ ಅರಳಿ

ತಂಪಿನ ಕಂಪಿನ ರಸಗಂಧ ತೇಲಿ ||


ಗೊಂಚಕ್ಕೆ ಹಾರಿ ಹಾರಿ ರಮ್ಯ ಚೈತ್ರ ಬರೆದಾಗ

ಬಾನಲಿ ಮೋಡ ತೇಲಿ ನವ್ಯರೂಪ ಕಂಡಾಗ

ಹಿಗ್ಗುತಾ ಮೆರೆದಳು ರೂಪಸಿ ಧಾರಿಣಿ ||