ಗೋವಾದಲ್ಲಿ 10 ನೇ ಶತಮಾನದ ಕನ್ನಡ ಶಾಸನ ಪತ್ತೆ.

 

ದಕ್ಷಿಣ ಗೋವಾದಲ್ಲಿ 10ನೇ ಶತಮಾನದ ಕನ್ನಡ ಶಾಸನ ಪತ್ತೆ.





      ದಕ್ಷಿಣ ಗೋವಾದ ಕಾಕೋಡಾದ ಮಹಾದೇವ ಮಂದಿರದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರೆಯಲಾದ ಅಪರೂಪದ ಶಿಲಾಶಾಸನವು ಪತ್ತೆಯಾಗಿದೆ ಎಂದು ಉಡುಪಿಯ ಮಾಜಿ ಇತಿಹಾಸ ಸಹಾಯಕ ಪ್ರೊಫೆಸರ್ ಟಿ.ಮುರುಗೇರಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







ಶಾಸನದ ಅಧ್ಯಯನವನ್ನು ನಡೆಸಿರುವ ಮಾಜಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರಸಹಾಯಕ ಪ್ರಾಧ್ಯಾಪಕ ಪ್ರೊ.ಮುರುಗೇಶಿ,10ನೇ ಶತಮಾನದ ಕನ್ನಡ ಮತ್ತು ನಾಗರಿ ಲಿಪಿಗಳಲ್ಲಿ ಅಕ್ಷರಗಳನ್ನು ಕೆತ್ತಲಾಗಿದ್ದು, ಶಾಸನವು ಗೋವಾದ ಕದಂಬರಿಗೆ ಸೇರಿದ್ದಾಗಿದೆ ಎಂದು ಹೇಳಿದ್ದಾರೆ. 'ಸ್ವಸ್ತಿ ಶ್ರೀ' ಎಂಬ ಶುಭಪದದೊಂದಿಗೆ ಆರಂಭಗೊಂಡಿರುವ ಶಾಸನದಲ್ಲಿ ತಳರ ನೇವಯ್ಯ ಮಂಡಲಾಧೀಶನಾಗಿದ್ದಾಗ ಗೋವಾದ ಬಂದರು ಗೋಪುರವನ್ನು ವಶಪಡಿಸಿಕೊಳ್ಳುವ ಆತನ ಇಚ್ಛೆಯನ್ನು ಈಡೇರಿಸಲು ಪಣ ತೊಟ್ಟಿದ್ದ ಪುತ್ರ ಗುಂಡಯ್ಯ ಕಾದಾಡಿದ್ದ ಮತ್ತು ತಂದೆಯ ಇಚ್ಛೆಯನ್ನು ಪೂರೈಸಿದ ಬಳಿಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ದಾಖಲೆಯನ್ನು ತನ್ನ ಪುತ್ರನ ನಿಧನದ ಸಂದರ್ಭದಲ್ಲಿ ದುಃಖತಪ್ತ ತಂದೆಯ ಮೌಖಿಕ ಹೇಳಿಕೆಯ ರೂಪದಲ್ಲಿ ಸಂಯೋಜಿಸಲಾಗಿದೆ. ಮತ್ತು ಅದೇ ಕಾಲದ ಒಂದನೇ ಜಯಸಿಂಹನ ತಳಂಗೆ ಶಾಸನದ ಸಾಹಿತ್ಯಕ ಶೈಲಿಯಲ್ಲಿದೆ ಎಂದು ಮುರುಗೇಶಿ ತಿಳಿಸಿದರು. ಗೋವಾದ ಕದಂಬರು ಕಲ್ಯಾಣದ ಚಾಲುಕ್ಯರ ಅಧೀನರಾಗಿದ್ದರು. ಚಾಲುಕ್ಯ ಚಕ್ರವರ್ತಿ ಎರಡನೇ ತೈಲಪ ರಾಷ್ಟ್ರಕೂಟರನ್ನು ಸೋಲಿಸಲು ನೆರವಾಗಿದ್ದ ಕದಂಬ ಷಷ್ಠದೇವನನ್ನು ಗೋವಾದ ಮಹಾಮಂಡಲಾಧೀಶ್ವರನನ್ನಾಗಿ ನೇಮಕಗೊಳಿಸಿದ್ದ. ಕದಂಬ ಷದೇವನು ಕ್ರಿ.ಶ.960ರಲ್ಲಿ ಶಿಲಾಹರಗಳಿಂದ ಚಂದಾವರ ಪಟ್ಟಣವನ್ನು ಗೆದ್ದುಕೊಂಡಿದ್ದ ಬಳಿಕ ಆತ ಗೋಪಕಪಟ್ಟಣ ಬಂದರನ್ನು (ಈಗಿನ ಗೋವಾ)ಜಯಿಸಿದ್ದ ಬಹುಶಃ ಈ ಯುದ್ಧದಲ್ಲಿ ತಳರ ನೇವಯ್ಯನ ಪತ್ರ ಗುಂಡಯ್ಯ ಭಾಗವಹಿಸಿದ್ದ ಮತ್ತು ತನ್ನ ಪ್ರಾಣವನ್ನು ಬಲಿ ನೀಡಿ ಬಂದರನ್ನು ಗೆದ್ದುಕೊಂಡಿದ್ದ ಆತನ ತಂದೆ ತನ್ನ ಪುತ್ರನ ಧೀರೋದ್ಧಾತ ಹೋರಾಟದ ಸ್ಮರಣಾರ್ಥ ಕಾಕೋಡಾದ ಮಹಾದೇವ ಮಂದಿರದ ಆವರಣದಲ್ಲಿಶಿಲಾ ಶಾಸನವನ್ನು ಸ್ಥಾಪಿಸಿದ್ದ ಎಂದು ಮುರುಗೇಶಿ ಹೇಳಿಕೆಯಲ್ಲಿ ವಿವರಿಸಿದ್ದಾರೆ.