ಕೇಂದ್ರೀಯ ವಿ.ವಿ. ಪ್ರವೇಶಕ್ಕೆ ಅರ್ಜಿ ಆಹ್ವಾನ..




            ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ 2024-25ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

              ಎಂ.ಎ, ಎಂ.ಕಾಂ, ಎಂ.ಬಿ.ಎ,ಎಂ.ಎಸ್‌ಸಿ, ಎಂ.ಸಿ.ಎ, ಎಂ.ಟೆಕ್,ಎಲ್.ಎಲ್.ಎಂ, ಬಿ.ಇಡಿ, ಎಂ.ಇಡಿ,ಎಂ.ಪಿ,ಎ,ಮಾಸ್ಟರ್ ಆಫ್ ವಿಶ್ಯುವಲ್ ಆರ್ಟ್ಸ್ ಸೇರಿದಂತೆ ಒಟ್ಟು 29 ಕೋರ್ಸ್‌ಗಳ ಪ್ರವೇಶಕ್ಕಾಗಿ ಮಾ.11ರಿಂದ ಮಾ.28ರವರೆಗೆ ಪ್ರವೇಶ ಪರೀಕ್ಷೆ ನಡೆಯಲಿದೆ.ಪದವಿ ಪೂರ್ಣಗೊಳಿಸಿದವರು ಮತ್ತು ಪದವಿಯ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇದೇ 26ರಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, 2024ರ ಜ.24ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಜ.25 ಶುಲ್ಕ ಪಾವತಿಗೆ ಕೊನೆಯ ದಿನ. ಅರ್ಜಿಯಲ್ಲಿ ತಿದ್ದು ಪಡಿಯಿದ್ದರೆ ಜ.27ರಿಂದ 29ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಪರೀಕ್ಷೆಯ ಅವಧಿ 1 ಗಂಟೆ 45 ನಿಮಿಷ ಇದ್ದು, ರಾಜ್ಯದ 19 ಕೇಂದ್ರಗಳಲ್ಲಿ ನಿತ್ಯ ಮೂರು ಶಿಫ್ಟ್‌ಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು, ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರಲಿವೆ. ಫಲಿತಾಂಶವನ್ನು NTA ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

ಅರ್ಜಿಗಳನ್ನು 

https://pgcuet.samarth.ac.in 

ವೆಬ್‌ಸೈಟ್ ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 01140759000 ಸಹಾಯವಾಣಿ ಅಥವಾ NTA at cuet-pg@nta.ac.in ಸಂಪರ್ಕಿಸಬಹುದು.