2024 holidays and RH's


       ಬೆಂಗಳೂರು, ನ.22: ರಾಜ್ಯ ಸರಕಾರವು 2024ನೇ ಸಾಲಿಗೆ ಸಂಬಂಧಿಸಿದಂತೆ ಒಟ್ಟು 21 ಸಾರ್ವತ್ರಿಕ ರಜೆಗಳ ಪಟ್ಟಿಯನ್ನು ಶೀಘ್ರದಲ್ಲೇ ಘೋಷಿಸಲಿದೆ. ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ನೀಡಿರುವ ಪಟ್ಟಿಯನ್ನಾಧರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಚಿವ ಸಂಪುಟದ ಅನುಮೋದನೆಗೆ ಪ್ರಸ್ತಾವ ಸಲ್ಲಿಸಿದೆ.

     


      ಸಚಿವ ಸಂಪುಟಕ್ಕೆ ಮಂಡಿಸಿರುವ ಪ್ರಸ್ತಾವನೆಯು (ಸಿಆಸುಇ 16 ಎಚ್ ಎಚ್ ಎಲ್ 2023, ವಿಷಯ Zoad, 539/2023) 'the-file.in't end.

ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆಗಮ ಪಂಡಿತರೊಂದಿಗೆ ಸಮಾಲೋಚಿಸಿ 2024ನೇ ಸಾಲಿನಲ್ಲಿ ಸಾರ್ವತ್ರಿಕ ರಜೆ ಮತ್ತು ಪರಿಮಿತ ರಜೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.       ಈ ಪಟ್ಟಿಯನ್ನು ಘೋಷಿಸುವ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವುದು ಗೊತ್ತಾಗಿದೆ.

          ಧಾರ್ಮಿಕ ದತ್ತಿ ಆಯುಕ್ತರು ಪ್ರಸ್ತಾವಿಸಿರುವ ಪ್ರಕಾರ 2024ನೇ ಸಾಲಿನ ಸಾರ್ವತ್ರಿಕ ರಜಾ  ದಿನಗಳ ಪಟ್ಟಿಯು ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ರವಿವಾರಗಳನ್ನು ಹೊರತುಪಡಿಸಿ 21 ಸಾರ್ವತ್ರಿಕ ರಜಾ ದಿನಗಳನ್ನು ಒಳಗೊಂಡಿದೆ. ಹಾಗೂ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ರವಿವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಇರುವ ಹಬ್ಬಗಳನ್ನು ಹೊರತುಪಡಿಸಿ 15 ಪರಿಮಿತ ರಜೆ ದಿನಗಳ ಪ್ರಸ್ತಾವವನ್ನು ಒಳಗೊಂಡಿದೆ.   ಇವುಗಳಲ್ಲಿ ಒಬ್ಬ ಸರಕಾರಿ ನೌಕರ/ಅಧಿಕಾರಿಯು ಪ್ರಸಕ್ತ ವರ್ಷದಲ್ಲಿ 02 ಪರಿಮಿತ ರಜೆಗಳನ್ನು ಉಪಯೋಗಿ ಸಿಕೊಳ್ಳಬಹುದು ಎಂದು ಪ್ರಸ್ತಾವದಲ್ಲಿ ತಿಳಿಸಿದೆ. 

     ಮುಸ್ಲಿಮರ ಹಬ್ಬಗಳ ಆಚರಣೆ ಕುರಿತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಇದೇ ಪ್ರಸ್ತಾವದಲ್ಲಿ ವಿವರಿಸಿದ್ದಾರೆ.

       ರಜೆ ದಿನಾಂಕಗಳ ಬಗ್ಗೆ ಕರ್ನಾಟಕ ವಕ್ಸ್ ಮಂಡಳಿಯೊಂದಿಗೆ ಆಯುಕ್ತರು ಸಮಾಲೋಚಿಸಿದ್ದಾರೆ. ಆದರೆ, ಪರಿಮಿತ ರಜೆಗಳಲ್ಲಿ 2024ರ ಫೆ.26ರಂದು ನಿಗದಿಯಾಗಿದ್ದ ಶಬ್-ಎ ಬರಾತ್ ಹಬ್ಬವನ್ನು 2024ರ ಫೆ.25 ಮತ್ತು 2024ರ ಏಪ್ರಿಲ್ 7ರಂದು ನಿಗದಿಯಾಗಿದ್ದ ಶಬ್-ಎ-ಖದ್ರನ್ನು 2024ರ ಎಪ್ರಿಲ್ 6ರಂದು ವಕ್ಸ್ ಮಂಡಳಿಯು ನಿಗದಿ ಮಾಡಿರುವುದು ಗೊತ್ತಾಗಿದೆ.

     

        ಸಾರ್ವತ್ರಿಕ ರಜಾ ದಿನಗಳ ಪಟ್ಟಿ

* 2024ರ ಜನವರಿ 15 ಸೋಮವಾರ ಉತ್ತರಾಯಣ ಮಕರ ಸಂಕ್ರಾಂತಿ


* 2024ರ ಜನವರಿ 26 ಶುಕ್ರವಾರ ಗಣ ರಾಜ್ಯೋತ್ಸವ 


*2024ರ ಮಾರ್ಚ್ 8 ಶುಕ್ರವಾರ ಮಹಾಶಿವರಾತ್ರಿ 


*2024ರ ಮಾರ್ಚ್ 29ರ ಶುಕ್ರವಾರ ಗುಡ್ ಫ್ರೆಡೇ 


*2024ರ ಎಪ್ರಿಲ್ 9 ಮಂಗಳವಾರ ಯುಗಾದಿ 


* 2024ರ ಎಪ್ರಿಲ್ 11ರ ಗುರುವಾರ ಋತುವ್ ಎ ರಮ್ಜಾನ್


* 2024ರ ಮೇ 1 ಬುಧವಾರ ಮೇ ದಿನ


* 2024ರ ಮೇ 10 ಬಸವ ಜಯಂತಿ/ಅಕ್ಷಯತೃತೀಯ


* 2024ರ ಜೂನ್ 17 ಸೋಮವಾರ ಬಕ್ರೀದ್


* 2024ರ ಜುಲೈ 17ರ ಬುಧವಾರ ಮೊಹರಮ್  ಕೊನೆಯ ದಿನ


* 2024ರ ಆಗಸ್ಟ್ 15ರ ಗುರುವಾರ ಸ್ವಾತಂತ್ರೋತ್ಸವ ದಿನಾಚರಣೆ


* 2024ರ ಸೆಪ್ಟೆಂಬರ್ 7 ಶನಿವಾರ ವರಸಿದ್ಧಿವಿನಾಯಕ ಚತುರ್ಥಿ


* 2024ರ ಸೆಪ್ಟೆಂಬರ್ 16 ಸೋಮವಾರ ಈದ್ಮಿಲಾದ್


* 2024ರ ಅಕ್ಟೋಬರ್ 2 ಬುಧವಾರ ಗಾಂಧಿ ಜಯಂತಿ/ಮಹಾಲಯ ಅಮಾವಾಸ್ಯೆ


* 2024ರ ಅಕ್ಟೋಬರ್11 ಶುಕ್ರವಾರ ಮಹಾನವಮಿ/ ಆಯುಧ ಪೂಜೆ


* 2024ರ ಅಕ್ಟೋಬರ್ 17 ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ


* 2024ರ ಅಕ್ಟೋಬರ್ 31 ಗುರುವಾರ ನರಕ ಚತುರ್ದಶಿ


* 2024ರ ನವೆಂಬರ್ 1 ಶುಕ್ರವಾರ ಕನ್ನಡ

ರಾಜ್ಯೋತ್ಸವ


* 2024ರ ನವೆಂಬರ್ 2 ಶನಿವಾರ ಬಲಿ ಪಾಡ್ಯಮಿ ದೀಪಾವಳಿ‌.


* 2024ರ ನವೆಂಬರ್ 18ರ ಸೋಮವಾರ ಕನಕದಾಸ ಜಯಂತಿ


* 2024ರ ಡಿಸೆಂಬರ್ 25 ಬುಧವಾರ ಕ್ರಿಸ್ಮಸ್



ಪರಿಮಿತ ರಜಾ ದಿನಗಳ ಪಟ್ಟಿ

* 2024ರ ಜನವರಿ 1ರಂದು

ನೂತನ ವರ್ಷಾರಂಭ..


* 2024ರ ಮಾರ್ಚ್ 25ರ

ಸೋಮವಾರದಂದು ಹೋಳಿಹಬ್ಬ...


* 2024ರ ಮಾರ್ಚ್ 30 ಶನಿವಾರ

ಹೋಲಿ ಸ್ಯಾಟರ್ ಡೇ....


* 2024ರ ಎಪ್ರಿಲ್ 5ರ ಶುಕ್ರವಾರ

ಜುಮತ್-ಉಲ್-ಪಿಧಾ....


* 2024ರ ಏಪ್ರಿಲ್ 6ರ ಶನಿವಾರ ಶಬ್-ಎ-ಖದ್....


* 2024ರ ಏಪ್ರಿಲ್ 17ರ

ಬುಧವಾರ ಶ್ರೀ ರಾಮನವಮಿ....


* 2024ರ ಮೇ 23ರ ಗುರುವಾರ ಬುದ್ಧ ಪೂರ್ಣಿಮ ...


* 2024ರ ಆಗಸ್ಟ್ 16ರ ಶುಕ್ರವಾರ ವರ ಮಹಾಲಕ್ಷ್ಮೀ ಹಬ್ಬ ...


* 2024ರ ಆಗಸ್ಟ್ 19ರ

ಸೋಮವಾರ ಋಗ್ ಉಪರ್ಕ,

ಯಜುರ್ ಉಪ ಕರ್ಮ...,


* 2024ರ ಆಗಸ್ಟ್ 20ರ ಮಂಗಳವಾರ ಬ್ರಹ್ಮಶ್ರೀ ನಾರಾಯಣಗುರು ಜಯಂತಿ...


* 2024ರ ಆಗಸ್ಟ್ 26ರ ಸೋಮವಾರ ಶ್ರೀ ಕೃಷ್ಣಜನಾಷ್ಟಮಿ .....


* 2024ರ ಸೆಪ್ಟೆಂಬರ್ 6ರ ಶುಕ್ರವಾರ ಸ್ವರ್ಣ ಗೌರಿ ವ್ರತ ....


* 2024ರ ಸೆಪ್ಟೆಂಬರ್ 17ರ ಮಂಗಳವಾರ ವಿಶ್ವಕರ್ಮಜಯಂತಿ......


* 2024ರ ನವೆಂಬರ್ 15ರ

ಶುಕ್ರವಾರ ಗುರು ನಾನಕ್ ಜಯಂತಿ....


* 2024ರ ಡಿಸೆಂಬರ್ 24 ರ

ಮಂಗಳವಾರ ಕ್ರಿಸ್ಮಸ್ ಈವ್...